Thursday, December 12, 2024

ಕೋಟ ಪಡುಕರೆಯಲ್ಲಿ ಮಂಗಳೂರು ವಿವಿ ಕ್ರಿಕೆಟ್ ಟೂರ್ನಿ

ಸ್ಪೋರ್ಟ್ಸ್ ಮೇಲ್ ವರದಿ

ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕರೆ ಇವರ ಆಶ್ರಯದಲ್ಲಿ ಮಾರ್ಚ್ 16ರಂದು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಕ್ರಿಕೆಟ್ ಟೂರ್ನಿ ನಡೆಯಲಿದೆ.

ಮೆರುಗು ಟ್ರೋಫಿಗಾಗಿ ನಡೆಯುವ 60 ಗಜಗಳ ಕ್ರಿಕೆಟ್ ಟೂರ್ನಿ ಕಾಲೇಜಿನ ಅಂಗಣದಲ್ಲಿ ನಡೆಯಲಿದ್ದು,  ಚಾಂಪಿಯನ್ ತಂಡ ಟ್ರೋಫಿಯೊಂದಿಗೆ 15,005 ರೂ.ಗಳ ನಗದು ಬಹುಮಾನ ಗೆಲ್ಲಲಿದೆ. ರನ್ನರ್ ಅಪ್ ತಂಡ 10,000 ರೂ. ನಗದು  ಹಾಗೂ ಶಾಶ್ವತ ಲಕ ಗೆಲ್ಲಲಿದೆ. ಜತೆಯಲ್ಲಿ ವೈಯಕ್ತಿಕ ಬಹುಮಾನಗಳಾದ ಉತ್ತಮ ಬ್ಯಾಟ್ಸ್‌ಮನ್, ಉತ್ತಮ ಬೌಲರ್ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ನೀಡಲಾಗುದು. ಪ್ರತಿ ಪಂದ್ಯಕ್ಕೂ ಪಂದ್ಯಶ್ರೇಷ್ಠ ಗೌರವ ಇರುತ್ತದೆ.
 ಈ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ತಂಡಗಳಿಗೆ ಪ್ರವೇಶ ಶುಲ್ಕ ಇರುವುದಿಲ್ಲ. ಇದು 4 ಓವರ್‌ಗಳ ಪಂದ್ಯವಾಗಿದ್ದು, ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ. ಕಾಲೇಜಿನ ಗುರುತಿನ ಚೀಟಿಯನ್ನು ಪ್ರತಿಯೊಂದು ತಂಡದ ಸದಸ್ಯರು ಹೊಂದಿರಬೇಕು. ಪ್ರಾಂಶುಪಾಲರಿಂದ ದೃಢೀಕರಣ ಪತ್ರವನ್ನು ತರತಕ್ಕದ್ದು. ಹೆಸರು ನೋಂದಾಯಿಸಲು ಮಾರ್ಚ್ 14, 2019 ಅಂತಿಮ ದಿನಾಂಕವಾಗಿರುತ್ತದೆ.
ಹೆಚ್ಚಿನ ವಿವರಗಳಿಗೆ, ಡಾ. ಮನೋಜ್ ಕುಮಾರ್ ಎಂ. (ದೈಹಿಕ ಶಿಕ್ಷಣ ನಿರ್ದೇಶಕರು) 9480265575,  ಕಾರ್ತಿಕ್ ಎನ್-9071078060, ಅಭಿಷೇಕ್ ಬಂಗೇರ 9663293634

Related Articles