ಮುಂಬೈ:
ತೀವ್ರ ಕುತೂಹಲ ಕೆರಳಿಸಿದ್ದ ತಮಿಳ್ ತಲೈವಾಸ್ ಹಾಗೂ ಹರಿಯಾಣ ಸ್ಟೀಲರ್ಸ್ ತಂಡಗಳ ಕಾದಾಟ ಅಂತಿಮವಾಗಿ ಡ್ರಾನಲ್ಲಿ ಸಮಾಪ್ತಿಯಾಯಿತು.
ಇಲ್ಲಿನ ಸರ್ದಾರ್ ವಲ್ಲಭಾಯಿ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ವಿವೋ ಪ್ರೊ ಕಬಡ್ಡಿ ಲೀಗ್ 62ನೇ ಪಂದ್ಯ 32-32 ಸಮಬಲದೊಂದಿಗೆ ಡ್ರಾನಲ್ಲಿ ಅಂತ್ಯವಾಯಿತು. ಆ ಮೂಲಕ ಉಭಯ ತಂಡಗಳು ಅಂಕಗಳನ್ನು ಹಂಚಿಕೊಂಡವು.
ಹರಿಯಾಣ ಪರ ವಿಕಾಸ್ ಖಂಡೋಲಾ 14, ನವೀನ್ 5 ಹಾಗೂ ಕುಲ್ದೀಪ್ ಸಿಂಗ್ 3 ಅಂಕಗಳೊಂದಿಗೆ ಉತ್ತಮ ಆಟವಾಡಿದರು. ತಮಿಳ್ ತಲೈವಾಸ್ ಪರ ಸುಕೇಶ್ ಹೆಗ್ಡೆ 7, ಅಜಯ್ ಠಾಕೂರ್ 6 ಹಾಗೂ ಜಸ್ವೀರ್ ಮತ್ತು ಮಂಜೀತ್ ಚಿಲ್ಲರ್ ತಲಾ 4 ಅಂಕಗಳೊಂದಿಗೆ ಉತ್ತ ಪ್ರದರ್ಶನ ನೀಡಿದರು. ಆದರೆ, ಕೊನೆಯ ಕ್ಷಣದಲ್ಲಿ ಉಭಯ ತಂಡಗಳು ತೋರಿದ ಸಮಬಲ ಆಟದಿಂದಾಗಿ ಅಂತಿಮವಾಗಿ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು.