Tuesday, November 12, 2024

ಭಾರತ ತಂಡಕ್ಕೆ ಕೆ.ಎಲ್.‌ ರಾಹುಲ್‌ ಉಪ ನಾಯಕ

ಮುಂಬೈ: ಹಾರ್ದಿಕ್‌ ಪಾಂಡ್ಯ ಗಾಯದಿಂದ ಚೇತರಿಸಿಕೊಳ್ಳದಿರುವ ಕಾರಣ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕೆ.ಎಲ್‌. ರಾಹುಲ್‌ ಅವರನ್ನು ವಿಶ್ವಕಪ್‌ನ ಉಳಿದಿರುವ ಪಂದ್ಯಗಳಿಗೆ ಉಪ ನಾಯಕರನ್ನಾಗಿ ಆಯ್ಕೆ ಮಾಡಿದೆ. K L Rahul named Vice Captain of Indian team.

ಹಾರ್ದಿಕ್‌ ಪಾಂಡ್ಯ ಅವರ ಬದಲಿಗೆ ಕರ್ನಾಟಕದ ವೇಗದ ಬೌಲರ್‌ ಪ್ರಸಿಧ್‌ ಕೃಷ್ಣ ಅವರು ತಂಡವನ್ನು ಸೇರಿಕೊಂಡಿದ್ದಾರೆ.

ನಾಳೆ ಈಡನ್‌ ಗಾರ್ಡನ್ಸ್‌ನಲ್ಲಿ ಭಾರತ ತಂಡ ವಿಶ್ವಕಪ್‌ನ ಅತ್ಯಂತ ಮುಖ್ಯ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಭಾರತ ಇದುವರೆಗೂ ಆಡಿರುವ ಏಳೂ ಪಂದ್ಯಗಳಲ್ಲೂ ಜಯ ಗಳಿಸಿ ಸೆಮಿಫೈನಲ್‌ ಹಂತ ತಲುಪಿದೆ.

ಪುಣೆಯಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಅವರು ಗಾಯಗೊಂಡಿದ್ದರು. ಅವರು ನಾಕೌಟ್‌ ಪಂದ್ಯಗಳಿಗೆ ಲಭ್ಯವಿರುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು, ಆದರೆ ಸ್ಟಾರ್‌ ಆಲ್ರೌಂಡರ್‌ ಚೇತರಿಸಿಕೊಳ್ಳದ ಕಾರಣ ಬದಲಿ ಆಟಗಾರರನ್ನು ನೇಮಿಸುವುದು ಅನಿವಾರ್ಯವಾಯಿತು.

ಭಾರತ ತಂಡ ಲೀಗ್‌ ಹಂತದಲ್ಲಿ ಇನ್ನು ಎರಡು ಪಂದ್ಯಗಳನ್ನಾಡಲಿದ್ದು ಬಳಿಕ 2011ರ ನಂತರ ಮೊದಲ ಬಾರಿಗೆ ಫೈನಲ್‌ ತಲಪುವ ಗುರಿ ಹೊಂದಿದೆ. ತಂಡದ ಜೊತೆ ಪ್ರಯಾಣ ಮಾಡುತ್ತಿರುವ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್‌ ಅಗರ್ಕಾರ್‌ ಅವರು ರಾಹುಲ್‌ ಅವರನ್ನು ಉಪನಾಯಕನ್ನಾಗಿ ಮಾಡಲಾಗುವುದು ಎಂದು ವರದಿಗಳು ತಿಳಿಸಿವೆ.

Related Articles