ಸಾನ್ವಿ, ತೇಶುಭ್ ಗೆ ಟಿಟಿ ಪ್ರಶಸ್ತಿ
ಸ್ಪೋರ್ಟ್ಸ್ ಮೇಲ್ ವರದಿ
ರಾಜ್ಯ ಟೇಬಲ್ ಟೆನಿಸ್ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯ ರಾಂಕಿಂಗ್ ಟೇಬಲ್ ಟೆನಿಸ್ ಕಾಸ್ಮೋಸ್ ಕಪ್ ಚಾಂಪಿಯನ್ ಷಿಪ್ ನಲ್ಲಿ ಬೆಳಗಾವಿಯ ಸಾನ್ವಿ ಮಾಡೇಕರ್ ಹಾಗೂ ತೇಶುಭ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸಾನ್ವಿ ೧೧-೫, ೧೧-೯, ೧೧-೮ ಅಂತರದಲ್ಲಿ ಬೆಳಗಾವಿಯ ಆಯುಷಿ ಗೋಡ್ಸೆ ವಿರುದ್ಧ ಜಯ ಸಾಧಿಸಿದರು. ಸೆಮಿಫೈನಲ್ ಪಂದ್ಯದಲ್ಲಿ ಸಾನ್ವಿ ೧೧-೧, ೧೧-೨, ೧೧-೦ ಅಂತರದಲ್ಲಿ ಹಂಸಿನೀ ಅರುಣ್ ವಿರುದ್ಧ ಜಯ ಗಳಿಸಿದರು. ಆಯುಷಿ ಗೋಡ್ಸೆ ೧೧-೬, ೧೧-೬, ೧೧-೫ ಅಂತರದಲ್ಲಿ ಗೆದ್ದು ಫೈನಲ್ ತಲುಪಿದರು.
ಬಾಲಕರ ವಿಭಾಗದಲ್ಲಿ ತೇಶುಭ್ ೧೨-೧೦, ೧೦-೧೨, ೧೧-೭, ೧೧-೯ ಅಂತದಲ್ಲಿ ಶೆಶಾಂತ್ ರಾಮಸ್ವಾಮಿ ವಿರುದ್ಧ ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು. ಸೆಮಿಫೈನಲ್ ನಲ್ಲಿ ಶೆಶಾಂತ್ ೧೧-೯, ೧೧-೨, ೧೧-೮ ಅಂತರದಲ್ಲಿ ಮೋಹನೀಶ್ ನಂದಿ ನಾರಾ ವಿರುದ್ಧ ಜಯ ಗಳಿಸಿದರು. ತೇಶುಭ್ ೧೧-೭, ೧೧-೫, ೧೧-೮ ಅಂತದಲ್ಲಿ ಅರ್ಣವ ವಿರುದ್ಧ ಗೆದ್ದು ಫೈನಲ್ ತಲುಪಿದರು.