Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಬರೇ ಬೌಂಡರಿ, ಸಿಕ್ಸರ್‌ನಲ್ಲೇ 218 ರನ್‌ ಇದು ನಿತೀಶ್‌ ಆರ್ಯಾ ಸಾಧನೆ

ಪಾಂಡಿಚೇರಿ: ಕರ್ನಾಟಕದ ಯುವ ಆಟಗಾರ ನಿತೀಶ್‌ ಆರ್ಯಾ ಕೇರಳ ವಿರುದ್ಧದ ದಕ್ಷಿಣ ವಲಯ ಪಂದ್ಯದಲ್ಲಿ 302 ರನ್‌ ಗಳಿಸಿ ಅದ್ಭುತ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ ಕೇವಲ ಬೌಂಡರಿ (44) ಹಾಗೂ ಸಿಕ್ಸರ್‌ (7) ನಲ್ಲೇ ಅವರು 218 ರನ್‌ ಗಳಿಸಿರುವುದು ವಿಶೇಷ. Karnataka Nitish Arya hit 302 run against Kerala at South Zone U14 match

ನಿರಂತರವಾಗಿ ಉತ್ತಮ ಪ್ರದರ್ಶನ ತೋರುತ್ತಿರುವ ನಿತೀಶ್‌ ಆರ್ಯಾ ಅವರು (302 ರನ್‌) ತ್ರಿಶತಕ ದಾಖಲಿಸಿಯೂ ಕರ್ನಾಟಕ ತಂಡ ಕೇರಳ ವಿರುದ್ಧ ಇಲ್ಲಿನ ಸ್ಲಿಮ್ಸ್‌ ಕ್ರಿಕೆಟ್‌ ಅಂಗಣದಲ್ಲಿ ನಡೆದ 14 ವರ್ಷ ವಯೋಮಿತಿಯ ದಕ್ಷಿಣ ವಲಯ ಬಾಲಕರ ಟೂರ್ನಿಯ ಪಂದ್ಯದಲ್ಲಿ ಡ್ರಾ ಸಾಧಿಸಿದೆ,

223 ಎಎಸೆತಗಳನ್ನೆದುರಿಸಿದ ನಿತೀಶ್‌ ಆರ್ಯಾ 44 ಬೌಂಡರಿ ಹಾಗೂ 7 ಸಿಕ್ಸರ್‌‌ ನೆರವಿನಿಂದ 302 ರನ್‌ ಸಿಡಿಸಿ ಕರ್ನಾಟಕದ ಬೃಹತ್‌ ಮೊತ್ತಕ್ಕೆ ನೆರವಾದರು. ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ 78.1 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 479 ರನ್‌ ಗಳಿಸಿ ಡಿಕ್ಲೇರ್‌ ಘೋಷಿಸಿತ್ತು. ಆರ್‌. ರೋಹಿತ್‌ ರೆಡ್ಡಿ 127 ಎಸೆತಗಳನ್ನೆದುರಿಸಿ 10 ಬೌಂಡರಿ ನೆರವಿನಿಂದ 65 ರನ್‌ ಗಳಿಸಿದರು. ಶಿವರಾಜ್‌ ಅಜೇಯ 100* ರನ್‌ ಸಿಡಿಸಿ ಬೃಹತ್‌ ಮೊತ್ತಕ್ಕೆ ನೆರವಾದರು. ಶಿವರಾಜ್‌ 109 ಎಸೆತಗಳನ್ನೆದುರಿಸಿ 12 ಬೌಂಡರಿ ನೆರವಿನಿಂದ ಶತಕ ಪೂರ್ಣಗೊಳಸಿದರು. ಕೇರಳ ಪರ ಹೃತಿಕ್‌ ಹರಿದಾಸ್‌ ಹರೀಶ್‌ 85 ರನ್‌ಗೆ 2 ವಿಕೆಟ್‌ ಗಳಿಸಿದರು.

ಕೇರಳ ಕ್ರಿಕೆಟ್‌ ತಂಡ 90 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 328 ರನ್‌ ಗಳಿಸುವುದರೊಂದಿಗೆ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ವಿಶಾಲ್‌ ಜಾರ್ಜ್‌ 150 ರನ್‌ ಗಳಿಸಿ ಕೇರಳ ತಂಡದ ದಿಟ್ಟ ಸಲಾವಿಗೆ ನೆರವಾದರು. ವಿಶಾಲ್‌ 196 ಎಸೆತಗಳನ್ನೆದುರಿಸಿ 19 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 150 ರನ್‌ಗಳ ಉತ್ತಮ ಇನ್ನಿಂಗ್ಸ್‌ ಆಡಿದರು. ಅರ್ಜುನ್‌ ನಾಯರ್‌‌ 24, ಮೊಹಮ್ಮಸ್‌ ಫಾರೂಕಿ ಪಿಎಂ 30, ಹೃತಿಕ್‌ ಹರಿದಾಸ್‌‌ ಹರೀಶ್‌ 61* ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರು.


administrator