ಬೆಂಗಳೂರು:
ಯುಎಇ ಅಬುಧಾಬಿಯಲ್ಲಿ ಇದೇ ತಿಂಗಳ 17 ಮತ್ತು 18ರಂದು ನಡೆಯಲಿರುವ ಮಿಸ್ಟರ್ ಯೂನಿವರ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಕರ್ನಾಟಕದ ಇಬ್ಬರು ಸ್ಪರ್ಧಿಗಳಿಗೆ ಕರ್ನಾಟಕ ಸ್ಟೇಟ್ ಬಾಡಿ ಬಿಲ್ಡಿಂಗ್ ಮತ್ತು ಫಿಟ್ನೆಸ್ ಫೆಡರೇಷನ್ ವತಿಯಿಂದ ಗುರುವಾರ ಬೀಳ್ಕೊಡಲಾಯಿತು.
ಕರ್ನಾಟಕ ರಾಜ್ಯ ಬಾಡಿ ಬಿಲ್ಡಿಂಗ್ ಮತ್ತು ಫಿಟ್ನೆಸ್ ಫೆಡರೇಷನ್‌ನ ಸಕ್ರೀಯ ಅಧ್ಯಕ್ಷ ಮಾಜಿ ದೇಹದಾರ್ಢ್ಯ ಪಟು, ಅಚೀವರ್ ಇ ಸ್ಪೋರ್ಟ್ಸ್ ಕಂಪೆನಿಯ ಮಾಲೀಕ ಜಯರಾಮ ಶೆಟ್ಟಿ ಅವರು ಮಿಸ್ಟರ್ ಯೂನಿವರ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ವೆಂಕಟೇಶ್ ಕೃಷ್ಣ ಮತ್ತು ಶ್ರೀಹರಿ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು.
ಈ ಸಂಬರ್ಭದಲ್ಲಿ ಕರ್ನಾಟಕ ರಾಜ್ಯ ಬಾಡಿ ಬಿಲ್ಡಿಂಗ್ ಮತ್ತು ಫಿಟ್ನೆಸ್ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಮನಕ್ ಲಾಲ್ ಹಾಜರಿದ್ದರು.
ದಕ್ಷಿಣ ಭಾರತ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಆಶ್ರಯದಲ್ಲಿ ಮುಂದಿನ ತಿಂಗಳು (ಜನವರಿ 8 2023) 8 ರಂದು ತಮಿಳುನಾಡಿನ ಅಂಬೂರ್‌ನಲ್ಲಿ ನಡೆಯಲಿರುವ 36ನೇ ದಕ್ಷಿಣ ಭಾರತ ಬಾಡಿ ಬಿಲ್ಡಿಂಗ್ ಮತ್ತು ಫಿಟ್ನೆಸ್ ಸ್ಪರ್ಧೆಯಲ್ಲಿ ಕೆಎಸ್‌ಬಿಬಿಎಫ್‌ಎಫ್ ವತಿಯಿಂದ 20 ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಕಾರ್ಯದರ್ಶಿ ಮನಕ್ ಲಾಲ್ ಈ ಸಂದರ್ಭದಲ್ಲಿ ತಿಳಿಸಿದರು.
ದಕ್ಷಿಣ ಭಾರತ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೆಎಸ್‌ಬಿಬಿಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಮನಕ್ ಲಾಲ್ ಅವರನ್ನು 6363327819 ದೂರವಾಣಿ ಮೂಲಕ ಸಂಪರ್ಕಿಸಬಹುದು