Friday, October 4, 2024

IPL 2023 : ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡಕ್ಕೆ ಪಂಜಾಬ್‌ ಕಿಂಗ್ಸ್‌ ಸವಾಲು

ಪಂಜಾಬ್‌ : ಇಂಡಿಯನ್ ಪ್ರೀಮಿಯರ್ ಲೀಗ್ 2023 ( IPL 2023 PBKS vs KKR) ರ ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡಗಳು ಸೆಣೆಸಾಡಲಿವೆ. ಕಳೆದ ಋತುವಿನಲ್ಲಿ ಎರಡೂ ತಂಡಗಳು ಹಿನಾಯ ಪ್ರದರ್ಶನ ತೋರಿದ್ದವು. ಇಂದು ಮೊಹಾಲಿಯ ಪಂಜಾಬ್‌ ಕ್ರಿಕೆಟ್‌ ಅಸೋಸಿಯೇಷನ್‌ನ ಐಎಸ್‌ ಬಿಂದ್ರಾ ಮೈದಾನದಲ್ಲಿ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ.

ಶಿಖರ್ ಧವನ್ ನಾಯಕತ್ವದ ಪಂಜಾಬ್‌ ಕಿಂಗ್ಸ್‌ ತಂಡ ಈ ಬಾರಿ ಸ್ಟಾರ್‌ ಬೌಲರ್‌ ಕಗಿಸೋ ರಬಾಡ ಅವರ ಸೇವೆಯನ್ನು ಕಳೆದುಕೊಂಡಿದೆ. ಇನ್ನೊಂದೆಡೆಯಲ್ಲಿ ನಿತೇಶ್‌ ರಾಣಾ ನಾಯಕತ್ವದ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಲಾಕಿ ಫರ್ಗುಸನ್‌ ಅವರ ಸೇವೆಯಿಂದ ವಂಚಿತವಾಗಿದೆ. ಪಂಜಾಬ್‌ ಕಿಂಗ್ಸ್‌ ತಂಡದಲ್ಲಿ ಶಿಖರ್‌ ಧವನ್‌ ಮಾತ್ರವಲ್ಲದೇ ಮ್ಯಾಥ್ಯೂ ಶಾರ್ಟ್‌, ಸ್ಯಾಮ ಕರನ್‌, ರಾಹುಲ್‌ ಚಹಾರ್‌, ಅರ್ಷದೀಪ್‌ ಸಿಂಗ್‌, ಭಾನುಕಾ ರಾಜಪಕ್ಷೆ ಪ್ರಮುಖ ಆಟಗಾರರಾಗಿದ್ರೆ, ಕೋಲ್ಕತ್ತಾ ತಂಡದಲ್ಲಿ ಎನ್.ಜಗದೀಸನ್‌, ವೆಂಕಟೇಶ್‌ ಅಯ್ಯರ್‌, ಆಂಡ್ರೆ ರಸೆಲ್‌, ಶಾರ್ದೂಲ್‌ ಠಾಕೂರ್‌, ಸುನಿಲ್‌ ನರೈನ್‌, ಉಮೇಶ್‌ ಯಾದವ್‌, ಟೀಮ್‌ ಸೌಥಿ, ವರುಣ್‌ ಚಕ್ರವರ್ತಿ ಅವರಂತಹ ಸ್ಟಾರ್‌ ಆಟಗಾರರಿದ್ದಾರೆ. ಮೇಲ್ನೋಟಕ್ಕೆ ಕೋಲ್ಕತ್ತಾ ತಂಡ ಬಲಿಷ್ಠ ತಂಡವಾಗಿ ಕಾಣಿಸಿಕೊಳ್ಳುತ್ತಿದೆ. ಆದರೆ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಗೆಲುವು ತಂದು ಕೊಡಬಲ್ಲ ಸಾಮರ್ಥ್ಯವನ್ನು ಹೊಂದಿರುವ ಆಟಗಾರರಿದ್ದಾರೆ.

