Friday, March 29, 2024

ಭಾರತ ವಿಶ್ವಕಪ್ ಕನಸು ಭಗ್ನ: ಫೈನಲ್ ತಲುಪಿದ ಇಂಗ್ಲೆಂಡ್

ಆಂಟಿಗುವಾ:

ನಾಯಕಿ ಹೇದರ್ ನೈಟ್(3) ಮಾರಕ ದಾಳಿ ಹಾಗೂ ಎಮಿ ಎಲ್ಲೆನ್ ಜೋನ್ಸ್(53*) ಸತಾಲಿಯಾ ಸೈವರ್(52*)  ಅವರ ತಲಾ ಅರ್ಧ ಶತಕಗಳ ನೆರವಿನಿಂದ ಇಂಗ್ಲೆಂಡ್ ಐಸಿಸಿ ಮಹಿಳಾ ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತ ವಿರುದ್ಧ ಎಂಟು ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿತು.

ಆ ಮೂಲಕ ಫೈನಲ್ ಪ್ರವೇಶ ಮಾಡಿತು.  ಕಳೆದ ವರ್ಷ ಏಕದಿನ ವಿಶ್ವಕಪ್‍ನ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದ ಭಾರತಕ್ಕೆ ಮತ್ತೊಮ್ಮೆ ಸೋಲಿನ ಸುಳಿಗೆ ಸಿಲುಕಿತು.
ಪ್ರಸಕ್ತ ಟೂರ್ನಿಯಲ್ಲಿ ಬ್ಯಾಟ್ಸ್ ವುಮೆನ್ ಗಳ ಅಮೋಘ ಬ್ಯಾಟಿಂಗ್ ನಿಂದಾಗಿ ಸೋಲರಿಯದೆ ಅಭಿಯಾನ ಮುಂದುವರಿಸಿದ್ದ ಭಾರತಕ್ಕೆ ಆಂಗ್ಲರ ವಿರುದ್ಧ ಬ್ಯಾಟಿಂಗ್ ವೈಫಲ್ಯದಿಂದ ಹೀನಾಯ ಸೋಲು ಅನುಭವಿಸಿಬೇಕಾಯಿತು. ವಿಶ್ವಕಪ್ ಗೆಲ್ಲುವ ಭಾರತದ ಕನಸಿಗೆ ಆಂಗ್ಲರು ತಣ್ಣೀರೆರಚಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕರಾದ ತನಿಯಾ ಭಾಟಿಯಾ ಹಾಗೂ ಸ್ಮøತಿ ಮಂಧಾನ ಜೋಡಿ 43 ರನ್ ಗಳ ಜತೆಯಾಟ ತಂಡಕ್ಕೆ ಉತ್ತಮ ಸಿಕ್ಕಿತು. 23 ಎಸೆತಗಳಿಗೆ 34 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಸ್ಮøತಿ ಮಂಧಾನ, ಎಕೆಲ್‍ಸ್ಟೋನ್ ಗೆ ವಿಕೆಟ್ ಒಪ್ಪಿಸಿದರು. ನಂತರ ಇವರ ಹಿಂದೆಯೇ ಭಾಟಿಯಾ ಹೇದರ್ ನೈಟ್ ಎಸೆತದಲ್ಲಿ ಸೈವರ್ ಗೆ ಕ್ಯಾಚ್ ನೀಡಿ ಹೊರ ನಡೆದರು. ನಂತರ, ರೊಡ್ರಿಗಸ್(26) ಹಾಗೂ ನಾಯಕಿ ಹರ್ಮಾನ್ ಪ್ರೀತ್ ಕೌರ್(16) ಜೋಡಿ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ಭರವಸೆ ಮೂಡಿಸಿದ್ದರು. ಆದರೆ, ರೊಡ್ರಿಗಸ್ ರನ್ ಔಟ್ ಆದರು. ನಂತರ ಇವರ ಹಿಂದೆಯೇ ಹರ್ಮಾನ್ ಪ್ರೀತ್ ಕೌರ್ ಗೊರ್ಡನ್ ಗೆ ವಿಕೆಟ್ ಒಪ್ಪಿಸಿದರು. ನಂತರ. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ವುಮೆನ್ ಗಳು ಇಂಗ್ಲೆಂಡ್ ಬೌಲಿಂಗ್  ಎದುರಿಸುಲ್ಲಿ ಸಫಲವಾಗಲಿಲ್ಲ. ಯಾರೊಬ್ಬರೂ ಎರಡಂಕಿ ರನ್ ದಾಟಲೇ ಇಲ್ಲ. ಅಂತಿಮವಾಗಿ 19.3 ಓವರ್ ಗಳಿಗೆ ಭಾರತ 112 ರನ್ ಗಳಿಗೆ ಆಲ್ ಔಟ್ ಆಯಿತು.
ಇಂಗ್ಲೆಂಡ್ ಪರ ನಾಯಕಿ ಹೇದರ್ ನೈಟ್ 3, ಎಕೆಲ್ ಸ್ಟೋನ್ ಹಾಗೂ ಶುಬ್ಸೊಲೆ ತಲಾ ಎರಡು ವಿಕೆಟ್ ಪಡೆದರು.
113 ರನ್ ಸಾಧಾರಣ ಗುರಿ ಬೆನ್ನತ್ತಿದ ಇಂಗ್ಲೆಂಡ್ 17.1 ಓವರ್ ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಇಂಗ್ಲೆಂಡ್ ತಂಡದ ಮೊತ್ತ 24 ರನ್ ಇರುವಾಗ ಆರಂಭಿಕರಾದ ಬಿಮೌಂಟ್(1) ಹಾಗೂ ಡೇನಿಯಲ್ ವ್ಯಾಟ್(8) ಅವರಿ ವಿಕೆಟ್ ಉರುಳಿತು. ಇದರೊಂದಿಗೆ ಇಂಗ್ಲೆಂಡ್ ಆರಂಭಿಕ ಆಘಾತ ಅನುಭವಿಸಿತು. ಆದರೆ, ನಂತರ ಕ್ರೀಸ್ ನಲ್ಲಿ ಜತೆಯಾದ ಎಮಿ ಎಲ್ಲೆನ್ ಜೋನ್ಸ್ ಹಾಗೂ ನತಾಲಿಯಾ ಜೋಡಿ  92 ರನ್ ಗಳ ಅಮೋಘ ಜತೆಯಾಟ ತಂಡವನ್ನು ಗೆಲುವಿನ ದಡ ಸೇರಿಸಿತು. ಎಲ್ಲೆನ್ ಜೋನ್ಸ್ 47 ಎಸೆತಗಳಿಗೆ ಒಂದು ಸಿಕ್ಸ್ ಹಾಗೂ ಮುರು ಬೌಂಡರಿಯೊಂದಿಗೆ ಅಜೇಯ 53 ರನ್ ಗಳಿಸಿದರೆ, ಮತ್ತೊಂದು ತುದಿಯಲ್ಲಿದ್ದ ನತಾಲಿಯ ಸೈವರ್ 38 ಎಸೆತಗಳಿಗೆ ಐದು ಬೌಂಡರಿಯೊಂದಿಗೆ ಅಜೇಯ 52 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಮೊದಲ ಸೆಮಿಫೈನಲ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 71 ರನ್ ಗಳಿಂದ ಗೆದ್ದಿರುವ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ನಾಳೆ(ನ.24) ಫೈನಲ್ ನಲ್ಲಿ ಸೆಣಸಲಿದೆ.

Related Articles