Thursday, October 10, 2024

ನಿಮ್ಮ ಮಕ್ಕಳು ಒಲಿಂಪಿಯನ್‌ ಆಗಬೇಕೆ ? ನಿಮ್ಮ ಕ್ರೀಡಾ ಆಯ್ಕೆ ಇಲ್ಲಿದೆ!

ಬೆಂಗಳೂರು: ಮೊಬೈಲ್‌ ಗೇಮ್‌ ಹೊರತುಪಡಿಸಿ ನಮ್ಮ ಆರೋಗ್ಯ ಉತ್ತಮಪಡಿಸಿಕೊಳ್ಳಲು ಯಾವುದೇ ಆಟದಲ್ಲಿ ತೊಡಗಿಸಿಕೊಂಡರೂ ಚಿಂತೆ ಇಲ್ಲ. ಆದರೆ ಒಲಿಂಪಿಕ್ಸ್‌ ಕ್ರೀಡೆಗಳಲ್ಲಿ ತೊಡಗಿಸಿಕೊಂಡರೆ ಅದರಿಂದ ವೃತ್ತಿಪರ ಕ್ರೀಡಾಪಟುಗಳಾಗಲು ಉತ್ತಮ ಅವಕಾಶವಿರುತ್ತದೆ. ಶಿಕ್ಷಣ, ಉದ್ಯೋಗಕ್ಕೂ ನೆರವಾಗುತ್ತದೆ. Want to become a Olympian? please opt Olympic sports

ನಡಿಗೆ ಕೂಡ ಒಂದು ಕ್ರೀಡೆ. ಉತ್ತಮವಾಗಿ ನಡೆಯುವವರು ರೇಸ್‌ ವಾಕ್‌ನಲ್ಲಿ ಪಾಲ್ಗೊಳ್ಳಬಹುದು. ಉತ್ತಮವಾಗಿ ಓಡುವವರು ಮ್ಯಾರಥಾನ್‌, ಶಾರ್ಟ್‌ ರೇಸ್‌ಗಳಲ್ಲೂ ಪಾಲ್ಗೊಳ್ಳಬಹುದು. ಕೆಲವರಿಗೆ ಯಾವ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಯಶಸ್ಸು ಸಿಗುತ್ತದೆ, ಸರಕಾರದ ನೆರವು ಸಿಗುತ್ತದೆ ಎಂಬುದರ ಅರಿವಿಲ್ಲ. ಉದಾಹರಣೆಗೆ ಬಾಡಿಬಿಲ್ಡಿಂಗ್‌ ಒಂದು ಉತ್ತಮ ಕ್ರೀಡೆ ಆದರೆ ಒಲಿಂಪಿಕ್ಸ್‌ನಲ್ಲಿ ಆ ಕ್ರೀಡೆಗೆ ಅವಕಾಶವಿಲ್ಲ. ಬಾಡಿಬಿಲ್ಡರ್‌ಗಳಿಗೆ ಸರಕಾರದ ನೆರವು ಸಿಗುವುದಿಲ್ಲ. ಏಕೆಂದರೆ ಅದು ಒಲಿಂಪಿಕ್ಸ್‌ ಕ್ರೀಡೆ ಅಲ್ಲ ಎಂಬ ಷರಾ ಇರುತ್ತದೆ. ಕ್ರಿಕೆಟ್‌ ಕೂಡ ಇದುವರೆಗೂ ಒಲಿಂಪಿಕ್ಸ್‌ ಕ್ರೀಡೆಯಾಗಿರಲಿಲ್ಲ.  ಆದರೆ ಇನ್ನು ಮುಂದೆ ಒಲಿಂಪಿಕ್ಸ್‌ ಕ್ರೀಡೆಯಾಗಲಿದೆ. ಅದರಲ್ಲಿ ಅರ್ಹತೆ ಇರುವ ಎಲ್ಲರೂ ಪಾಲ್ಗೊಳ್ಳಲು ಸಾಧ್ಯವಿಲ್ಲ. ಆದರೆ ಇತರ ಒಲಿಂಪಿಕ್ಸ್‌ ಕ್ರೀಡೆಗಳಲ್ಲಿ ಅರ್ಹತೆ ಇರುವ ಎಲ್ಲರೂ ಪಾಲ್ಗೊಳ್ಳಬಹುದು. ಕಬಡ್ಡಿ ಮತ್ತು ಖೋ ಖೋ ಕ್ರೀಡೆಗಳಲ್ಲಿ ವೃತ್ತಿಪರತೆ ಪಡೆದು ಲೀಗ್‌ಗಳಲ್ಲಿ ಪಾಲ್ಗೊಳ್ಳಬಹುದು, ಆದರೆ ಸದ್ಯ ಒಲಿಂಪಿಕ್ಸ್‌ನಲ್ಲಿ ಈ ಕ್ರೀಡೆ ಇಲ್ಲ. ಈ ಎರಡೂ ಕ್ರೀಡೆಗಳಿಗೂ ಈಗ ಉತ್ತಮ ಬೇಡಿಕೆ ಇದೆ.

