Friday, June 14, 2024

ಇಂದಿನಿಂದ ಇಂಡಿಯನ್ ಸೂಪರ್ ಲೀಗ್: ಮೊದಲ ಪಂದ್ಯ ಎಟಿಕೆ ಎದುರಾಳಿ ಕೇರಳ

ಕೋಲ್ಕತಾ: 

2014ರಲ್ಲಿ ಹೀರೋ ಇಂಡಿಯನ್ ಸೂಪರ್ ಲೀಗ್ ಆರಂಭವಾದಾಗಿನಿಂದ ಎ ಟಿ ಕೆ  ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳು ಹಲವು ಬಾರಿ  ಪ್ರಮುಖ ಪಂದ್ಯಗಳನ್ನಾಡಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಾಗೂ ನಾಲ್ಕು ಆವೃತ್ತಿಗಳಲ್ಲಿ ಉಳ್ಳದವನ್ನು ಕಾಯ್ದುಕೊಂಡಿವೆ.

ಈ ತಂಡಗಳು ಎರಡು ಆವೃತ್ತಿಗಲ್ಲಿ ಫೈನಲ್ ಪಂದ್ಯಗಳನ್ನಾಡಿವೆ, ಮೊದಲ ಆವೃತ್ತಿ ಹಾಗೂ 2016ರಲ್ಲಿ. ಇತ್ತಂಡಗಳು ಫೈನಲ್ ಹಾಗೂ ಮೊದಲ ಪಂದ್ಯವನ್ನೂ ಆಡಿವೆ. ಮತ್ತೆ ಐದನೇ ಆವೃತ್ತಿಯಲ್ಲಿ ಮೊದಲ ಪಂದ್ಯ ಆಡಲು ಸಜ್ಜಾಗಿವೆ. ಇಂದರಿಂದಾಗಿ ಮಾತಲ್ಲಿ ಏನೂ  ಕುತೂಹಲ ಕಾಣದು, ಆದರೆ ಪಂದ್ಯದಲ್ಲಿ ಇದ್ದೆ ಇರುತ್ತದೆ.
ಎರಡು ಬಾರಿ ಚಾಂಪಿಯನ್ ಪಟ್ಟ ಗೆದ್ದಿರುವ ಎಟಿಕೆ ತಂಡ ಕೆರಳ  ವಿರುದ್ಧ 5-1ರ ಮೇಲು ಗೈ ಸಾಧಿಸಿದೆ. ಆದರೆ ಶನಿವಾರ ವಿವೇಕಾನಂದ ಯುವಭಾರತಿ ಕ್ರೀಡಾಂಗಣದಲ್ಲಿ ಎಟಿಕೆ ತಂಡಕ್ಕೆ ಅಚ್ಚರಿ ಕಾಣುವದು ಸಹಜ. ಏಕೆಂದರೆ ಕೇರಳ ಈ ಬಾರಿ ಅನೇಕ ಹೊಸ ಪ್ರತಿಭೆಗಳೊಂದಿಗೆ ಅಂಗಣಕ್ಕೆ ಕಾಲಿಟ್ಟಿದೆ. ಈ ಆಟಗಾರರು ಹಿಂದಿನ ಐಎಸ್ಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆಟಗಾರರಿದ್ದಾರೆ. ಕಳೆದ ಋತುವಿನಲ್ಲಿ ಪ್ಲೇ ಆಫ್ ಹಂತವನ್ನು ತಲಪುವಲ್ಲಿ ವಿಫಲವಾಗಿರುವ  ಎಟಿಕೆ  ಈ ಬಾರಿ ಹೊಸ ಗುರಿಯೊಂದಿಗೆ ಅಂಗಣಕ್ಕಿಳಿಯಲಿದೆ. ಕಲು ಉಚೆ, ಎವೆರ್ಟಾನ್ ಸ್ಯಾಂಟೋಸ್, ಗೇರ್ಸನ್ ವಿಯೆರಾ ಹಾಗೂ ಮನ್ವೆಲ್ ಲ್ಯಾಂಜರೋಟೆ ಅವರನ್ನು ಹೊಂದಿದ್ದು, ಪ್ರೇಕ್ಷಕರಿಗೆ ಎಂದಿನಂತೆ ಫುಟ್ಬಾಲ್ ಸವಿ ನೀಡಲು ಸಜ್ಜಾಗಿದ್ದಾರೆ.
