Sunday, April 14, 2024

ಚೆಸ್: ಕೋಟದ ಪೂರ್ಣೇಶ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಸ್ಪೋರ್ಟ್ಸ್ ಮೇಲ್ ವರದಿ 

ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇವರು ರಾಯಚೂರಿನಲ್ಲಿ ನಡೆಸಿದ ಪದವಿ ಪೂರ್ವ ಶಿಕ್ಷಣ ವಿಧ್ಯಾರ್ಥಿಗಳ ರಾಜ್ಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಕೋಟ ವಿವೇಕ  ಪದವಿ ಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿ ತೆಕ್ಕಟ್ಟೆಯ ಪೂರ್ಣೇಶ಼್‌ ಹರಪನಕೆರೆ  ಇವರು ಪ್ರಶಸ್ತಿ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಮುಂದೆ ತೆಲಂಗಾಣದ ವಾರಂಗಲ್ ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದಚೆಸ್ ಪಂದ್ಯಾಟದಲ್ಲಿ ಪೂರ್ಣೇಶ್ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಪೂರ್ಣೇಶ್ ರಾಷ್ಟ್ರಮಟ್ಟದಲ್ಲೂ ಚಾಂಪಿಯನ್ ಪಟ್ಟ ಗೆದ್ದು ರಾಜ್ಯಕ್ಕೆ ಕೀರ್ತಿ ತರಲಿ ಎಂದು ಸ್ಪೋರ್ಟ್ಸ್ ಮೇಲ್ ಶುಭ ಹಾರೈಸುತ್ತಿದೆ.

Related Articles