ಉದ್ಯೋಗಕ್ಕೆ ನೆರವಾಗು ಕ್ರೀಡೆ ಆಯ್ಕೆ ಮಾಡಿ: ಸರಕಾರ ಮತ್ತು ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕೆಲಸ ನೀಡುವಾಗ ಒಲಿಂಪಿಕ್ಸ್‌ ಕ್ರೀಡೆಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ಮೆಡಿಕಲ್‌ ಮತ್ತು ಎಂಜಿನಿಯರಿಂಗ್‌ ಓದುವಾಗಲೂ ಅಂಕಗಳನ್ನು ನೀಡುವಾಗ ಒಲಿಂಪಿಕ್ಸ್‌ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಚಾಂಪಿಯನ್‌ ಆದವರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಂಡವರಿಗೆ ಹೆಚ್ಚು ಆದ್ಯತೆ ನೀಡುತ್ತಾರೆ.

ನಮ್ಮೂರಿನ ಒಂದು ಘಟನೆ ಕೇಳಿ: ಉಡುಪಿ ಜಿಲ್ಲೆಯ ಸಾಸ್ತಾನದ ಪಾಂಡೇಶ್ವರ ಸುರೇಶ್‌ ಪೂಜಾರಿ ಎಂಬುವರು ಪಂಜ ಕುಸ್ತಿ (ಆರ್ಮ್‌ ರೆಸ್ಲಿಂಗ್‌) ದಿವ್ಯಾಂಗರ ವಿಭಾಗದಲ್ಲಿ ಕಳೆದ ವರ್ಷ ಎರಡು ಚಿನ್ನದ ಪದಕ ಗೆದ್ದರು. ಈ ವರ್ಷ ಅವರಿಗೆ ಗ್ರೀಸ್‌ನಲ್ಲಿ ನಡೆಯುವ ಚಾಂಪಿಯನ್‌ಷಿನಲ್ಲಿ ಪಾಲ್ಗೊಳ್ಳಲು ಆರ್ಥಿಕ ಸಮಸ್ಯೆಯಾಗಿದೆ. ಏಕೆಂದರೆ ಆರ್ಮ್‌ ರೆಸ್ಲಿಂಗ್‌ ಒಲಿಂಪಿಕ್ಸ್‌ ಕ್ರೀಡೆಗಳ ಪಟ್ಟಿಯಲ್ಲಿಲ್ಲ. ಸರಕಾರ ಇಂಥ ಸಾಧಕರಿಗೆ ನೆರವು ನೀಡಲು ಮುಂದೆ ಬರುವುದಿಲ್ಲ, ಅವರಿಗೆ ನೆರವು ನೀಡುವ ಆಯ್ಕೆ ಇರುವುದಿಲ್ಲ. ಇನ್ನು ಕೆಲವು ರಾಜ್ಯಗಳಲ್ಲಿ ಈ ಎಲ್ಲ ಕಾನೂನನ್ನು ಮೀರಿ ಸಹಾಯ ಮಾಡುವುದಿದೆ, ಅದು ಮಾನವೀಯ ನೆಲೆ ಎಂದು ಹೇಳಬಹುದು. ಸುರೇಶ್‌ ಪೂಜಾರಿ ಅವರು ಇತರ ಯಾವುದೇ ಕ್ರೀಡೆಯಲ್ಲಿ ಈ ಸಾಧನೆ ಮಾಡಿರುತ್ತಿದ್ದರೆ ಅವರು ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಇನ್ನೊಬ್ಬರಲ್ಲಿ ನೆರವು ಅಥವಾ ಪ್ರಾಯೋಜಕತ್ವ ಕೇಳಬೇಕಾದ ಅಗತ್ಯ ಇರುತ್ತಿರಲಿಲ್ಲ.

