Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮೊದಲ ದಿನವೇ 8 ದಾಖಲೆ

ಸ್ಪೋರ್ಟ್ಸ್ ಮೇಲ್ ವರದಿ

ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮೊದಲ ದಿನವೇ ಎಂಟು ಕೂಟ ದಾಖಲೆಗಳು ಮುರಿಯಲ್ಪಟ್ಟವು.

೧೮ ವರ್ಷ ವಯೋಮಿತಿಯ ಡಿಸ್ಕಸ್ ಎಸೆತದಲ್ಲಿ ಆಳ್ವಾಸ್‌ನ ನಾಗೇಂದ್ರ ಅಣ್ಣಪ್ಪ ನಾಯಕ್ ೫೦.೬೯ ಮೀ. ದೂರಕ್ಕೆ ಎಸೆದು ನೂತನ ದಾಖಲೆ ಬರೆದರು. ಈ ಹಿಂದೆ ೨೦೧೩ರಲ್ಲಿ ಗೌತಮ್ ೪೮.೨೦ ಮೀ. ದೂರಕ್ಕೆ ಎಸೆದು ದಾಖಲೆ ಬರೆದಿದ್ದರು.
ಹೈಜಂಪ್‌ನಲ್ಲಿ ಆಳ್ವಾಸ್‌ನ ಎಸ್‌ಬಿ ಸುಪ್ರಿಯಾ ೧.೭೫ ಮೀ. ಎತ್ತರಕ್ಕೆ ಜಿಗಿದು ಹೊಸ ದಾಖಲೆ ಬರೆದರು. ೨೦೦೪ರಲ್ಲಿ ೧.೭೦ ಮೀ. ದೂರಕ್ಕೆ ಎಸೆದು ದಾಖಲೆ  ಬರೆದಿದ್ದರು.
೨೦ ವರ್ಷ ವಯೋಮಿತಿಯ ಬಾಲಕರ ೮೦೦ ಮೀ. ಓಟದಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಶಶಿಧರ್ ಬಿ.ಎಲ್. ೧ ನಿಮಿಷ ೫೩.೭ ಸೆಕೆಂಡುಗಳಲ್ಲಿ ಗುರಿ ತಲುಪಿ ಹೊಸ ಕೂಟ ದಾಖಲೆ ಬರೆದರು. ೨೦೦೪ರಲ್ಲಿ  ಜಯ ಪ್ರಕಾಶ್ ಶೆಟ್ಟಿ ೧ ನಿಮಿಷ ೫೪.೩ ಸೆಕೆಂಡುಗಳಲ್ಲಿ ಗುರಿ ತಲುಪಿ ದಾಖಲೆ ಬರೆದಿದ್ದು, ಇದುವರೆಗಿನ ಉತ್ತಮ ಸಮಯವಾಗಿತ್ತು.
ಟ್ರಿಪಲ್ ಜಂಪ್‌ನಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಸಂದೇಶ್ ಶೆಟ್ಟಿ ೧೫.೫೪ ಮೀ. ದೂರಕ್ಕೆ ಜಿಗಿದ್ದ ಕ್ರೀಡಾಕೂಟದಲ್ಲಿ ಹೊಸ ದಾಖಲೆ ಸೃಷ್ಟಿಸಿದರು. ಅರ್ಷಾದ್ ಎಂ. ೨೦೧೨ರಲ್ಲಿ ನಿರ್ಮಿಸಿದ್ದ ೧೫.೪೭ ಮೀ. ಇದುವರೆಗಿನ ದಾಖಲೆಯಾಗಿತ್ತು.
ಪುರುಷರ ಜಾವೆಲಿನ್ ಎಸೆತದಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಮನು ಡಿ.ಪಿ. ೬೬.೮೨ ಮೀ. ದೂರಕ್ಕೆ ಎಸೆದು ನೂತನ ದಾಖಲೆ ನಿರ್ಮಿಸಿದರು. ೨೦೧೦ರಲ್ಲಿ ಸಮಿತ್ ಡಿ. ಸುವರ್ಣ ಅವರು ೬೫.೦೧ ಮೀ. ದೂರಕಕೆ ಎಸೆದು ದಾಖಲೆ ನಿರ್ಮಿಸಿದ್ದರು.

ಶಾಟ್‌ಪುಟ್‌ನಲ್ಲಿ ಮಾನುಷ್ 

ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯನ್ನು ಪ್ರತಿನಿಧಿಸುತ್ತಿದ್ದ ೨೦ ವರ್ಷ ವಯೋಮಿತಿಯ ವಿಭಾಗದಲ್ಲಿ ಮಾನುಷ್ ೧೭.೭೦ ಮೀ. ದೂರಕ್ಕೆ ಎಸೆದು ದಾಖಲೆ ಬರೆದರು. ಜಾಸನ್ ರುಬೇರ್ ಸಾಲಿನ್ಸ್ ೨೦೧೪ರಲ್ಲಿ ೧೬.೬೨ ಮೀ. ದೂರಕ್ಕೆ ಎಸೆದದ್ದು ಇದುವರೆಗಿನ ದಾಖಲೆಯಾಗಿತ್ತು.

ವೇಗದ ಓಟಗಾರ್ತಿ ಸ್ನೇಹ ಪಿ.ಜೆ.

ಬೆಂಗಳೂರಿನ ಅಥ್ಲಾನ್ ಫ್ಲೀಟ್ ಒಲಿಂಪಸ್‌ನ ಸ್ನೇಹ ಪಿ.ಜೆ.೧೧.೨ ಸೆಕೆಂಡುಗಲ್ಲಿ ೧೦೦ ಮೀ. ಓಟದಲ್ಲಿ ಗುರಿ ತಲುಪಿ ನೂತನ ದಾಖಲೆ ಬರೆದರು. ೧೧.೩ ಸೆಕೆಂಡುಗಳಲ್ಲಿ ಎಚ್.ಎಂ. ಜ್ಯೋತಿ ೨೦೧೫ರಲ್ಲಿ ಈ ದಾಖಲೆ ಬರೆದಿದ್ದರು. ಗಾಯದಿಂದ ಬಳಲುತ್ತಿರುವ ಕಾರಣ ಜ್ಯೋತಿ ಈ ಚಾಂಪಿಯನ್‌ಷಿಪ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡಿರಲಿಲ್ಲ.
೨೦ ವರ್ಷವಯೋಮಿತಿಯ ಬಾಲಕರ ಪೋಲ್ ವಾಲ್ಟ್‌ನಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಫೌಂಡೇಷನ್‌ನ ಯೋಗೀಶ್ ೩.೮೦ ಮೀ. ದೂರಕ್ಕೆ ಎಸೆದು, ದಾಖಲೆ ಬರೆದರು.  ಕಳೆದ ವರ್ಷ ಯೋಗೀಶ್ ಜಿ. ಪಟಗಾರ್ ೩.೭೬ ಮೀ. ದೂರಕ್ಕೆ ಎಸೆದದದ್ದು ಇದುವರೆಗಿನ ದಾಖಲೆಯಾಗಿತ್ತು.

administrator