Thursday, September 12, 2024

ಟ್ವಿಸ್ಟ್ ಇಲ್ಲದಿರೆ ಟೆಸ್ಟ್ ನಮ್ಮದೇ

ಬರ್ಮಿಂಗ್ ಹ್ಯಾಮ್:ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು ಕೇವಲ 84 ರನ್ ಗಳ ಅಗತ್ಯವಿದೆ. ಇಂಗ್ಲೆಂಡ್ ಗೆ ಜಯ ಗಳಿಸಲು ಕೇವಲ 5 ವಿಕೆಟ್ ಗಳ ಅಗತ್ಯ ಇದ್ದು ಪಂದ್ಯ ಕುತೂಹಲದತ್ತ ಸಾಗಿದೆ.

ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿ ತಂಡಕ್ಕೆ ನೆರವಾಗಿದ್ದ ನಾಯಕ ವಿರಾಟ್ ಕೊಹ್ಲಿ ೪೩ ರನ್ ಗಳಿಸಿ ಕ್ರೀಸಿನಲ್ಲಿದ್ದು ದಿನೇಶ್ ಕಾರ್ತಿಕ್ ೧೮ ರನ್ ಗಳಿಸಿ ನಾಯಕನಿಗೆ ಉತ್ತಮ ರೀತಿಯಲ್ಲಿ ಸಾಥ್ ನೀಡಿದ್ದಾರೆ. ಈ ಇಬ್ಬರು ಅನುಭವಿ ಆಟಗಾರರು ವಿಕೆಟ್ ಕಾಯ್ದುಕೊಂಡು ಆಡಿದರೆ ಭಾರತಕ್ಕೆ ಜಯ ಕಟ್ಟಿಟ್ಟ ಬುತ್ತಿ.
ಇಶಾಂತ್ ಶರ್ಮಾ (೫೧ಕ್ಕೆ ೫ ವಿಕೆಟ್) , ಆರ್. ಅಶ್ವಿನ್ (೫೯ಕ್ಕೆ ೩ ವಿಕೆಟ್) ಹಾಗೂ ಉಮೇಶ್ ಯಾದವ್ (೨೦ಕ್ಕೆ ೨ ವಿಕೆಟ್) ಉತ್ತಮ ಬೌಲಿಂಗ್ ಪ್ರದರ್ಶನ ಮಾಡುವುದರೊಂದಿಗೆ ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್ ನಲ್ಲಿ ಕೇವಲ ೧೮೦ ರನ್ ಗೆ ಪತನ ಕಂಡಿತು. ಇದರೊಂದಿಗೆ ಭಾರತಕ್ಕೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ ೧೯೪ ರನ್ ಗಳ ಸುಲಭ ಗುರಿ ಸಿಕ್ಕಿತು.
ಆದರೆ ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತದ ಆರಂಭ ಉತ್ತಮವಾಗಿರಲಿಲ್ಲ. ೭೮ ರನ್ ಗಳಿಸುವಷ್ಟರಲ್ಲೇ ೫ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.ಮೊದಲ ಇನ್ನಿಂಗ್ಸ್ ನಲ್ಲಿ ೧೪೯ ರನ್ ಗಳಿಸಿ ತಂಡಕ್ಕೆ ರಕ್ಷಣೆ ನೀಡಿದ್ದ ನಾಯಕ ವಿತ್ವಿರಾಟ್ ಕೊಹ್ಲಿ ಮತ್ತೊಮ್ಮೆ ಜವಾಬ್ಧಾರಿಯ ಆಟ ಆಡಿದರು.
ಮೊದಲ ಇನ್ನಿಂಗ್ಸ್ ನಲ್ಲಿ  ಇಂಗ್ಲೆಂಡ್  ೨೮೭ ರನ್ ಗಳಿಸಿತ್ತು. ಭಾರತ ೨೭೪ ರನ್ ಗಳಿಸಿ ಅಲ್ಪ ಹಿನ್ನಡೆ ಕಂಡಿತ್ತು.  ದ್ವಿತೀಯ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ೧೮೦ ರನ್ ಗೆ ಆಲೌಟ್ ಆಗಿತ್ತು.

ರಾಹುಲ್ ವಿಫಲ 

ಚೇತೇಶ್ವರ ಪೂಜಾರ ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಕನ್ನಡಿಗ ಕೆ ಎಲ್ ರಾಹುಲ್ ಎರಡೂ ಇನ್ನಿಂಗ್ಸ್ ಗಳಲ್ಲಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ ೪ ರನ್ ಗಳಿಸಿದ ರಾಹುಲ್ ಎರಡನೇ ಇನ್ನಿಂಗ್ಸ್ ನಲ್ಲಿ ೧೩ ರನ್ ಗಳಿಸಿದರು.

Related Articles