Saturday, July 27, 2024

ಹುಬ್ಬಳ್ಳಿ ಟೈಗರ್ಸ್‌ಗೆ ಬುಲ್ಸ್ ಬಲಿ

ಸ್ಪೋರ್ಟ್ಸ್ ಮೇಲ್ ವರದಿ 

ಲೆಗ್ ಸ್ಪಿನ್ನರ್ ಮಹೇಶ್ ಪಟೇಲ್ ಅವರ ಅದ್ಭುತ ಬೌಲಿಂಗ್ ದಾಳಿಗೆ ತತ್ತರಿಸಿದ ಕಳೆದ ಬಾರಿಯ ರನ್ನರ್ ಅಪ್ ತಂಡ ಬಿಜಾಪುರ ಬುಲ್ಸ್  ಹುಬ್ಬಳ್ಳಿ ಟೈಗರ್ಸ್ ವಿರುದ್ಧದ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ 4 ವಿಕೆಟ್‌ಗಳ ಸೋಲನುಭವಿಸಿದೆ.

ಮಹೇಶ್ ಪಟೇಲ್  16  ರನ್‌ಗೆ  3 ವಿಕೆಟ್ ಗಳಿಸುವ ಮೂಲಕ  ಬುಲ್ಸ್ ತಂಡವನ್ನು  ಕೇವಲ 128 ರನ್‌ಗೆ ಕಟ್ಟಿಹಾಕುವಲ್ಲಿ ಟೈಗರ್ಸ್ ಯಶಸ್ವಿಯಾಯಿತು. ಅಲ್ಪ ಮೊತ್ತವನ್ನು ಬೆಂಬತ್ತಿದ ಟೈಗರ್ಸ್  ಮೊಹಮ್ಮದ್ ತಾಹಾ (62) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಸುಲಭ  ಜಯ ಗಳಿಸಿ ಮುನ್ನಡೆಯಿತು.  ತಾಹಾ 50 ಎಸೆತಗಳಲ್ಲಿ  8 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 62 ರನ್ ಗಳಿಸಿ ತಂಡಕ್ಕೆ 4 ವಿಕೆಟ್ ಜಯ ತಂದುಕೊಟ್ಟರು. ಎರಡು ಬಾರಿ ಲೈಫ್  ಪಡೆದರೂ ತಾಹಾ ರನ್ ಗಳಿಕೆಯ ಓಟಕ್ಕೆ ತಡೆಯೊಡ್ಡಲು ಬುಲ್ಸ್ ತಂಡಕ್ಕೆ ಸಾಧ್ಯವಾಗಲಿಲ್ಲ.  45 ರನ್ ಗಳಿಸಿ ಆಡುತ್ತಿರುವಾಗ ಕೆಸಿ ಕಾರಿಯಪ್ಪ ನೋಬಾಲ್ ಎಸೆದರು. ೧೮ನೇ ಓವರ್‌ನಲ್ಲಿ ತಾಹಾ ಅನಗತ್ಯ ರನೌಟ್‌ಗೆ ಬಲಿಯಾದರು. ಈ ಸಂದರ್ಭ  ಬುಲ್ಸ್ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಆದರೆ ಟೈಗರ್ಸ್ ಆಗಲೇ ಜಯಕ್ಕೆ ಅಗತ್ಯವಿರುವ ರನ್ ಗಳಿಸಿತ್ತು.
ಮೌನದೊಂದಿಗೆ ಗೌರವ
ನಮ್ಮನ್ನಗಲಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅವರಿಗೆ ಒಂದು ನಿಮಿಷ ಮೌನ ಆಚರಿಸುವ ಮೂಲಕ ಗೌರವ ಸಲ್ಲಿಸಲಾಯಿತು.
ಬುಲ್ಸ್ ತಂಡ 38 ರನ್‌ಗೆ 1 ವಿಕೆಟ್ ಕಳೆದುಕೊಂಡು ಉತ್ತಮ ಆರಂಭ  ಕಂಡಿತ್ತು. ಆದರೆ 10 ಓವರ್ ಮುಗಿಯುತ್ತಿದ್ದಂತೆ 57 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಾಯಕ ವಿನಯ್ ಕುಮಾರ್ ತಮ್ಮ ಮೊದಲ ಓವರ್‌ನಲ್ಲೇ ಶಿಶಿರ್ ಭವಾನೆ  ಅವರ ವಿಕೆಟ್ ಗಳಿಸಿದರು, ಆದರೆ ಲೆಗ್ ಸ್ಪಿನ್ನರ್ ಪಟೇಲ್ ಬುಲ್ಸ್ ತಂಡದ ರನ್ ಗಳಿಕೆಗೆ ನಿಜವಾದ ಕಡಿವಾಣ ಹಾಕಿದರು. 4-0-16-3 ಉತ್ತಮ ಬೌಲಿಂಗ್ ಮೂಲಕ ಪಟೇಲ್ ಪಂದ್ಯದ ಯಶಸ್ಸಿಗೆ ಕಾರಣಾದರು.7ನೇ ಕ್ರಮಾಂಕದ ಆಟಗಾರ ಎಂ.ಜಿ. ನವೀನ್  4  ಸಿಕ್ಸರ್ ಮೂಲಕ 25 ಎಸೆತಗಳಲ್ಲಿ  44 ರನ್ ಗಳಿಸಿದರೂ ಬೌಲರ್‌ಗಳಿಗೆ ನೆರವಾಗುವಷ್ಟು ರನ್ ದಾಖಲಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್ 

ಬಿಜಾಪುರ ಬುಲ್ಸ್ 
128/7
(ಭರತ್ ಚಿಪ್ಲಿ 29, ನವೀನ್ ಎಂಜಿ 44, ಅನಿಲ್ ಐಜಿ 28ಕ್ಕೆ 2, ಮಹೇಶ್ ಪಟೇಲ್ 16ಕ್ಕೆ 3)
ಹುಬ್ಬಳ್ಳಿ ಟೈಗರ್ಸ್
18.5 ಓವರ್‌ಗಳಲ್ಲಿ  6 ವಿಕೆಟ್‌ಗೆ 131
(ಮೊಹಮ್ಮದ್ ತಾಹಾ 62, ಸುನೀಲ್ ರಾಜು  21 ಕ್ಕೆ  2)

Related Articles