Sunday, September 8, 2024

ಸುರಾನಾ ಕಾಲೇಜಿಗೆ ಚಾಂಪಿಯನ್ ಪಟ್ಟ

ಸ್ಪೋರ್ಟ್ಸ್ ಮೇಲ್ ವರದಿ

ಬೆಂಗಳೂರು ವಿಶ್ವವಿದ್ಯಾನಿಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಸುರಾನಾ ಕಾಲೇಜು ತಂಡ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಬೆಂಗಳೂರಿನ  ಬಸವನಗುಡಿ ಅಕ್ವೆಟಿಕ್ ಕೇಂದ್ರದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಸುರಾನಾ ಕಾಲೇಜು ತಂಡ 108 ಅಂಕಗಳನ್ನು ಗಳಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ವೈಯಕ್ತಿಕ ವಿಭಾಗದಲ್ಲಿ ಸುರಾನಾ ಕಾಲೇಜಿನ ರೇಯಾನ್ ಮೆಕಾಯ್  10 ಚಿನ್ನ ಹಾಗೂ ಎರಡು ಕಂಚಿನ ಪದಕ ಗೆದ್ದು ಚಾಂಪಿಯನ್ ಪಟ್ಟ ಗೆದ್ದುಕೊಂಡರು. ಯಾಕೂಬ್ ಸಲೀಂ (2 ಚಿನ್ನ, 7 ಬೆಳ್ಳಿ ಹಾಗೂ 1 ಕಂಚು), ಎ.ಎಂ. ವೇದಾಂತ್ (2 ಚಿನ್ನ, 3 ಬೆಳ್ಳಿ ಹಾಗೂ 1 ಕಂಚು) ಸುರಾನಾ ಪರ ಅತಿ ಹೆಚ್ಚು ಪದಕ ಗೆದ್ದ ಸ್ಪರ್ಧಿಗಳು.
ಮಹಿಳೆಯರ ವಿಭಾಗದಲ್ಲಿ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳದ ಕಾರಣ ಕೆಲವು ಸ್ಪರ್ಧೆಗಳು ಮಾತ್ರ ನಡೆದವು. ಸೆ. 26 ರಿಂದ 29ರವರೆಗೆ ಜೈನ್ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಚಾಂಪಿಯನ್‌ಷಿಪ್‌ನಲ್ಲಿ ಸುರಾನಾ ಕಾಲೇಜಿನ ಚಾಂಪಿಯನ್ನರು ಬೆಂಗಳೂರು ವಿವಿಯನ್ನು ಪ್ರತಿನಿಧಿಸಲಿದ್ದಾರೆ.

ವಾಲಿಬಾಲ್ ಪ್ರಶಸ್ತಿ

ಇತ್ತೀಚಿಗೆ ನಡೆದ ಎಚ್‌ಎವಿ ಪದವಿ ಪೂರ್ವ ಅಂತರ್ ಕಾಲೇಜು ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಸುರಾನಾ ಕಾಲೇಜು ಪುರುಷರ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಸುರಾನಾ ಕಾಲೇಜು ತಂಡ ಆರ್‌ಎನ್‌ಎಸ್ ಪದವಿಪೂರ್ವ ಕಾಲೇಜು ತಂಡದ ವಿರುದ್ಧ 21-16,21-16 ಅಂತರದಲ್ಲಿ ಜಯ ಗಳಿಸಿತು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ  ಶೀತರ್ ಕಿರಣ್ ಅವರ ತರಬೇತಿಯಲ್ಲಿ ತಂಡ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರುತ್ತದೆ.

Related Articles