Sunday, May 26, 2024

ಭಾರತಕ್ಕೆ ಶಾಕ್ ನೀಡಿದ ಇರಾನ್ 

 ಏಜೆನ್ಸೀಸ್ ಜಕಾರ್ತ

ಏಳು ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಸೆಮಿ ಫೈನಲ್ ಪಂದ್ಯದಲ್ಲಿ ಇರಾನ್ ವಿರುದ್ಧ ೨೭-೧೮ ಅಂತರದಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ.

ವಿಶ್ವ ಚಾಂಪಿಯನ್ ಭಾರತ ತಂಡದ ಈ ಹೀನಾಯ ಆಘಾತಕ್ಕೆ ಭಾರತೀಯ ಕಬಡ್ಡಿ ಫೆಡರೇಷನ್‌ನ ಆಯ್ಕೆ ಪ್ರಕ್ರಿಯೇ ಕಾರಣ ಎಂದರೆ ತಪ್ಪಾಗಲಾರದು. ಉತ್ತಮ ಆಟಗಾರರನ್ನು ಬದಿಗಿಟ್ಟು, ಅಧ್ಯಕ್ಷ ಜನಾರ್ಧನ್
ಘೆಲೋಟ್  ಅವರ ಆದೇಶದಂತೆ ತಂಡ ಆಯ್ಕೆ ಮಾಡಿರುವುದು ಇಂಥ ಹೀನಾಯ ಸೋಲಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಭಾರತ ಈಗಾ ಪಾಕಿಸ್ತಾನದೊಂದಿಗೆ ಕಂಚಿಗೆ ತೃಪ್ತಿಪಟ್ಟಿದೆ. ಇದೇ ಮೊದಲ ಬಾರಿಗೆ ಭಾರತ ಸೆಮಿಫೈನಲ್‌ನಲ್ಲಿ ಆಘಾತ ಅನುಭವಿಸಿದೆ.
೧೯೯೦ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಕಬಡ್ಡಿ ಸೇರ್ಪಡೆಯಾದಾಗಿನಿಂದ ಇದುವರೆಗಿನ ಎಲ್ಲ ಏಷ್ಯನ್ ಗೇಮ್ಸ್‌ಗಳಲ್ಲಿ ಕಬಡ್ಡಿಯಲ್ಲಿ ಚಿನ್ನ ಗೆದ್ದಿರುವ ಭಾರತ, ಈ ಬಾರಿ ಅನಿರೀಕ್ಷಿತ ಆಘಾತ ಕಂಡಿದೆ. ಗ್ರೂಪ್ ಹಂತದಲ್ಲಿ ಭಾರತ ದಕ್ಷಿಣ ಕೊರೆಯಾ ವಿರುದ್ಧ ಸೋಲನುಭವಿಸಿದ ನಂತರ ಎರಡನೇ ಸ್ಥಾನಕ್ಕೆ ಕುಸಿದಿತ್ತು.
ನಿತಿನ್ ತೋಮಾರ್ ಅವರಂಥ ಆಟಗಾರರನ್ನು ಹೊರಗಟ್ಟಿ ತಂಡವನ್ನು ಆಯ್ಕೆ ಮಾಡುತ್ತಾರೆಂದರೆ ಭಾರತೀಯ ಅಮೆಚೂರ್ ಕಬಡ್ಡಿ ಸಂಸ್ಥೆಯ ಆಯ್ಕೆ ಪ್ರಕ್ರಿಯೆ ಹೇಗಿದೆ ಎಂಬುದನ್ನು ಗಮನಿಸಬಹುದು. ಸೋಶಿಯಲ್ ಮೀಡಿಯಾಗಳಲ್ಲೂ ಆಯ್ಕೆಯ ಬಗ್ಗೆ ಸಾಕಷ್ಟು ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಿವೆ.

Related Articles