IPL 2023 PBKS vs KKR ಪಿಚ್ ರಿಪೋರ್ಟ್‌ :

ಮೊಹಾಲಿಯ ಕ್ರೀಡಾಂಗಣದ ಸಾಂಪ್ರದಾಯಿಕ ಪಿಚ್‌ನಲ್ಲಿ ಹೆಚ್ಚು ರನ್‌ ಗಳಿಸಲು ಅವಕಾಶವಿದ್ದು, ಪಂದ್ಯದ ಆರಂಭಿಕ ಹಂತದಲ್ಲಿ ಚೆಂಡು ವೇಗದ ಬೌಲರ್‌ಗಳಿಗೆ ನೆರವಾಗಲಿದೆ. ಆದರೆ ಪಂದ್ಯ ಮುಂದುವರಿಯುತ್ತಿದ್ದಂತೆಯೇ ಬ್ಯಾಟಿಂಗ್‌ ಹೆಚ್ಚು ಅನುಕೂಲಕರವಾಗಲಿದೆ. ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಮಾಡುವ ತಂಡಗಳು ಹೆಚ್ಚುವ ಸಾಧ್ಯತೆಯಿದೆ ಹೆಚ್ಚಿದೆ.

PBKS vs KKR ಸಂಭಾವ್ಯ ಆಡುವ ಬಳಗ :
ಪಂಜಾಬ್ ಕಿಂಗ್ಸ್ (PBKS):
ಶಿಖರ್ ಧವನ್(ನಾಯಕ), ಮ್ಯಾಥ್ಯೂ ಶಾರ್ಟ್, ಪ್ರಬ್ಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ (ವಿ.ಕೀ), ಶಾರುಖ್ ಖಾನ್, ಸ್ಯಾಮ್ ಕರ್ರಾನ್, ಹರ್ಪ್ರೀತ್ ಬ್ರಾರ್, ಅರ್ಷ ದೀಪ್ ಸಿಂಗ್, ನಾಥನ್ ಎಲ್ಲಿಸ್, ರಾಹುಲ್ ಚಹಾರ್

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್):
ಎನ್ ಜಗದೀಸನ್ (ವಿಕೀ), ರಹಮಾನುಲ್ಲಾ ಗುರ್ಬಾಜ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ಟಿಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ

ಸಂಭಾವ್ಯ ಅತ್ಯುತ್ತಮ ಆಟಗಾರ :
ಶಿಖರ್ ಧವನ್:
ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್‌ ಧವನ್‌ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮುನ್ನೆಡೆಸುತ್ತಿದ್ದು, ಇಂದಿನ ಪಂದ್ಯದ ಸ್ಟಾರ್‌ ಆಟಗಾರ ಎನಿಸಿಕೊಂಡಿದ್ದಾರೆ. ಹೀಗಾಗಿ ಪಂಜಾಬ್‌ ತಂಡ ಶಿಖರ್‌ ಧವನ್‌ ಅವರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ.

ಸಂಭಾವ್ಯ ಅತ್ಯುತ್ತಮ ಬೌಲರ್
ಅರ್ಷದೀಪ್ ಸಿಂಗ್:
ವಿಶ್ವದ ಅತ್ಯಂತ ಬೇಡಿಕೆಯ ವೇಗದ ಬೌಲರ್‌ ಆಗಿರುವ ಅರ್ಷದೀಪ್‌ ಸಿಂಗ್‌ ಭಾರತ ತಂಡದಲ್ಲಿಯೂ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಎರಡು ಐಪಿಎಲ್‌ ಋತುವಿನಲ್ಲಿ ಅತ್ಯುತ್ತಮ ಭೌಲಿಂಗ್‌ ಫರ್ಪಾಮೆನ್ಸ್‌ ಕೊಟ್ಟಿರುವ ಅರ್ಷದೀಪ್‌ ಸಿಂಗ್‌ ಇಂದಿನ ಪಂದ್ಯದಲ್ಲಿ ಸ್ಟಾರ್‌ ಬೌಲರ್‌ ಆಗಿ ಹೊರಹೊಮ್ಮುವ ಸಾಧ್ಯತೆಯಿದೆ.

PBKS vs KKR ಪಂದ್ಯದ ವಿವರಗಳು

ಪಂಜಾಬ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್, 2 ನೇ ಪಂದ್ಯ, IPL 2023

ಸ್ಥಳ: ಪಂಜಾಬ್ ಕ್ರಿಕೆಟ್ ಸಂಸ್ಥೆ ಐಎಸ್ ಬಿಂದ್ರಾ ಸ್ಟೇಡಿಯಂ, ಮೊಹಾಲಿ

ದಿನಾಂಕ ಮತ್ತು ಸಮಯ: ಶನಿವಾರ, ಏಪ್ರಿಲ್ 1, 3:30 PM IST

ಟೆಲಿಕಾಸ್ಟ್ ಮತ್ತು ಸ್ಟ್ರೀಮಿಂಗ್ ವಿವರಗಳು: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೋ ಸಿನಿಮಾ

Related Articles