Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಸಿಗದ ವೇತನ ಫುಟ್ಬಲ್‌ ಆಟಗಾರರಿಂದ ತರಬೇತಿಗೆ ಬಹಿಷ್ಕಾರ?!

ಕೋಲ್ಕೋತಾ: ಆಟಗಾರರನ್ನು ಚೆನ್ನಾಗಿ ನೋಡಿಕೊಂಡರೆ ಅವರೂ ಚೆನ್ನಾಗಿಯೇ ಆಡುತ್ತಾರೆ. ಭಾರತದಲ್ಲಿ ಫುಟ್ಬಾಲ್‌ ಯಾಕೆ ಸೋತಿದೆ ಎಂಬುದಕ್ಕೆ ಇಲ್ಲೊಂದು ಉತ್ತಮ ನಿದರ್ಶನವಿದೆ. ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಆಡುತ್ತಿರುವ ಮೊಹಮ್ಮದನ್‌ ಫುಟ್ಬಾಲ್‌ ಕ್ಲಬ್‌ ತಂಡದ ಆಟಗಾರರು ವೇತನ ಬಾಕಿ ಇರುವುದನ್ನು ವಿರೋಧಿಸಿ ಅಭ್ಯಾಸ ಮಾಡಲು ಅಂಗಣಕ್ಕೆ ಇಳಿದಿಲ್ಲ ಎಂದು ವರದಿಯಾಗಿದೆ. Unpaid wages Mohammedan sports club players boycott the training?

ಕಳೆದ ಮೂರು ತಿಂಗಳಿಂದ ಆಟಗಾರರಿಗೆ ಬಾಕಿ ಇರುವ ವೇತನ ನೀಡುತ್ತಿರಲಿಲ್ಲ. ಜನವರಿ 15ರಂದು ನೀಡುವುದಾಗಿ ತಂಡದ ಆಡಳಿತ ಮಂಡಳಿ ಘೋಷಿಸಿತ್ತು. ಆದರೆ 15 ರಂದು ಚನ್ನೈಯನ್‌ ಎಫ್‌ಸಿ ವಿರುದ್ಧದ ಪಂದ್ಯಕ್ಕೂ ಮುನ್ನ ಆಟಗಾರರು ತಮ್ಮ ಪ್ರತಿಭಟನೆ ನಡೆಸಿದ್ದಾರೆ. ವಿವೇಕಾನಂದ ಯುವ ಭಾರತಿ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊಹಮ್ಮದನ್‌ ಎಫ್‌ಸಿ ಹಾಗೂ ಚೆನ್ನೈಯನ್‌ ಎಫ್‌ಸಿ 2-2 ಗೋಲುಗಳ ಅಂತರದಲ್ಲಿ ಡ್ರಾ ಸಾಧಿಸಿದ್ದವು.

ಆದರೆ ಕ್ಲಬ್‌ನ ಕಾರ್ಯದರ್ಶಿ ಇಷ್ತಿಕ್‌ ಅಹಮ್ಮದ್‌ ಈ ರೀತಿಯ ಘಟನೆಯೇ ನಡೆದಿಲ್ಲ ಎಂದು ವರದಿಯನ್ನು ತಳ್ಳಿಹಾಕಿದ್ದಾರೆ. “ಕ್ಲಬ್‌ನಲ್ಲಿ ಹೂಡಿಕೆ ಮಾಡಿದವರಿಗೂ ನಿರೀಕ್ಷೆಗಳಿರುತ್ತವೆ. ಅವರು ವಿಳಂಬ ಮಾಡಿದಾ ವೇತನದಲ್ಲಿ ಏರು ಪೇರಾಗುತ್ತದೆ. ಕ್ಲಬ್‌ನ ಅನೇಕ ಆಟಗಾರರು ಗಾಯದ ಸಮಸ್ಯೆಯಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಅಂಗಣಕ್ಕೆ ಬರುತ್ತಿಲ್ಲ. ಕ್ಲಬ್‌ ಯಾವುದೇ ರೀತಿಯ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿಲ್ಲ,” ಎಂದಿದ್ದಾರೆ.


administrator