Monday, December 4, 2023

ಹುಬ್ಬಳ್ಳಿ ಟೈಗರ್ಸ್‌ಗೆ ರೋಚಕ ಜಯ

ಸ್ಪೋರ್ಟ್ಸ್ ಮೇಲ್ ವರದಿ 

ಶೋಯೇಬ್ ಮ್ಯಾನೇಜರ್ ಅವರ ಅದ್ಬುತ ಅರ್ಧ ಶತಕದ ನಡುವೆಯೂ ಹುಬ್ಬಳ್ಳಿ ಟೈಗರ್ಸ್ ತಂಡ ಮೈಸೂರು ವಾರಿಯರ್ಸ್ ವಿರುದ್ಧದ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರೋಚಕ ೩ ರನ್‌ಗಳ ಜಯ ಗಳಿಸಿದೆ.

ಶೋಯೇಬ್ ಮ್ಯಾನೇಜರ್ ೩೧ ಎಸೆತಗಳಲ್ಲಿ  ೪ ಬೌಂಡರಿ ಆಆಗೂ ೪ ಸಿಕ್ಸರ್ ನೆರವಿನಿಂದ ೫೮ ರನ್ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.
ಟಾಸ್ ಗೆದ್ದು ಹುಬ್ಬಳ್ಳಿ ಟೈಗರ್ಸ್ ತಂಡದ ನಾಯಕ ನಾಯಕ ಆರ್. ವಿನಯ್ ಕುಮಾರ್ ಬ್ಯಾಟಿಂಗ್ ಆಯ್ದುಕೊಂಡರು. ಮೊಹಮ್ಮದ್ ತಾಹಾ ೪೭ ಎಸೆತಗಳಲ್ಲಿ  ೧೪ ಬೌಂಡರಿ ನೆರವಿನಿಂದ ೬೮ ರನ್ ಗಳಿಸಿದರೆ, ವಿನಯ್ ಕುಮಾರ್ ಕೇವಲ ೧೭ ಎಸೆತಗಳಲ್ಲಿ ಅಜೇಯ ೩೦ ರನ್ ಗಳಿಸುವ ಮೂಲಕ ಹುಬ್ಬಳ್ಳಿ ತಂಡ ೬ ವಿಕೆಟ್ ನಷ್ಟಕ್ಕೆ ೧೮೨ ರನ್ ಗಳಿಸಿತು.
ಪವರ್ ಪ್ಲೇ ೬ ಓವರ್‌ಗಳಲ್ಲಿ ಕೇವಲ ೧ ವಿಕೆಟ್ ನಷ್ಟಕ್ಕೆ ಮೈಸೂರು ವಾರಿಯಾರ್ಸ್ ತಂಡ ೬೩ ರನ್ ಗಳಿಸಿ ಸುಸ್ಥಿತಿಯಲ್ಲಿದ್ದಿತ್ತು. ಸ್ಪಿನ್ ದಾಳಿಗೆ ಸುಲಿಕಿದ ಮೈಸೂರು ವಾರಿಯರ್ಸ್ ಲಗುಬಗನೆ ವಿಕೆಟ್ ಕಳೆದುಕೊಂಡಿತು. ಶೊಯೇಬ್ ಮ್ಯಾನೇಜರ್ ಕ್ರೀಸ್‌ನಲ್ಲಿ ಇರುವವರೆಗೂ ಮೈಸೂರು ಗೆಲ್ಲುವ ಲಕ್ಷಣ ತೋರಿತ್ತು. ಅವರ ನಿರ್ಗಮನದ ನಂತರ ಮೈಸೂರು ಸೋಲಿನ ಕಡೆ ವಾಲಿತು. ಮೊಹಮ್ಮದ್ ತಾಹಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Related Articles