“ಕಳೆದ ಎರಡು ವರ್ಷಗಳಲ್ಲಿ ಮೂರನೇ ಕ್ವಾರ್ಟರ್ನಲ್ಲಿ   ತಂಡಕ್ಕೆ ಅಗತ್ಯ ಇರುವುದನ್ನು ನೀಡುವ ಆಟಗಾರರೊಂದಿಗೆ ಆಡಿರಲಿಲ್ಲ. ಈಬಾರಿ ನಮ್ಮಲ್ಲಿ ಲ್ಯಾಂಜರೋಟೆ, ಎವೆರ್ಟಾನ್, ಕಾಲು, ಬಲವಂತ್ ಸಿಂಗ್ ಅಂತಿಮ ಕ್ಷಣದಲ್ಲಿ ತಂಡಕ್ಕೆ ಯಶ ತರಬಲ್ಲ ಆಟಗಾರರು.ಇದ್ದಾರೆ. ಅವರಿಗೆ ಅವಕಾಶ ಒದಗಿಸಲು ನನ್ನಿಂದಾದ ಪ್ರಯತ್ನ ಮಾಡುವೆ. ಆದರೆ ತಂಡದಲ್ಲಿ  ಸಮತೋಲನ ಇದ್ದಾರೆ ಮಾತ್ರ ಇದು ಸಾಧ್ಯ,” ಎಂದು ಕೇರಳ ಬ್ಲಾಸ್ಟರ್ಸ್ ತಂಡವನ್ನು 2016 ರಲ್ಲಿ ಫೈನಲ್ ಗೆ ಕೊಂಡೊಯ್ದು ಸೋತಿರುವ ಕೋಚ್ ಸ್ಟೀವ್ ಕೊಪ್ಪೆಲ್  ಎಟಿಕೆ ವಿರುದ್ಧ ಈಗ ಕುತೂಹಲದ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.
ವಿರುದ್ಧ ದಿಕ್ಕಿನ ಡಗ್ ಔಟ್ ನಲ್ಲಿರುವ ವ್ಯಕ್ತಿ ಎಲ್ಲರ ಚಿರಪರಿಚಿತ ವ್ಯಕ್ತಿ. ಇಂಗ್ಲೆಂಡ್ ತಂಡದ ಮಾಜಿ ಗೋಲ್ ಕೀಪರ್ ಡೇವಿಡ್ ಜೇಮ್ಸ್. ಅವರಿಗೂ ಎಟಿಕೆ ಹಾಗೂ ಕೇರಳ ಬ್ಲಾಸ್ಟರ್ಸ್ ನಡುವಿನ ಜಿದ್ದಾ ಜಿದ್ದಿಯ ಬಗ್ಗೆ ಗೊತ್ತು. ಐಎಸ್ ಎಲ್ ಮೊದಲ ಫೈನಲ್  ಕೇರಳ ಸೋಲನುಭವಿಸಿತ್ತು. ಈ ಎರಡು ತಂಡಗಳು ಯಾವ ರೀತಿಯಲ್ಲಿ ಹೋರಾಡಿವೆ ಎಂಬುದನ್ನು ಡೇವಿಡ್ ಜೇಮ್ಸ್ ತಿಳಿದಿದ್ದಾರೆ.