ಒಲಿಂಪಿಕ್ಸ್‌ನಲ್ಲಿ 40 ಕ್ರೀಡೆಗಳು:  ಒಲಿಂಪಿಕ್ಸ್‌ನಲ್ಲಿ ಎರಡು ಪ್ರಕಾರ. ಸಮ್ಮರ್‌ ಮತ್ತು ವಿಂಟರ್‌ ಒಲಿಂಪಿಕ್ಸ್‌. ಭಾರತ ಹೆಚ್ಚಾಗಿ ಬೇಸಿಗೆಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತದೆ. ಈಗ ಬೇಸಿಗೆಯ ಒಲಿಂಪಿಕ್ಸ್‌ನಲ್ಲಿ 40 ಕ್ರೀಡೆಗಳಿವೆ. ಸಮ್ಮರ್‌ ಒಲಿಂಪಿಕ್ಸ್‌ನಲ್ಲಿ ಆಗಾಗ ಒಂದು ಕ್ರೀಡೆಯನ್ನು ಸೇರಿಸಿ ಇನ್ನೊಂದು ಕ್ರೀಡೆಯನ್ನು ಕೈ ಬಿಡುವುದಿದೆ. ಉದಾಹರಣೆಗೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬ್ರೇಕ್‌ಡಾನ್ಸ್‌ ಕ್ರೀಡೆಯನ್ನು ಅಳವಡಿಸಿದರು ಆದರೆ ಅದು ಮುಂದಿನ ಒಲಿಂಪಿಕ್ಸ್‌ಗೆ ಇಲ್ಲ ಎಂದು ಘೋಷಿಸಲಾಗಿದೆ. ಹೀಗೆ ಒಲಿಂಪಿಕ್ಸ್‌ ಕ್ರೀಡೆಗಳ ಸಂಖ್ಯೆಯಲ್ಲಿ ಏರಿಕೆ ಮತ್ತು ಇಳಿಕೆ ಆಗುತ್ತಲೇ ಇರುತ್ತದೆ. ನಾವು ನಮ್ಮ ದೇಶದ ಹನಾಮಾನಕ್ಕೆ ಅನುಗುಣವಾಗಿ ಇಲ್ಲಿ ಯಾವ ಕ್ರೀಡೆಯನ್ನು ಅಭ್ಯಾಸ ಮಾಡಬಹುದೋ ಅದನ್ನು ಮಾತ್ರ ಆಯ್ಕೆ ಮಾಡಿಕೊಂಡರೆ ಉತ್ತಮ.

ಆರ್ಥಿಕವಾಗಿ ಸಮರ್ಥರಿರುವವರು, ಸಾಹಸ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಬಯಸುವವರು, ಬೈಕ್‌ ರೇಸ್‌ ಮೋಟಾರ್‌ ರೇಸ್‌ಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬಹುದು.

ಇಲ್ಲಿ ಒಂದಿಷ್ಟು ಒಲಿಂಪಿಕ್ಸ್‌ ಕ್ರೀಡೆಗಳಿಗೆ, ಅವುಗಳಲ್ಲಿ ಕೆಲವು ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಆಡುವ ಕ್ರೀಡೆಗಳೂ ಇವೆ ಇದು ಓದುಗರ ಅನುಕೂಲಕ್ಕಾಗಿ. ಈ ಕ್ರೀಡೆಗಳು ಪ್ಯಾರಾಲಿಂಪಿಕ್ಸ್‌ನಲ್ಲೂ ಇರುತ್ತವೆ ಎಂಬುದು ಗಮನಾರ್ಹ.

A

ಅಕ್ರೋಬ್ಯಾಟಿಕ್‌ ಜಿಮ್ನಾಸ್ಟಿಕ್‌, ಆರ್ಚರಿ (ಬಿಲ್ಗಾರಿಕೆ), ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್‌, ಅಥ್ಲೆಟಿಕ್ಸ್‌, ಆರ್ಟಿಸ್ಟಿಕ್‌ ಸ್ವಿಮ್ಮಿಂಗ್‌,

B

ಬ್ಯಾಡ್ಮಿಂಟನ್‌, ಬೇಸ್‌ಬಾಲ್‌ 5, ಬೇಸ್‌ಬಾಲ್‌ ಸಾಫ್ಟ್‌ಬಾಲ್‌, ಬಾಸ್ಕೆಟ್‌ಬಾಲ್‌, ಬಾಸ್ಕೆಟ್‌ಬಾಲ್‌ 3×3, ಬೀಚ್‌ಹ್ಯಾಂಡ್‌ಬಾಲ್‌, ಬೀಚ್‌ ವಾಲಿಬಾಲ್‌, ಬಾಕ್ಸಿಂಗ್‌, ಬ್ರೇಕಿಂಗ್‌ (ಬ್ರೇಕಿಂಗ್‌ ಮುಂದಿನ ಒಲಿಂಪಿಕ್ಸ್‌ಗೆ ಸಂಶಯ)

