ಎಂಬೆಸಿಯ ಮಿರ್ಜಾಗೆ ಏಷ್ಯನ್ ಬೆಳ್ಳಿ

0
359
ಸ್ಪೋರ್ಟ್ಸ್ ಮೇಲ್ ವರದಿ 

ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಇಕ್ವೆಸ್ಟ್ರಿಯನ್ ಟೀಮ್ ವಿಭಾ ಗದಲ್ಲಿ ಭಾರತ ತಂಡ ಬೆಳ್ಳಿ ಪದಕ ಗೆದ್ದಿದೆ. ಈ ತಂಡದಲ್ಲಿ ಬೆಂಗಳೂರಿನ  ಎಂಬೆಸಿ  ಇಂಟರ್‌ನ್ಯಾಷನಲ್ ರೈಡಿಂಗ್ ಸ್ಕೂಲ್ (ಇಐಆರ್‌ಎಸ್)ನ  ಫೌವಾದ್ ಮಿರ್ಜಾ ಸೇರಿರುವುದು ಹೆಮ್ಮೆಯ ಸಂಗತಿಯ ಫೌವಾದ್ ಮಿರ್ಜಾ ಡ್ರೆಸೇಜ್ ಹಾಗೂ ಕ್ರಾಸ್ ಕಂಟ್ರಿ ಅರ್ಹತಾ ಸುತ್ತಿನಲ್ಲಿ  ೨೨.೪೦ ಅಂಕ ಗಳಿಸಿದರಲ್ಲದೆ, ಮೆಡಲ್ ಸುತ್ತಿನಲ್ಲಿ  ೨೬.೪೦ ಅಂಕ ಗಳಿಸಿ ಫೌವಾದ್  ಭಾರತ ಬೆಳ್ಳಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.

 

ಭಾರತ ಇಕ್ವೆಸ್ಟ್ರಿಯನ್ ತಂಡದಲ್ಲಿ  ರಾಕೇಶ್ ಕುಮಾರ್, ಆಶೀಶ್ ಮಲಿಕ್, ಜಿತೇಂದರ್ ಸಿಂಗ್ ಹಾಗೂ ಫೌವಾದ್ ಮಿರ್ಜಾ ಅವರನ್ನೊಳಗೊಂಡ ತಂಡ ಕೂಡ ಬೆಳ್ಳಿ ಪದಕ ಗೆದ್ದಿದೆ. ಭಾರತ ತಂಡ ೧೨೬.೭೦ ಅಂಕ ಗಳಿಸಿತ್ತು.
ಸೆಗನ್ಯೂರ್ ಮೆಡಿಕಾಟ್ ಕುದುರೆಯನ್ನು ಹೊಂದಿರುವುದು ನನ್ನ ಅದೃಷ್ಟ, ಇದರಿಂದ ಭಾರತಕ್ಕೆ ಎರಡು ಬೆಳ್ಳಿ ಪದಕ ಬಂತು. ಎಂಬೆಸಿ ಗ್ರೂಪ್‌ಗೆ ನಾನು ಚಿರಋಣಿಯಾಗಿದ್ದೇನೆ. ವೀರ್ವಾಣಿ ಹಾಗೂ ಅವರ ತಂಡದ ಬೆಂಬಲ ಇಲ್ಲದೇ ಇರುತ್ತಿದ್ದರೆ ಈ ಸಾಧನೆ ಮಾಡಲು ಅಸಾಧ್ಯವಾಗುತ್ತಿತ್ತು. ಇಕ್ವೆಸ್ಟ್ರಿಯನ್ ಕ್ರೀಡೆಗೆ ಈ ಪದಕ ಮತ್ತಷ್ಟು ಸ್ಫೂರ್ತಿ ತರಲಿದೆ. ಮುಂದಿನ ಚಾಂಪಿಯನ್‌ಷಿಪ್‌ಗಳಲ್ಲಿ ಇನ್ನೂ ಹೆಚ್ಚಿನ ಪದಕ ಗೆಲ್ಲುವೆ ಎಂದು ಫೌವಾದ್ ಹೇಳಿದರು.
ಎಂಬೆಸಿ ಗ್ರೂಪ್‌ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಜೀತು ವಿರ್ವಾನಿ ಮಾತನಾಡಿ, ಭಾರತದಲ್ಲಿ ಇಕ್ವೆಸ್ಟ್ರಿಯನ್ ಕ್ರೀಡೆಗೆ ಸಿಕ್ಕ ಗೌರವ ಇದಾಗಿದೆ. ಫೌವಾದ್ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಸೇನೆಯ ಮೂವರು ರೈಡರ್‌ಗಳು ಅಲ್ಪ ಅವಧಿಯಲ್ಲೇ ವಿದೇಶಿದಲ್ಲಿ ಪಳಗಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಉತ್ತಮ ಪ್ರೋತ್ಸಾಹ ಸಿಕ್ಕಿದರೆ ಈ ಕ್ರೀಡೆಯಲ್ಲಿ ಮತ್ತಷ್ಟು ಪದಕ ಗೆಲ್ಲಬಹುದು ಎಂಬುದನ್ನು ನಮ್ಮ ರೈಡರ್‌ಗಳು ಸಾಬೀತುಪಡಿಸಿದ್ದಾರೆ ಎಂದರು.