“ಐಎಸ್ ಎಲ್ ನಲ್ಲಿ ಕೇರಳ ಹಾಗೂ ಎಟಿಕೆ ನಡುವಿನ ವೈರುತ್ವ ಎಲ್ಲರಿಗೂ ತಿಳಿದ ವಿಚಾರ,. ಅದು ಕುತೂಹಲದಿಂದ ಕೂಡಿರುತ್ತಾದೆ. ಎರಡೂ ತಂಡಗಳು ಎರಡು ಫೈನಲ್ ಆಡಿವೆ. ಎಟಿಕೆ ಪ್ರಭುತ್ವ ಸಾಧಿಸಿರುವದು ಸ್ಪಷ್ಟ. ಈ  ಎರಡು ತಂಡಗಳ ನಡುವಿನ ಪಂದ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರೇಕ್ಷಕರು ಸೇರುವುದು ಸಂಮಾನ್ಯವಾಗಿದೆ,” ಎಂದು ಜೇಮ್ಸ್ ಹೇಳಿದ್ದಾರೆ. ಆದರೆ ಈ ಬಾರಿ ನಾವು ಜಯದ ಗುರಿ ಹೊಂದಿದ್ದೇವೆ, ಪಂದ್ಯ ಯಾವುದೇ ಋತುವನ್ನು ಆಧರಿಸಿರುವದಿಲ್ಲ ಬದಲಾಗಿ ಅಂದಿನ ಆಟವನ್ನು ಆಧರಿಸಿರುತ್ತದೆ ಎಂದು ಹೇಳಿದರು.
ಕೇರಳ ತಂಡ ಮಿಡ್ಲ ಪಂದ್ಯದಲ್ಲಿ ಭಾರತದ ಆಟಗಾರ ಅನಾಸ್ ಎಡತೋಡಿಕಾ ಅವರ ಸೇವೆಯಿಂದ ವಂಚಿತವಾಗಲಿದೆ. ಅನಾಸ್ ಅವರ ಅನುಪಸ್ಥಿತಿಯಲ್ಲಿ ಸಂದೇಶ್ ಜಿಂಗಾನ್ ಹಾಗು ತಂಡವನ್ನು ಮುನ್ನಡೆಸಲಿದ್ದಾರೆ. ಕಲು ಉಚೆ ಮತ್ತು ಲ್ಯಾಂಜರೋಟ್  ಕೇರಳ ತಂಡದ ಗೋಲ್ ಗಳಿಸುವ ಶಕ್ತಿ ಎನಿಸಿದ್ದಾರೆ.
ಮಾತೇಜ್ ಪೊಪ್ಲಾಟಿನಿಕ್ ಹಾಗೂ ಸ್ಲಾವಾಸಿಯಾ ಸ್ಟೋಜನೊವಿಚ್ ಐಎಸ್ ಎಲ್ ಗೆ ಬೇಗನೆ ಹೊಂದಿಕೊಳ್ಳುತ್ತಾರೆಂದು ಜೇಮ್ಸ್ ಅವರ ನಿರೀಕ್ಷೆ.  ಉಗಾಂಡದ ಸ್ಟಾರ್ ಆಟಗಾರ  ಕೆಜಿರೊನ್ ಕಿಜಿತೋ ಮತ್ತ್ತು ಘಾನಾದ ಆಟಗಾರ ಕರೇಜ್ ಪೀಕುಸೊನ್ ಸ್ಟ್ರೈಕರ್ ವಿಭಾಗದಲ್ಲಿ ತಂಡಕ್ಕೆ ನೆರವಾಗಲಿದ್ದಾರೆ.  ಈ ಬಾರಿಯ  ಋತು ಆರಂಭವಾಗುವುದಕ್ಕೆ ಮೊದಲೇ ವಿದೇಶಿ ವಿದೇಶಿ ಆಟಗಾರರು ಪರಿಸ್ಥಿತಿಗೆ ಹೊಂದಿಕೊಂಡಿದ್ದಾರೆ ಎಂದು ಜೇಮ್ಸ್ ಹೇಳಿದ್ದಾರೆ.
ಎರಡೂ ತಂಡಗಳಲ್ಲಿ ಬಲಿಷ್ಠ ಆಟಗಾರರು ಇರುವುದರಿಂದ ಈ ಬಾರಿಯ ಐಎಸ್ ಎಲ್ ಮೊದಲ ಪಂದ್ಯ ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಗಲಿದೆ.

Related Articles