Thursday, April 25, 2024

ಜೈಪುರ ಮಣಿಸಿದ ಡೆಲ್ಲಿ ದಬಾಂಗ್

ಮುಂಬೈ:

ಚುರುಕಿನ ಆಟ ಪ್ರದರ್ಶನ ನೀಡಿದ ದಬಾಂಗ್ ಡೆಲ್ಲಿ ತಂಡ ವಿವೋ ಪ್ರೊ ಕಬಡ್ಡಿ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 40-29 ಅಂತರದಲ್ಲಿ ಜಯ ಸಾಧಿಸಿತು.

ಡೆಲ್ಲಿ ಪರ ಅತ್ಯುತ್ತಮ ಆಟವಾಡಿದ ನವೀನ್ ಕುಮಾರ್ 10, ಮೆರಜ್ ಶೆಖ್ಯಾ 9 ಹಾಗೂ ಚಂದ್ರನ್ ರಂಜಿತ್ 8 ಅಂಕಗಳ ಸಹಾಯದೊಂದಿಗೆ ಡೆಲ್ಲಿ ಗೆಲುವು ಸಾಧಸಿತು. ಡೆಲ್ಲಿ ಪರ ಐದು ಅಂಕ ಪಡೆದ ಜೋಗಿಂದರ್ ಪಂದ್ಯದ ಅಗ್ರ ಡಿಫೆಂಡರ್ ಆಗಿ ಹೊಹೊಮ್ಮಿದರು.
ಜೈಪುರ ಪರ ಉತ್ತಮ ಆಟವಾಡಿದ ದೀಪಕ್ ಹೂಡ 15, ಅನೂಪ್ ಕುಮಾರ್ 6 ಹಾಗೂ ಸಂದೀಪ್ ಧುಲ್ 3 ಅಂಕ ಪಡೆದರೂ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಲು ಸಾಧ್ಯವಾಗಿಲ್ಲ. ಅಂತಿಮವಾಗಿ ಡೆಲ್ಲಿ ಎದುರು ಜೈಪುರ ಪ್ಯಾಂಥರ್ಸ್ ತಂಡ ಸೋಲು ಒಪ್ಪಿಕೊಂಡಿತು.

Related Articles