Thursday, March 28, 2024

ಪವಾಡದ ನಿರೀಕ್ಷೆಯಲ್ಲಿ ಮುಂಬೈ

ಗೋವಾ, ಮಾರ್ಚ್ 12

ಮನೆಯಂಗಣದಲ್ಲಿ ಗೋವಾ ವಿರುದ್ಧ ನಡೆದ ಇಂಡಿಯನ್ ಸೂಪರ್ ಲೀಗ್‌ನ  ಮೊದಲ ಹಂತದ ಸೆಮಿೈನಲ್ ಪಂದ್ಯದಲ್ಲಿ ಗೋವಾ ವಿರುದ್ಧ 1-5 ಗೋಲುಗಳ ಅಂತರದಲ್ಲಿ ಸೋಲನುಭವಿಸಿದ ಮುಂಬೈ ತಂಡಕ್ಕೆ ಫೈನಲ್ ತಲುಪಬೇಕಾದರೆ ಮಂಗಳವಾರ ಇಲ್ಲಿನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಜಾರ್ಜ್ ಕೋಸ್ಟಾ ತಂಡದಿಂದ ಪವಾಡದ ನಿರೀಕ್ಷೆಯಲ್ಲಿದ್ದಾರೆ.

‘ಭಾರತದ ಫುಟ್ಬಾಲ್ ಇತಿಹಾಸದಲ್ಲಿ ಯಾವುದೇ ತಂಡವು ಈ ರೀತಿಯ ಹಿನ್ನಡೆ ಕಂಡಿದ್ದಿಲ್ಲ, ಗೋವಾ ತಂಡವನ್ನು ಇದಕ್ಕಿಂತಲೂ ಹೆಚ್ಚಿನ ಗೋಲುಗಳ ಅಂತರದಲ್ಲಿ ಸೋಲಿಸುವುದು ಮುಂಬೈಗೆ ಅಷ್ಟು ಸುಲಭವಾದುದಲ್ಲ. ‘ಫುಟ್ಬಾಲ್ ಹಾಗೂ ಬದುಕಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ವಾಸ್ತವನ್ನು ನಾವು ಅರಿತುಕೊಳ್ಳಬೇಕಿದೆ. ಈ ಲಿತಾಂಶವನ್ನು ಬದಲಾಯಿಸುವುದು ಕಷ್ಟ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಮಗೆ ಈ ಫಲಿತಾಂಶವನ್ನು ಬದಲಾಯಿಸಲು ಚಿಕ್ಕ ಅವಕಾಶವಿದೆ. ಮುಂಬೈ ತಂಡ ಆರು ಅಥವಾ ಏಳು ಗೋಲು ಗಳನ್ನು ಗಳಿಸಿದರೆ ಮಾತ್ರ ಗೋವಾಕ್ಕೆ ಸೋಲುಣಿಸಬಹುದು. ಲಿತಾಂಶವನ್ನು ಬದಲಾಯಿಸಬಹುದು. ಇದನ್ನು ಸಾಧ್ಯಗೊಳಿಸಲು ಯತ್ನಿಸುವೆ. ಫುಟ್ಬಾಲ್‌ನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ, ಆದರೆ ಮೊದಲ ಹಂತದ ಲಿತಾಂಶವನ್ನು ಬದಲಾಯಿಸುವುದು ಕಷ್ಟ,‘ ಎಂದು ಕೋಸ್ಟಾ ಹೇಳಿದ್ದಾರೆ.
ಮೊದಲ ಹಂತದಲ್ಲಿ ಮುಂಬೈ ತಂಡ ಪಂದ್ಯದ ಮೇಲೆ ಉತ್ತಮ ಹಿಡಿತ ಸಾಧಿಸಿತ್ತು, ಮೊದಲಾ‘ರ್ದಲ್ಲಿ ಕೇವಲ 1-2 ಗೋಲುಗಳ ಅಂತರದಲ್ಲಿ ಹಿನ್ನಡೆ ಕಂಡಿತ್ತು, ಆದರೆ ಗೋವಾ ತಂಡ ದ್ವಿತಿಯಾರ್ದದಲ್ಲಿ ಜಾದೂ ಮಾಡಿದಂತೆ ಗೋಲುಗಳ ಮಳೆಗರೆಯಿತು.
