Saturday, July 27, 2024

ಮಂಗಳೂರು ವಿವಿಗೆ ಕಬಡ್ಡಿ ಚಾಂಪಿಯನ್ ಪಟ್ಟ

ಸ್ಪೋರ್ಟ್ಸ್ ಮೇಲ್ ವರದಿ

ದೇವನಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಮಹಿಳಾ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.

ಫೈನಲ್ ಪಂದ್ಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡ ಮದುರೈ ಕಾಮರಾಜ ವಿಶ್ವವಿದ್ಯಾನಿಲಯದ ವಿರುದ್ಧ 42-14 ಅಂಕಗಳ ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಸೆಮಿಫೈನಲ್ ಸೂಪರ್ ಲೀಗ್ ಪಂದ್ಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡ ಕೇರಳ ವಿರುದ್ಧ 33-19 ಅಂಕಗಳ ಅಂತರದಲ್ಲಿ ಜಯ ಗಳಿಸಿತ್ತು. ಟಿಎನ್‌ಪಿಇಎಸ್ ವಿಶ್ವವಿದ್ಯಾನಿಲಯ ಮದುರೈ ಕಾಮರಾಜ ವಿಶ್ವವಿದ್ಯಾನಿಲಯದ ವಿರುದ್ಧ 21-18 ಅಂತರದಲ್ಲಿ ಜಯ ಗಳಿಸಿತ್ತು. ಕೇರಳ ವಿಶ್ವವಿದ್ಯಾನಿಲಯ ಮದುರೈ ಕಾಮಕಾರ ವಿಶ್ವವಿದ್ಯಾನಿಲಯದ ವಿರುದ್ಧ  28-18 ಅಂತರದಲ್ಲಿ ಜಯ ಗಳಿಸಿತು. ನಂತರರ ಕೇರಳ ವಿಶ್ವವಿದ್ಯಾನಿಲಯ ಟಿಎನ್‌ಪಿಇಎಸ್ ವಿಶ್ವವಿದ್ಯಾನಿಲಯವನ್ನು 28-23 ಅಂಕಗಳ ಅತರದಲ್ಲಿ ಮಣಿಸಿತು.
ಒಟ್ಟು 6 ಅಂಕಗಳನ್ನು ಗಳಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ವನಿತೆಯರು ಚಾಂಪಿಯನ್ ಪಟ್ಟ ಗೆದ್ದುಕೊಂಡರು. ಕೇರಳ ವಿಶ್ವವಿದ್ಯಾನಿಲಯ 4 ಅಂಕಗಳನ್ನು ಗಳಿಸಿ ರನ್ನರ್ ಅಪ್ ಗೌರವಕ್ಕೆ ಪಾತ್ರವಾಯಿತು. 2 ಅಂಕಗಳನ್ನು ಗಳಿಸಿದ ಟಿಎನ್‌ಪಿಇಎಸ್ ವಿಶ್ವವಿದ್ಯಾನಿಲಯ ಮೂರನೇ ಸ್ಥಾನ ಗಲಿಸಿತು. ಲೀಗ್‌ನಲ್ಲಿ ಅಂಕ ಗಳಿಸಲು ವಿಫಲವಾದ ಮದುರೈ ಕಾಮರಾಜ ವಿಶ್ವವಿದ್ಯಾನಿಲಯ ತಂಡ ನಾಲ್ಕನೇ ಸ್ಥಾನ ಗಳಿಸಿತು. ಮಂಗಳೂರು ವಿಶ್ವವಿದ್ಯಾನಿಲಯ ಸೇರರಿದಂತೆ ಒಟ್ಟು ನಾಲ್ಕು ತಂಡಗಳು ಸಿಮ್ಲಾದಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿವೆ.
ಮಂಗಳೂರು ವಿಶ್ವವಿದ್ಯಾನಿಲಯ ತಂಡದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಎಂಟು ಆಟಗಾರ್ತಿಯರು ಪಾಲ್ಗೊಂಡಿರುವುದು ವಿಶೇಷ.

Related Articles