Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ರಾಹುಲ್‌ ಬಂದ್ರು ಆದರೆ ಮಯಾಂಕ್‌ ಆಡಿದ್ರು, ಕರ್ನಾಟಕ 267/5

 

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹರಿಯಾಣ ವಿರುದ್ಧದ ಪಂದ್ಯಕ್ಕೆ ಭಾರತ ತಂಡದ ಆಟಗಾರ ಕೆ.ಎಲ್.‌ ರಾಹುಲ್‌ ಬಂದು ಆತ್ಮವಿಶ್ವಾಸ ಹೆಚ್ಚಿಸುತ್ತಾರೆ ಎಂದು ಕಳೆದ ಕೆಲವು ದಿನಗಳಿಂದ ಸುದ್ದಿ ಹಬ್ಬಿತ್ತು. ಹಾಗೆಯೇ ರಾಹುಲ್‌ ಬಹಳ ವರ್ಷಗಳ ನಂತರ ರಣಜಿ ತಂಡವನ್ನು ಸೇರಿದ ಕಾರಣ ಯುವ ಆಟಗಾರರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ, ಆದರೆ ರನ್‌ ಹೆಚ್ಚಲಿಲ್ಲ. ಬರೇ 26 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಕರ್ನಾಟಕ ಮೊದಲ ದಿನದಂತ್ಯಕ್ಕೆ 5 ವಿಕೆಟ್‌ ನಷ್ಟಕ್ಕೆ 267 ರನ್‌ ಗಳಿಸಿದೆ. K L Rahul fail to impress in Ranji return Karnataka 267/5 in day one.

ನಾಯಕ ಮಯಾಂಕ್‌ ಅಗರ್ವಾಲ್‌ ಜವಾಬ್ದಾರಿಯುತ 91 ರನ್‌ ಗಳಿಸಿ ಶತಕದಿಂದ ವಂಚಿತರಾದರು. ಮನೆಯಂಗಣದಲ್ಲಿ ಆಡಿದ ಅನುಭವವನ್ನು ಅವರು ಮತ್ತೊಮ್ಮೆ ಉತ್ತಮ ರೀತಿಯಲ್ಲಿ ಬಳಸಿಕೊಂಡರು. 149 ಎಸೆತಗಳನ್ನೆದುರಿಸಿದ ಮಯಾಂಕ್‌ 8 ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ ಸವಾಲಿನ ಮೊತ್ತಕ್ಕೆ ನೆರವಾದರು. ಆರಂಭಿಕ ಆಟಗಾರ ಅನೀಶ್‌ ಕೆವಿ ಕೇವಲ 17 ರನ್‌ ಗಳಿಸಿ ಅನ್ಷುಲ್‌ ಕಾಂಬೋಜ್‌ಗೆ ವಿಕೆಟ್‌ ಒಪ್ಪಿಸಿದರು. 2020ರ ನಂತರ ಮೊದಲ ಬಾರಿಗೆ ರಣಜಿ ಆಡುತ್ತಿರುವ ರಾಹುಲ್‌ ಅವರ ಆಗಮನದಿಂದ ತಂಡ ಬೃಹತ್‌ ಮೊತ್ತ ಕಲೆ ಹಾಕುವ ನಿರೀಕ್ಷೆ ಹೊಂದಿತ್ತು. ಆದರೆ ರಾಹುಲ್‌ 37 ಎಸೆತಗಳನ್ನೆದುರಿಸಿ 4 ಬೌಂಡರಿ ನೆರವಿನಿಂದ 26 ರನ್‌ ಗಳಿಸಿ ಅನ್ಷುಲ್‌ ಕಾಂಬೋಜ್‌ಗೆ ವಿಕೆಟ್‌ ಒಪ್ಪಿಸಿದರು. ದೇವದತ್ತ ಪಡಿಕ್ಕಲ್‌ (44) ಹಾಗೂ ಮಯಾಂಕ್‌ ಅಗರ್ವಾಲ್‌ ಉತ್ತಮ ಜೊತೆಯಾಟವಾಡಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಸ್ಮರಣ್‌ 35 ರನ್‌ಗೆ ತೃಪ್ತಿಪಟ್ಟರು. ವಿಕೆಟ್‌ ಕೀಪರ್‌ ಕೆ.ಎಲ್‌ ಶ್ರೀಜಿತ್‌ (18*) ಹಾಗೂ ಯಶೋವರ್ಧನ್‌ ಪರಾಂತಪ್‌ (27*) ಕ್ರೀಸಿನಲ್ಲಿದ್ದು ನಾಳೆ ತಂಡಕ್ಕಾಗಿ ಬೃಹತ್‌ ಮೊತ್ತ ದಾಖಲಿಸುವ ಲಕ್ಷಣ ತೋರಿದ್ದಾರೆ.


administrator