ಲೀಗ್ ಹಂತದಲ್ಲಿ ಮುಂಬೈ ತಂಡ ಗೋವಾಕ್ಕೆ ಆಗಮಿಸಿದಾಗ 5-0 ಗೋಲುಗಳ ಅಂತರದಲ್ಲಿ ಸೋಲನುಭವಿಸಿತ್ತು. ಮೊದಲ ಹಂತದ ಸೆಮಿಫೈನಲ್ ಮುಗಿದ ನಂತರ ಗೋವಾ ತಂಡ ಮುಂಬೈ ವಿರುದ್ಧ ಒಟ್ಟು 12 ಗೋಲುಗಳನ್ನು ಗಳಿಸಿದೆ. ಐಎಸ್‌ಎಲ್ ಆರಂಭವಾದಾದಿನಿಂಗ ಗೋವಾ ತಂಡ ಮುಂಬೈ ವಿರುದ್ಧ 24 ಗೋಲುಗಳನ್ನು ಗಳಿಸಿದೆ. ಮುಂಬೈ ಕೇವಲ 9 ಗೋಲುಗಳನ್ನು ಗಳಿಸಿದೆ. ಇಷ್ಟೆಲ್ಲ ನಡೆದಿದ್ದರೂ ಗೋವಾ ತಂಡದ ಕೋಚ್ ಸರ್ಗಿಯೋ ಲೊಬೆರಾ ನಾಳೆಯ ಪಂದ್ಯವನ್ನು ಹಗುರವಾಗಿ ಪರಿಗಣಿಸುವುದಿಲ್ಲ  ಎಂದಿದ್ದಾರೆ.
‘ನಾವು ನಾಳೆಯ ಪಂದ್ಯವನ್ನು ಗೌರವದೊಂದಿಗೆ ಎದುರಿಸಲಿದ್ದೇವೆ, ಏಕೆಂದರೆ ಮುಂಬೈ ಉತ್ತಮ ತಂಡ. ನಾವು ಇನ್ನೂ ಫೈನಲ್ ಹಂತ ತಲುಪಿಲ್ಲ. ನಾವು ಒಂದು ವೇಳೆ ಫೈನಲ್ ತಲುಪಿದ್ದೇವೆ ಎಂದು ತಿಳಿದುಕೊಂಡಿದ್ದರೆ ಅದು ನಮ್ಮ ತಪ್ಪು. ನಾವು ನಮ್ಮ ಪ್ರತಿಶತ ಪ್ರಯತ್ನ ಮುಂದುವರಿಸಲಿದ್ದೇವೆ,‘ ಎಂದು ಲೊಬೆರಾ ಹೇಳಿದ್ದಾರೆ.
ಮೊಡೌ ಸೌಗೌ ಅವರನ್ನು ಮೌರ್ತದಾ ಫಾಲ್ ನಿಯಂತ್ರಿಸುವಲ್ಲಿ ಸಲರಾಗಿದ್ದಾರೆ. ಮಿಡ್‌ಫೀಲ್ಡ್‌ನಲ್ಲಿ ಪೌಲೊ ಮಚಾಡೋ ನಿಯಂತ್ರಣ ಸಾಧಿಸುವಲ್ಲಿ ವಿಲರಾಗಿದ್ದಾರೆ. ಅಹಮ್ಮದ್ ಜಹೊವ್ ಅವರು ಮಿಡ್‌ಫೀಲ್ಡ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಮುಂಬೈ ಉತ್ತಮ ಅವಕಾಶ ಗಳಿಸಿದರೂ ಅದಕ್ಕೆ ಗೋಲಿನ ರೂಪು ನೀಡುವಲ್ಲಿ ವಿಲವಾಗಿದೆ.  16 ವೈಯಕ್ತಿಕ ಗೋಲು ಹಾಗೂ7 ಸಹಾಯಕ ಗೋಲುಗಳನ್ನು ಗಳಿಸಿರುವ ಫೆರಾನ್ ಕೊರೊಮಿನಾಸ್ ಮುಂಬೈ ಪಾಲಿಗೆ ಅಪಾಯಕಾರಿ ಆಟಗಾರ. ಸೌಗೌ 12 ಗೋಲುಗಳನ್ನು ಗಳಿಸಿದ್ದರೂ ಹಿಂದಿನ ಪಂದ್ಯದಲ್ಲಿ ಮಿಂಚಿಲ್ಲ. ನಾಳೆ ಪವಾಡ ನಡೆದರೆ ಮಾತ್ರ ಮುಂಬೈ ಯಶಸ್ಸು ಕಾಣಬಲ್ಲದು.

Related Articles