Friday, December 13, 2024

ಡಬಲ್ಸ್ ನಲ್ಲಿ ಕ್ವಾರ್ಟರ್ ತಲುಪಿದ ರಾಮನಾಥನ್

ಏಜೆನ್ಸಿಸ್ ಹೊಸದಿಲ್ಲಿ 

ಚೀನಾದಲ್ಲಿ ನಡೆಯುತ್ತಿರುವ ಶೆಂಜೆನ್ ಚಾಲೆಂಜರ್ಸ್ ಟೂರ್ನಿಯ ಪುರುಷರ ಡಬಲ್ಸ್ ನಲ್ಲಿ ಭಾರತದ ರಾಮ್ ಕುಮಾರ್ ರಾಮನಾಥನ್ ಹಾಗೂ ಸಾಕೇತ್ ಮೈನೆನಿ ಜೋಡಿಯು ಕ್ವಾರ್ಟರ್ ಫೈನಲ್ ತಲುಪಿದೆ. 

ವಿಶ್ವದ ಮುರನೇ ಶ್ರೇಯಾಂಕದ ಚೀನಾದ ಮಾಯೊ ಷಿನ್ ಗಾಂಗ್ ಹಾಗೂ ಜೆ ಝಾಂಗ್ ಜೋಡಿಯ ವಿರುದ್ಧ ಅಂತಿಮ 16ರ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ರಾಮ್ ಕುಮಾರ್ ಹಾಗೂ ಸಾಕೇತ್ ಮೈನೆನಿ ಜೋಡಿ 6-3, 3-6, 10-8 ಅಂತರದಲ್ಲಿ ಜಯ ಸಾಧಿಸುವ ಮೂಲಕ ಅಂತಿಮ ಎಂಟರ ಘಟ್ಟಕ್ಕೆ ಲಗ್ಗೆ  ಇಟ್ಟಿತು.
ಇದಕ್ಕೂ ಮುನ್ನ ರಾಮನಾಥನ್ ಪುರುಷರ ಸಿಂಗಲ್ಸ್ ನಲ್ಲಿ ಈಜಿಪ್ಟ್ ನ ಮೊಹಮದ್ ಸಾಫ್ವತ್ ವಿರುದ್ಧ 6-7, 4-6 ನೇರ ಸೆಟ್ ಗಳಿಂದ ಮಣಿದಿದ್ದರು.
 ಜೀವನ್ ಹಾಗೂ ಶ್ರೀ ರಾಮ್ ಬಾಲಾಜಿ ಭಾರತದ ಮತ್ತೊಂದು ಪುರುಷರ ಜೋಡಿಯು ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಎಂ. ಸಾಫ್ವಾತ್ ಮತ್ತು ನೆಡೊವ್ಯೊಯೊ ಜೋಡಿಯನ್ನು 7-5, 2-6, 10-7  ಅಂತರದಲ್ಲಿ ಸೋಲಿಸಿ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶ ಮಾಡಿತು.

Related Articles