Friday, December 13, 2024

ಮಗ ಫಾ ಸ್ಟ್…. ಅಪ್ಪ ಸೂಪರ್ ಫಾಸ್ಟ್ ..

ಸೋಮಶೇಖರ್ ಪಡುಕರೆ ಮೂಡಬಿದಿರೆ

ತಂದೆ 100ಮೀ. ಓಟಗಾರ, ರಾಜ್ಯದ ಪರ ಪದಕ ವಿಜೇತ, ಅದೇ ರೀತಿ ಮಗ ಕೂಡ ವೇಗದ ಓಟಗಾರನಾಗಿ ಪದಕ ಗೆದ್ದರೆ ಅಲ್ಲಿ ಎಷ್ಟೊಂದು ಸಂಭ್ರಮ!. ಸೋಮವಾರ ಸಂಜೆ  ಮೈಸೂರಿನ ಸ್ಪರ್ಧಿ ಸುಹಾಸ್ ಗೌಡ ಓಡಲು ಸಜ್ಜಾಗುತ್ತಿರುವಂತೆ ಅವರ ತಂದೆ ಸೋಮಶೇಖರ್ ಎಲ್ಲೋ ಮರೆಯಲ್ಲಿ ಕುಳಿತಿದ್ದರು. ಯಾಕೆಂದರೆ ಕುತೂಹಲ, ಆಂತಕ ಎಲ್ಲವೂ ಇತ್ತು. ಸುಹಾಸ್ 100 ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನ ಗೆದ್ದರು. ಒಬ್ಬ ಅಥ್ಲೀಟ್ ತಂದೆಗೆ ಇದಕ್ಕಿಂತ ಖುಷಿಯ ಸಂಗತಿ ಯಾವುದಿದೆ. ತಂದೆಯ ಕ್ರೀಡೆಯನ್ನೇ ಆಯ್ದುಕೊಳ್ಳಬಹುದು, ಆದರೆ ತಂದೆಯಂತೆ ಯಶಸ್ಸು ಕಾಣುವುದು ನಿರೀಕ್ಷಿಸಿದಷ್ಟು ಸುಲಭವಲ್ಲ. ಸುಹಾಸ್ ಸಾಗಬೇಕಾದ ಹಾದಿ ಇನ್ನೂ ಇದೆ…..

1986ರ ದಸರಾ ಕ್ರೀಡಾಕೂಟದಲ್ಲಿ  ಮೈಸೂರಿನ ಕುವೆಂಪು ನಗರದ ಯುವಕ ಸೋಮಶೇಖರ್ 100 ಮೀ. ಓಟದಲ್ಲಿ 10.60 ಸೆಕೆಂಡುಗಳಲ್ಲಿ ಗುರಿ ತಲುಪಿ ನೂತನ ದಸರಾ ದಾಖಲೆ ಬರೆದರು. ಆ ದಾಖಲೆ ಕಳೆದ 32 ವರ್ಷಗಳಿಂದ ಮುರಿಯಲು ಸಾ‘್ಯವಾಗದಿರುವುದು ವಿಶೇಷ.

ಸೋಮವಾರ ಮೂಡಬಿದಿರೆಯ ಆಳ್ವಾಸ್

ಆತಿಥ್ಯದಲ್ಲಿ ಆರಂಭಗೊಂಡ ರಾಜ್ಯ ಅಥ್ಲೆಟಿಕ್ಸ್

ಚಾಂಪಿಯನ್‌ಷಿಪ್‌ನಲ್ಲಿ  ಸೋಮಶೇಖರ್ ಅವರ ಮಗ ಸುಹಾಸ್ ಎಸ್. ಗೌಡ ಕೂಟದ ಅತ್ಯಂತ ವೇಗದ ವ್ಯಕ್ತಿ ಎಂಬ  ಗೌರವಕ್ಕೆ ಪಾತ್ರರಾದರು. 100 ಮೀ. ಓಟದಲ್ಲಿ ಸುಹಾಸ್, 10.75ಸೆಕೆಂಡುಗಳಲ್ಲಿ ಗುರಿ ತಲುಪಿ ಮೊದಲ ಬಾರಿಗೆ ರಾಜ್ಯಮಟ್ಟದ ಚಿನ್ನ ಗೆದ್ದರು. ಈ ಸಂಭ್ರಮವನ್ನು ಹತ್ತಿರದಲ್ಲೇ ನಿಂತು ನೋಡುತ್ತಿದ್ದ ಮಾಜಿ ಅಥ್ಲೀಟ್ ಸೋಮಶೇಖರ್ ಅವರಲ್ಲೂ ಅತೀವ ಖುಷಿ  ಮನೆ ಮಾಡಿತ್ತು.

ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಸೋಮಶೇಖರ್, ಸತತ ಮೂರು ಬಾರಿ ದಸರಾ ಕ್ರೀಡಾಕೂಟದಲ್ಲಿ ದಾಖಲೆ ಬರೆದಿದ್ದೇನೆ, ಆ ದಾಖಲೆಯನ್ನು ಇದುವರೆಗೂ ಯಾರೂ ಮುರಿದಿರಲಿಲ್ಲ. ನಮ್ಮ ಮಗ ಮುರಿಯುತ್ತಾನೆಂದು ಇದುವರೆಗೂ ಊಹಿಸಿರಲಿಲ್ಲ , ಅವನು ನನ್ನಂತೆ ವೇಗವಾಗಿ ಓಡುತ್ತಿರುವುದೇ  ಖುಷಿ ಎಂದು ಹೇಳಿದರು. ಮೈಸೂರಿನ ಕುವೆಂಪು ನಗರದಲ್ಲಿ ನೆಲೆಸಿರುವ ಸೋಮಶೇಖರ್ ರೇಲ್ವೆಯಲ್ಲಿ ಕಮರ್ಷಿಯಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಅಪ್ಪನ ದಾಖಲೆ ಮುರಿಯುವೆ

ಮೈಸೂರಿನ ಸೊಮಾನಿ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಕಾಂ ವಿದ್ಯಾರ್ಥಿಯಾಗಿರುವ ಸುಹಾಸ್ ಇದುವರೆಗು ಮೈಸೂರು ವಿಶ್ವವಿದ್ಯಾನಿಲಯದ ಕ್ರೀಡಾಕೂಟದಲ್ಲಿ ಎರಡು ಬಾರಿ ಸೆಮಿಫೈನಲ್  ತಲುಪಿರುತ್ತಾರೆ. ರಾಜ್ಯಮಟ್ಟದಲ್ಲಿ 100 ಮೀ. ಓಟದಲ್ಲಿ ಚಿನ್ನ ಗೆದ್ದಿರುವುದು ಇದೇ ಮೊದಲು. ರಾಜ್ಯಮಟ್ಟದಲ್ಲಿ ಇದುವರೆಗೂ ಎರಡು ಬಾರಿ ಫೈನಲ್ ತಲುಪಿರುವ ಸುಹಾಸ್, ಒಂದು ಬಾರಿ ಫೌಲ್  ಸ್ಟಾರ್ಟ್ ಕಂಡಿದ್ದರು.
ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಸುಹಾಸ್, ಚಿನ್ನ ಗೆಲ್ಲುತ್ತೇನೆಂದು  ಊಹಿಸಿರಲಿಲ್ಲ. ಆದರೆ ಉತ್ತಮ ಹೋರಾಟ ನೀಡುವ ಛಲ ಇದ್ದಿತ್ತು. ಎಲ್ಲಕ್ಕಿಂತ ಮುಖ್ಯ ಇದು ನಮ್ಮಪ್ಪನ ಆಸಕ್ತಿಯ ವಿಭಾಗ. ಅವರು ಈಗಾಗಲೇ ಹಲವು ದಾಖಲೆ ಬರೆದಿದ್ದಾರೆ. ಆದರೆ ಅವರಷ್ಟು ಸಾಧನೆ ಮಾಡಲು ಕಷ್ಟಸಾಧ್ಯ. ದಸಾರ ಕ್ರೀಡಾಕೂಟದ ದಾಖಲೆಯನ್ನು ಮುರಿದು, ಇಬ್ಬರ ಹೆಸರು 100 ಮೀ. ಓಟದಲ್ಲಿ ಸದಾ ಹಸಿರಾಗಿ ಉಳಿಯಲಿ ಎಂಬುದು ಆಸೆ, ಎಂದರು.
ಇದೊಂದು ರಾಜ್ಯಮಟ್ಟದ ಕ್ರೀಡಾಕೂಟ, ರಾಷ್ಟ್ರಕ್ಕೆ ಮಟ್ಟಕ್ಕೆ ಇದು ದಾರಿ ಮಾಡಿಕೊಡುತ್ತದೆ. ನನ್ನ ಮಗ ಕಳೆದ ನಾಲ್ಕು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದಾನೆ. ಅವರ ಶ್ರಮದ ವಿಚಾರದಲ್ಲಿ ಯಾವುದೇ ಒತ್ತಡ ಹೇರುವುದಿಲ್ಲ. 24 ವರ್ಷ ಅಥ್ಲೆಟಿಕ್ಸ್‌ನಲ್ಲಿ ತಡವಾಗಿಯಿತು ಎನ್ನಬಹುದು, ಆದರೆ ಓಡುವ ಶಕ್ತಿಯು ವಯಸ್ಸನ್ನು ಹಿಂದಿಕ್ಕಬಲ್ಲದು,  ಎಂದು ಸೋಮಶೇಖರ್ ಹೇಳಿದರು.

Related Articles