ಹರಿಯಾಣ ಸ್ಟೀಲರ್ಸ್‍ ಗೆ ರೋಚಕ ಜಯ

0
189
ಮುಂಬೈ:

ವಿಕಾಶ್ ಖಾಂಡೊಲಾ(15), ಸುನೀಲ್ (5) ಹಾಗೂ ನವೀನ್(5) ಅವರ ಅತ್ಯದ್ಬುತ ಆಟದ ನೆರವಿನಿಂದ ಹರಿಯಾಣ ಸ್ಟೀಲರ್ಸ್ ತಂಡ ಯು ಮುಂಬಾ ಎದುರು ಪ್ರೊ ಕಬಡ್ಡಿ ಪಂದ್ಯದಲ್ಲಿ ರೋಚಕ ಗೆಲುವು ಪಡೆಯಿತು.

 ಆರಂಭದಿಂದಲೂ ಉತ್ತಮ ಪೈಪೋಟಿ ನಡೆಸಿದ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿದ್ದವು. ಆದರೆ, ಕೊನೆಯ ಕ್ಷಣಗಳಲ್ಲಿ ಹರಿಯಾಣ ಆಟಗಾರರು ತೋರಿದ ಬುದ್ದಿವಂತಿ ಕೆಯೆ ಆಟದ ಫಲವಾಗಿ ಅಂತಿಮವಾಗಿ 35-31 ಅಂತರದಲ್ಲಿ ಗೆದ್ದು ಬೀಗಿತು.
ಯು ಮುಂಬಾ ಪರ ಉತ್ತಮ ಆಟವಾಡಿದ ಸಿದ್ಧಾರ್ಥ್ ದೇಸಾಯಿ 11 ಅಂಕ ಪಡೆದರೆ, ವಿನೋದ್ ಹಾಗೂ ರೋಹಿತ್ ಕ್ರಮವಾಗಿ 6, 5 ಅಂಕ ಪಡೆದರು. ಆದರೂ ಕೊನೆಯದಾಗಿ ಕೇವಲ ನಾಲ್ಕು ಅಂಕಗಳಿಂದ ಸೋಲಬೇಕಾಯಿತು