Thursday, September 12, 2024

ಆಸೀಸ್ ಎದುರು ಸರಣಿ ಗೆದ್ದ ಆಫ್ರಿಕಾ

ಸಿಡ್ನಿ:

ಡೇವಿಡ್ ಮಿಲ್ಲರ್(139) ಹಾಗೂ ಡುಫ್ಲೆಸಿಸ್(125) ಅವರ 252 ರನ್ ಗಳ ಅಮೋಘ ಜತೆಯಾಟದ ನೆರವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ಎದುರು ಅಂತಿಮ ಏಕದಿನ ಪಂದ್ಯದಲ್ಲಿ 40 ರನ್ ಗಳ ಜಯ ಸಾಧಿಸಿತು. ಇದರೊಂದಿಗೆ ಆಫ್ರಿಕಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ವಶ ಪಡಿಸಿಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ ಮೊತ್ತ 55 ರನ್ ಇರುವಾಗಲೇ ಪ್ರಮುಖ ಮೂವರು ಬ್ಯಾಟ್ಸ್ ಮನ್ ಗಳನ್ನು ಕಳೆದುಕೊಂಡಿತು. ಇದರಿಂದ ತೀವ್ರ ಒತ್ತಡಕ್ಕೆ ಸಿಲುಕಿದ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್ ಹಾಗೂ ಡುಫ್ಲೆಸಿಸ್ ಜೋಡಿ ಅಮೋಘ ಜತೆಯಾಟವಾಡಿತು. 114 ಎಸೆತಗಳಿಗೆ ನಾಯಕ ಡುಫ್ಲೆಸಿಸ್ 125 ರನ್ ದಾಖಲಿಸಿದರೆ, ಮತ್ತೊಂದು ತುದಿಯಲ್ಲಿ 108 ಎಸತಗಳಿಗೆ ಡೇವಿಡ್ ಮಿಲ್ಲರ್ 139 ರನ್ ಗಳಿಸಿದರು. ಇವರಿಬ್ಬರ ತಲಾ ಶತಕಗಳ ನೆರವಿನಿಂದ ಆಫ್ರಿಕಾ ಆಸ್ಟ್ರೇಲಿಯಾಗೆ 321 ರನ್ ಬೃಹತ್ ಮೊತ್ತದ ಸವಾಲು ನೀಡಿತು.
ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಪರ ಶಾನ್ ಮಾರ್ಷ್ ಅದ್ಬುತ ಬ್ಯಾಟಿಂಗ್ ಮಾಡುವಲ್ಲಿ ಯಶಸ್ವಿಯಾದರು. 102 ಎಸೆತಗಳಿಗೆ 106 ರನ್ ಗಳಿಸಿದರು. ಇವರ ಶತಕದ ಹೊರತಾಗಿಯೂ ಆಸೀಸ್ 40 ರನ್ ಗಳಿಂದ ಸೋಲು ಒಪ್ಪಿಕೊಂಡಿತು. ಮಾರ್ಕೂಸ್ ಸ್ಟೋನಿಸ್ 60 ರನ್ ಗಳಿಸಿದರೆ, ಅಲೆಕ್ಸ್ 42 ಹಾಗೂ ಮ್ಯಾಕ್ಸವೆಲ್ 35 ರನ್ ಗಳಿಸಿದರು. ಆದರೆ, ಅಂತಿಮವಾಗಿ ಆಸೀಸ್ ಪಂದ್ಯ ಸೋಲುವ ಮೂಲಕ ಸರಣಿಯನ್ನು ಕೈ ಚೆಲ್ಲಿಕೊಂಡಿತು.

Related Articles