ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್, ಕರ್ನಾಟಕದ ದೊಡ್ಡ ಗಣೇಶ್ ಅವರು ಕೀನ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡದ ಕೋಚ್ ಆಗಿ ಒಂದು ತಿಂಗಳು ಮುಗಿಯುತ್ತಿದ್ದಂತೆ ಅವರನ್ನು ಆ ಹುದ್ದೆಯಿಂದ ವಜಾಗೊಳಿಸಲಾಗಿದೆ. Indian former player Karnataka Dodda Ganesh removed as head coach of Kenya Cricket team.
ನಾಲ್ಕು ಟೆಸ್ಟ್ ಹಾಗೂ ಒಂದು ಏಕದಿನ ಪಂದ್ಯವನ್ನಾಡಿರುವ ದೊಡ್ಡ ಗಣೇಶ್ ಅವರನ್ನು ಒಂದು ವರ್ಷದ ಗುತ್ತಿಗೆಗೆ ಆಯ್ಕೆ ಮಾಡಲಾಗಿದೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಆದರೆ ನೇಷನ್.ಆಫ್ರಿಕಾ ಮಾಡಿರುವ ವರದಿ ಪ್ರಕಾರ ದೊಡ್ಡಗಣೇಶ್ ಅವರನ್ನು ಕಾಯಂ ಅಲ್ಲದ ಅವಧಿಗೆ ನಿಯುಕ್ತಿಗೊಳಿಸಲಾಗಿದೆ. ಆಗಸ್ಟ್ 28ರಂದು ಕೀನ್ಯಾ ಕ್ರಿಕೆಟ್ ಮಂಡಳಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕೀನ್ಯಾ ಕ್ರಿಕೆಟ್ ಮಂಡಳಿ ಉದ್ದೇಶಿತ ಗುತ್ತಿಗೆಯನ್ನು ಮುಂದುವರಿಸಲು ಅಸಾಧ್ಯ ಎಂದು ತಿಳಿಸಿದೆ.