ಸೆಮಿ ಫೈನಲ್ ತಲುಪಿದ ಕರ್ನಾಟಕ

0
236
ಸ್ಪೋರ್ಟ್ಸ್ ಮೇಲ್ ವರದಿ

ತಮಿಳುನಾಡು ಹಾಕಿ ತಂಡವನ್ನು  8-1 ಗೋಲುಗಳ ಅಂತರದಲ್ಲಿ ಮಣಿಸಿದ ಕರ್ನಾಟಕ ಹಾಕಿ ತಂಡ  5 ಎ  ಸೈಡ್ ರಾಷ್ಟ್ರೀಯ ಹಾಕಿ ಚಾಂಪಿಯನ್ ಶಿಪ್ ನಲ್ಲಿ  ಪುರುಷರ ವಿಭಾಗದಲ್ಲಿ ಸೆಮಿ ಫೈನಲ್ ತಲುಪಿದೆ.

ಮೊಹಮ್ಮದ್ ರಹೀಲ್ ಮೌಸೀನ್ ( 10,13,17,18ನೇ ನಿಮಿಷಗಳಲ್ಲಿ ಗೋಲ್ ಗಳಿಸಿ ಜಯದ ರೂವಾರಿ ಎನಿಸಿದರು.

ಪೃಥ್ವಿ ರಾಜ್, ಲಿಖಿತ್, ಕೆ ಪಿ ಸೋಮಯ್ಯ  ತಲಾ  ಒಂದು ಗೋಲು ಗಳಿಸಿ ಜಯದ ಅಂತರವನ್ನು ಹೆಚ್ಚಿಸಿದರು. ಶನಿವಾರ ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಒಡಿಶಾ ವಿರುದ್ಧ  ಫೈನಲ್ ಸ್ಥಾನಕ್ಕಾಗಿ ಸೆಣಸಲಿದೆ.
ದಿನದ ಎರಡನೇ ಸೆಮೈಫ್ ಫೈನಲ್ ನಲ್ಲಿ  ಒಡಿಶಾ ತಂಡ ಶೂಟ್ ಔಟ್ ನಲ್ಲಿ  2-0  ಗೋಲುಗಳ ಅಂತರದಲ್ಲಿ ಜಯ ಗಳಿಸಿ ಸೆಮಿಫೈನಲ್  ಪ್ರವೇಶಿಸಿತು. ಇತ್ತಂಡಗಳು ನಿಗದಿತ ಅವಧಿಯಲ್ಲಿ 4-4  ಗೋಳುಗಳಿಂದ ಸಮಬಲ ಸಾಧಿಸಿದ್ದವು. ದಿನದ ಮೂರನೇ ಪಂದ್ಯದಲ್ಲಿ  ಪಂಜಾಬ್ ತಂಡ 3-5 ಗೋಲುಗಳ ಅಂತರದಲ್ಲಿ  ಮಹಾರಾಷ್ಟ್ರ ವಿರುದ್ಧ ಸೋಲನುಭವಿಸಿತು.  ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ  ಹರಿಯಾಣ ತಂಡ ಜಾರ್ಖಂಡ್ ವಿರುದ್ಧ 5=3 ಗೋಲು ಗಳಿಂದ ಜಯಗಳಿಸಿ ಸೆಮಿಫೈನಲ್ ಪ್ರವೇಶಿಸಿತು