Thursday, October 10, 2024

ವಿಜಯ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಹ್ಯಾಟ್ರಿಕ್‌ ಜಯ

ಅಹಮದಾಬಾದ್‌: ವಿದ್ವತ್‌ ಕಾವೇರಪ್ಪ, ಕೌಶಿಕ್‌ ವಿ. ಹಾಗೂ ವೈಶಾಖ್‌ ವಿಜಯ್‌ ಕುಮಾರ್‌ ಅವರ ಅದ್ಭುತ ಬೌಲಿಂಗ್‌ ಮತ್ತು ದೇವದತ್ತ ಪಡಿಕ್ಕಲ್‌ ಅವರ ಅದ್ಭುತ ಬ್ಯಾಟಿಂಗ್‌ ನೆರವಿನಿಂದ ದೆಹಲಿ ವಿರುದ್ಧ ವಿಜಯ ಹಜಾರೆ ಟ್ರೋಫಿಯಲ್ಲಿ 6 ವಿಕೆಟ್‌ ಜಯ ಗಳಿಸಿದ ಕರ್ನಾಟಕ ತಂಡ ಚಾಂಪಿಯನ್‌ಷಿಪ್‌ನಲ್ಲಿ ಹ್ಯಾಟ್ರಿಕ್‌ ಜಯ ಗಳಿಸಿದೆ. Vijay Hazare Trophy Karnataka Hat trick win.

ವಿದ್ವತ್‌ ಕಾವೇರಪ್ಪ ಮತ್ತು ಕೌಶಿಕ್‌ ತಲಾ 3 ವಿಕೆಟ್‌ ಗಳಿಸಿದರೆ, ವೈಶಾಖ್‌ ವಿಜಯ್‌ ಕುಮಾರ್‌ 2 ವಿಕೆಟ್‌ ಗಳಿಸುವ ಮೂಲಕ ಮೊದಲು ಬ್ಯಾಟಿಂಗ್‌ ಮಾಡಿದ ದೆಹಲಿ ತಂಡ 36.3 ಓವರ್‌ಗಳಲ್ಲಿ 143 ರನ್‌ಗೆ ಸರ್ವ ಪತನ ಕಂಡಿತು. ದೆಹಲಿ ಪರ ಆಯುಷ್‌ ಬದೋನಿ 100 ರನ್‌ ಗಳಿಸಿದ್ದು ವ್ಯರ್ಥವಾಯಿತು.

ಅಲ್ಪ ಮೊತ್ತವನ್ನು ಬೆಂಬತ್ತಿದ ಕರ್ನಾಟಕ ತಂಡದ ಪರ ದೇವದತ್ತ ಪಡಿಕ್ಕಲ್‌ 69 ಎಸೆತಗಳನ್ನೆದುರಿಸಿ 3 ಬೌಂಡರಿ ಹಾಗೂ 6 ಸಿಕ್ಸರ್‌ ನೆರವಿನಿಂದ 70 ರನ್‌ ಗಳಿಸಿ ಜಯದ ಹಾದಿಯನ್ನು ಸುಗಮಗೊಳಿಸಿದರು. ಮನೀಶ್‌ ಪಾಂಡೆ ಅಜೇಯ 28 ರನ್‌ ಗಳಿಸಿ ಸುಲಭ ಜಯ ತಂದಿತ್ತರು.

Related Articles