ನೆದರ್‌ಲೆಂಡ್-ಭಾರತ ಕ್ವಾರ್ಟರ್‌ಫೈನಲ್ ಕಾದಾಟ ಇಂದು
ಭುವನೇಶ್ವರ:
ತವರು ನೆಲದಲ್ಲಿ ನಡೆಯುತ್ತಿರುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಕಳೆದ 75 ವರ್ಷಗಳ ಇತಿಹಾಸ ಬದಲಿಸುವ ತುಡಿತದಲ್ಲಿರುವ ಭಾರತ ತಂಡ, ಅಂದುಕೊಂಡಂತೆ ಕ್ವಾರ್ಟರ್‌ಫೈನಲ್ ತಲುಪಿದೆ.
ಇಂದು ನೆದರ್‌ಲೆಂಡ ವಿರುದ್ಧ ಅಂತಿಮ ಎಂಟರ ಘಟ್ಟದಲ್ಲಿ ಕಾದಾಟ ನಡೆಸಲಿದೆ. ಉಭಯ ತಂಡಗಳ ಈ ಕಾದಾಟಕ್ಕೆೆ ಭುವನೇಶ್ವರ ಕಳಿಂಗ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧವಾಗಿದೆ.
ಭಾರತ 1975ರ ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್ ತಲುಪುವ ಮೂಲಕ ಚೊಚ್ಚಲ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತ್ತು. ಬಳಿಕ, 1994ರಲ್ಲಿ ಐದನೇ ಸ್ಥಾಾನ ಪಡೆದಿದ್ದು ಬಿಟ್ಟರೆ ಇದುವರೆಗೂ ವಿಶ್ವಕಪ್‌ನಲ್ಲಿ ಭಾರತ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಆದರೆ, ನೇದರ್‌ಲೆಂಡ್ ತಂಡ ಮೂರು ಬಾರಿ ಹಾಕಿ ವಿಶ್ವಕಪ್ ಗೆದ್ದಿದೆ. ಅಲ್ಲದೆ, ಮೂರು ಬಾರಿ ರನ್ನರ್ ಅಪ್ ಸ್ಥಾಾನ ಪಡೆದಿದೆ. ಭಾರತ ಕೇವಲ ಒಂದು ಬಾರಿ ಚಾಂಪಿಯನ್ ಹಾಗೂ ಒಂದು ಬಾರಿ ಮೂರನೇ ಸ್ಥಾಾನ ಪಡೆದಿದೆ.
ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ನೆದರ್‌ಲೆಂಡ್ ಒಂಬತ್ತು ಬಾರಿ ಸೆಣಸಿವೆ. ಇದರಲ್ಲಿ ಉಭಯ ತಂಡಗಳೆರಡು ತಲಾ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿವೆ. ಇನ್ನುಳಿದ ಒಂದು ಪಂದ್ಯ ಡ್ರಾಾನಲ್ಲಿ ಸಮಾಪ್ತಿಯಾಗಿದೆ. ಈ ಪಂದ್ಯಗಳಲ್ಲಿ ಭಾರತ 18 ಗೋಲು ಗಳಿಸಿದರೆ, ನೆದರ್‌ಲೆಂಡ್ 22 ಗೋಲು ದಾಖಲಿಸಿದೆ.
ಹಾಕಿ ವಿಶ್ವ ರ್ಯಾಾಂಕಿಂಗ್‌ನಲ್ಲಿ ಭಾರತ ಐದನೇ ಸ್ಥಾಾನದಲ್ಲಿದ್ದರೆ, ನೆದರ್‌ಲೆಂಡ್ ನಾಲ್ಕನೇ ಸ್ಥಾಾನದಲ್ಲಿದೆ. ಭಾರತ ಹಾಗೂ ನೆದರ್‌ಲೆಂಡ್ ಕೊನೆಯ ಬಾರಿ ಚಾಂಪಿಯನ್ ಟ್ರೋಫಿಯಲ್ಲಿ ಮುಖಾಮಖಿಯಾಗಿದ್ದವು. ಆದರೆ, ಈ ಪಂದ್ಯ 1-1 ಸಮಬಲದೊಂದಿಗೆ ಡ್ರಾಾನಲ್ಲಿ ಮುಕ್ತಾಯವಾಯಿತು. ಉಭಯ ತಂಡಗಳು ಒಟ್ಟು 105 ಬಾರಿ ಸೆಣಸಾಟ ನಡೆಸಿದ್ದು, ಅದರಲ್ಲಿ ಭಾರತ 33 ಬಾರಿ ಜಯ ಸಾಧಿಸಿದೆ. ಇನ್ನೂ, ನೆದರ್‌ಲೆಂಡ್ 48 ಬಾರಿ ಜಯ ಗಳಿಸಿದೆ. ಇನ್ನುಳಿದ ಪಂದ್ಯಗಳು ಡ್ರಾನಲ್ಲಿ ಅಂತ್ಯ ಕಂಡಿವೆ.