Friday, March 29, 2024

Kolkata Knight Riders VS Punjab Kings : ಐಪಿಎಲ್‌ಗೆ ಮಳೆಯ ಅಡ್ಡಿ : ಕೋಲ್ಕತ್ತಾ ನೈಟ್‌ ರೈಡರ್ಸ್‌ VS ಪಂಜಾಬ್‌ ಕಿಂಗ್ಸ್‌ ಪಂದ್ಯ ಸ್ಥಗಿತ

ಮೊಹಾಲಿ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭದಲ್ಲೇ ವರುಣನ ಆಗಮನವಾಗಿದೆ. ಪ್ರಸಕ್ತ ಋತುವಿನ ಐಪಿಎಲ್‌ನ ಎರಡನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಹಾಗೂ ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders VS Punjab Kings) ನಡುವಿನ ಪಂದ್ಯದ ವೇಳೆಯಲ್ಲಿ ಮಳೆ ಆರ್ಭಟಿಸಿದೆ. ವೇಳೆ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ 16 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 146 ರನ್‌ ಗಳಿಸಿತ್ತು. ಕೋಲ್ಕತ್ತಾ ತಂಡದ ಗೆಲುವಿನ 24 ಎಸೆತಗಳಲ್ಲಿ 46 ರನ್‌ ಅಗತ್ಯವಿತ್ತು.

ಮೊಹಾಲಿಯ ಪಂಜಾಬ್‌ ಕ್ರಿಕೆಟ್‌ ಅಸೋಸಿಯೇಷನ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ (Kolkata Knight Riders VS Punjab Kings) ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಆರಂಭಿಕರಾದ ಪ್ರಭಾಸಿಮ್ರನ್ ಹಾಗೂ ಶಿಖರ್‌ ಧವನ್‌ ಉತ್ತಮ ಆರಂಭ ಒದಗಿಸಿದ್ದಾರೆ. ಆದರೆ ಪ್ರಭಾಸಿಮ್ರನ್ 23 ರನ್‌ ಗಳಿಸಿ ಔಟಾಗುತ್ತಿದ್ದಂತೆಯೇ ಕ್ರೀಸ್‌ಗೆ ಇಳಿದ ಬಿ.ರಾಜಪಕ್ಷ ಜೊತೆಯಾದ ಶಿಖರ್‌ ಧವನ್‌ ಇನ್ನಿಂಗ್ಸ್‌ ಕಟ್ಟುವ ಕಾರ್ಯಕ್ಕೆ ಮುಂದಾದ್ರು. ಶಿಖರ್‌ ಧವನ್‌ ನಿಧಾನಗತಿಯ ಬ್ಯಾಟಿಂಗ್‌ಗೆ ಮನಮಾಡಿದ್ರೆ, ರಾಜಪಕ್ಷ ಕೇವಲ 32 ಎಸೆತಗಳಲ್ಲಿ ಭರ್ಜರಿ 50 ರನ್‌ ಗಳಿಸಿದ್ರು. ನಂತರದಲ್ಲಿ ಬಂದ ಜಿತೇಶ್‌ ಶರ್ಮಾ 21, ರಾಜಾ 16 ರನ್‌ ಗಳಿಸಿದ್ರೆ, ಶಿಖರ್‌ ಧವನ್‌ 40 ರನ್‌ ಬಾರಿಸಿದ್ದಾರೆ. ಅಂತಿಮ ಹಂತದಲ್ಲಿ ಸ್ಯಾಮ್‌ ಕರನ್‌ 17 ಎಸೆತಗಳಲ್ಲಿ 26 ಹಾಗೂ ಶಾರೂಖ್‌ ಖಾನ್‌ 7 ಎಸೆತಗಳಲ್ಲಿ 11 ರನ್‌ ಬಾರಿಸುವ ಮೂಲಕ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ನೆರವಾಗಿದ್ದಾರೆ. ಕೋಲ್ಕತ್ತಾ ನೈಟ್‌ ರೈಡರ್ಸ್‌ ಪರ ಟೀಂ ಸೌಥಿ 2 ಹಾಗೂ ಸುನಿಲ್‌ ನರೇನ್‌, ಉಮೇಶ್‌ ಯಾದವ್‌ ಹಾಗೂ ಚಕ್ರವರ್ತಿ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ.

ಸವಾಲಿನ ಮೊತ್ತವನ್ನು ಬೆನ್ನತ್ತಲು ಹೊರಟ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡಕ್ಕೆ ಪಂಜಾಬ್‌ ಕಿಂಗ್ಸ್‌ ತಂಡದ ಬೌಲರ್‌ ಅರ್ಷದೀಪ್‌ ಸಿಂಗ್‌ ಆಘಾತ ನೀಡಿದ್ರು. ಮನ್‌ದೀಪ್‌ ಸಿಂಗ್‌ ಕೇವಲ 2 ರನ್‌ ಗಳಿಗೆ ವಿಕೆಟ್‌ ಒಪ್ಪಿಸಿದ್ರೆ, ಅಂಕುಲ್‌ ರಾಯ್‌ ಆಟ ಕೇವಲ 4 ರನ್‌ ಗಳಿಗೆ ಕೊನೆಯಾಯ್ತು. ನಂತರ ಗುರ್ಬಜ್‌ ಗೆ ಜೊತೆಯಾದ ವೆಂಕಟೇಶ್‌ ಅಯ್ಯರ್‌ ಭರ್ಜರಿ ಬ್ಯಾಟಿಂಗ್‌ ನಡೆಸಿದ್ದಾರೆ. ಅಯ್ಯರ್‌ 34 ರನ್‌ ಗಳಿಸಿದ್ರೆ, ಗರ್ಬಜ್‌ 22 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದ್ದಾರೆ. ನಂತರ ನಿತೇಶ್‌ ರಾಣಾ 24 ರನ್‌ ಹಾಗೂ ಆಂಡ್ರೆ ರಸೆಲ್‌ 35 ರನ್‌ ಬಾರಿಸುವ ಮೂಲಕ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದಾರೆ. ಆದರೆ ಸ್ಯಾಮ್‌ ಕರನ್‌ ಹಾಗೂ ರಾಜಾ ಇಬ್ಬರನ್ನು ಬಲಿ ಪಡೆದಿದ್ದಾರೆ. ನಂತರ ಶಾರ್ದೂಲ್‌ ಠಾಕೂರ್‌ 8 ರನ್‌ ಹಾಗೂ ಸುನಿಲ್‌ ನರೇನ್‌ 7 ರನ್‌ ಗಳಿಸಿ ಉತ್ತಮ ಆಟವಾಡುತ್ತಿದ್ದ ವೇಳೆಯಲ್ಲಿಯೇ ಮಳೆ ಪಂದ್ಯಕ್ಕೆ ಅಡ್ಡಿಯಾಗಿದೆ. ಈ ವೇಳೆಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ 16 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 146 ರನ್‌ ಗಳಿಸಿತ್ತು.

ಇದನ್ನೂ ಓದಿ : ಬೈಕ್‌ನಲ್ಲೇ ಸಪ್ತ ಖಂಡಗಳ ಸುತ್ತಿದ ಕನ್ನಡಿಗ ದೀಪಕ್‌ ಕಾಮತ್‌

ಇದನ್ನೂ ಓದಿ : BCCI Contract List: ಕೆ.ಎಲ್. ರಾಹಲ್ ಈಗ ಬಿ ಗ್ರೇಡ್ ಆಟಗಾರ!

Related Articles