Friday, December 13, 2024

ಪುಣೆ ತಂಡಕ್ಕೆ ಫಿಲ್ ಬ್ರೌನ್ ಕೋಚ್

ಸ್ಪೋರ್ಟ್ಸ್ ಮೇಲ್ ವರದಿ

ರಾಜೇಶ್ ವಾಧ್ವಾನ್ ಹಾಗೂ ಬಾಲಿವುಡ್ ಸ್ಟಾರ್ ಅರ್ಜುನ್ ಕಪೂರ್ ಮಾಲೀಕತ್ವದ ಇಂಡಿಯನ್ ಸೂಪರ್ ಲೀಗ್ ಕ್ಲಬ್ ಎಫ್ ಸಿ ಪುಣೆ ಸಿಟಿ ತಂಡ ಈ ಋತುವಿನ ಉಳಿದ ಪಂದ್ಯಗಳಿಗಾಗಿ ಫಿಲ್ ಬ್ರೌನ್ ಅವರನ್ನು ಪ್ರಧಾನ ಕೋಚ್ ಆಗಿ ನೇಮಿಸಿದೆ.

ಬ್ಲ್ಯಾಕ್ ಪೂಲ್, ಸೌತ್‌ಎಂಡ್ ಯುನೈಟೆಡ್, ಪ್ರೆಸ್ಟಾನ್ ನಾರ್ತಎಂಡ್, ಡರ್ಬಿ ಕೌಂಟಿ ಹಾಗೂ ಹಲ್ ಸಿಟಿ ತಂಡಗಳಿಗೆ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದ ಇಂಗ್ಲೆಂಡ್‌ನ ಬ್ರೌನ್ ಅಪಾರ ಅನುಭವ ಹೊಂದಿರುವ ಕೋಚ್. ಆಡಿದ ಹಾಗೂ ಮ್ಯಾನೇಜರ್ ಆಗಿಯೂ ಕಾರ್ಯನಿರ್ವಹಿಸಿರುವ ಬ್ರೌನ್ ಅವರಿಂದ ತಂಡಕ್ಕೆ ಹೆಚ್ಚಿನ ನೆರವಾಗಲಿದೆ. ಹಲ್‌ಸಿಟಿ ತಂಡದ ಯಶಸ್ಸಿನಿಂದಾಗಿ ಪ್ರೀಮಿಯರ್ ಲೀಗ್‌ಗೆ ಭಡ್ತಿ ಸಿಕ್ಕಿತ್ತು. ಅವರನ್ನು ಅತ್ಯಂತ ಆತ್ಮೀಯವಾಗಿ ಕ್ಲಬ್‌ಗೆ ಸ್ವಾಗತಿಸುತ್ತಿದ್ದೇವೆ ಎಂದು ಪುಣೆ ತಂಡದ ಸಿಇಒ ಗೌರವ್ ಮಾಡ್ವೆಲ್ ಹೇಳಿದ್ದಾರೆ.
1999ರಲ್ಲಿ ಕೋಚ್ ಆಗಿ ಕಾರ್ಯ ಆರಂಭ ಮಾಡುವುದಕ್ಕೆ ಮೊದಲು ಬ್ರೌನ್ 18 ವರ್ಷಗಳ ಕಾಲ ವಿವಿಧ  ಕ್ಲಬ್‌ಗಳ ಪರ ಆಡಿದ್ದಾರೆ.

Related Articles