C

ಕೆನಾಯ್‌ ಸಾಲೊಮ್‌, ಕೆನಾಯ್‌ ಸ್ಪ್ರಿಂಟ್‌, ಕೋಸ್ಟಲ್‌ ರೋವಿಂಗ್‌, ಕ್ರಿಕೆಟ್‌, ಕ್ರಾಸ್‌ಕಂಟ್ರಿ ಸ್ಕಿಯಿಂಗ್‌, ಕರ್ಲಿಂಗ್‌, ಸೈಕ್ಲಿಂಗ್‌ ಬಿಎಂಎಕ್ಸ್‌ ಫ್ರೀಸ್ಟೈಲ್‌, ಸೈಕ್ಲಿಂಗ್‌ ಬಿಎಂಎಕ್ಸ್‌ ರೇಸಿಂಗ್‌, ಸೈಕ್ಲಿಂಗ್‌ ಮೌಂಟೇನ್‌ ಬೈಕ್‌, ಸೈಕ್ಲಿಂಗ್‌ ರೋಡ್‌, ಸೈಕ್ಲಿಂಗ್‌ ಟ್ರ್ಯಾಕ್‌.

D ಡೈವಿಂಗ್‌ E ಇಕ್ವೆಸ್ಟ್ರಿಯನ್‌ (ಕುದುರೆ ಸವಾರಿ)

F

ಫೆನ್ಸಿಂಗ್‌, ಫಿಗರ್‌ ಸ್ಕೇಟಿಂಗ್‌, ಫ್ಲ್ಯಾಗ್‌ ಫುಟ್ಬಾಲ್‌, ಫುಟ್ಬಾಲ್‌, ಫ್ರೀಸ್ಟೈಲ್‌ ಸ್ಕಿಯಿಂಗ್‌, ಫುಟ್ಸಾಲ್‌.

G ಗಾಲ್ಫ್‌, H  ಹ್ಯಾಂಡ್‌ಬಾಲ್‌, ಹಾಕಿ. I ಐಸ್‌ ಹಾಕಿ, J ಜೂಡೋ L ಲಾಕ್ರೂಸ್‌ ಲ್ಯೂಗ್‌ M ಮ್ಯಾರಥಾನ್‌ ಈಜು, ಮೋಡರ್ನ್‌ ಪೆಂಟಥ್ಲಾನ್‌.

R

ರಿದಮಿಕ್‌ ಜಿಮ್ನಾಸ್ಟಿಕ್‌, ರೋಲರ್‌ ಸ್ಪೀಡ್‌ ಸ್ಕೇಟಿಂಗ್‌, ರೋವಿಂಗ್‌, ರಬ್ಬಿ 7.

S

ಸೈಲಿಂಗ್‌, ಶೂಟಿಂಗ್‌, ಶಾರ್ಟ್‌ ಟ್ರ್ಯಾಕ್‌ ಸ್ಪೀಡ್‌ ಸ್ಕೇಟಿಂಗ್‌, ಸ್ಕೇಟ್‌ಬೋರ್ಡಿಂಗ್‌, ಸ್ಕೆಲೆಟಾನ್‌, ಸ್ಕಿ ಜಂಪಿಂಗ್‌, ಸ್ಕೀ ಮೌಂಟನೇರಿಂಗ್‌, ಸ್ನೋಬೋರ್ಡ್‌, ಸ್ಪೀಡ್‌ ಸ್ಕೇಟಿಂಗ್‌, ಸ್ಪೀರ್ಟ್‌ ಕ್ಲೈಮಿಂಗ್‌, ಸ್ಕ್ವಾಷ್‌, ಸರ್ಫಿಂಗ್‌, ಸ್ಮಿಮಿಂಗ್‌.

T

ಟೇಬಲ್‌ ಟೆನಿಸ್‌, ಟೆಕ್ವಾಂಡೋ, ಟೆನ್ನಿಸ್‌, ಟ್ರ್ಯಾಂಪೊಲೈನ್‌, ಟ್ರಯಥ್ಲಾನ್‌.

V ವಾಲಿಬಾಲ್‌

W

ವಾಟರ್‌ ಪೋಲೋ, ವೇಟ್‌ಲಿಫ್ಟಿಂಗ್‌, ರೆಸ್ಲಿಂಗ್‌ (ಕುಸ್ತಿ), ವೂಷು.

Related Articles