ದಕ್ಷಿಣ ಕನ್ನಡ, ಮೈಸೂರಿಗೆ ದಸರಾ ವಾಲಿಬಾಲ್ ಕಿರೀಟ

0
254
ಸ್ಪೋರ್ಟ್ಸ್ ಮೇಲ್ ವರದಿ

ದಸರಾ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ದಕ್ಷಿಣ ಕನ್ನಡ ಹಾಗೂ ವನಿತೆಯರ ವಿಭಾಗದಲ್ಲಿ ಮೈಸೂರು ಚಾಂಪಿಯನ್ ಪಟ್ಟ ಗೆದ್ದುಕೊಂಡಿವೆ.

ಫೈನಲ್ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡ ಬೆಂಗಳೂರು ಸಿಟಿ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ಮಹಿಳಾ ವಿಭಾಗದಲ್ಲಿ ಮೈಸೂರು ತಂಡ ದಕ್ಷಿಣ ಕನ್ನಡ ತಂಡವನ್ನು ಸೋಲಿಸಿತು. ಎಸ್‌ಡಿಎಂ ಕಾಲೇಜು ತಂಡ ದಕ್ಷಿಣ ಕನ್ನಡ ಜಿಲ್ಲೆಯನ್ನು  ಪ್ರತಿನಿಧಿಸಿತ್ತು. ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ಹಾಗೂ ದಸರಾ ವಾಲಿಬಾಲ್ ಟೂರ್ನಿ ಸಂಘಟಕ ಕೆ. ನಂದಕುಮಾರ್ ಚಾಂಪಿಯನ್ ತಂಡಕ್ಕೆ ಬಹುಮಾನ ವಿತರಿಸಿದರು.
ವನಿತೆಯರ ವಿಭಾಗದ ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಬೆಂಗಳೂರು ಸಿಟಿ ತಂಡ ಧಾರವಾಡದ ವಿರುದ್ಧ ಜಯ ಗಳಿಸಿ ಮೂರನೇ ಸ್ಥಾನ ತನ್ನದಾಗಿಸಿಕೊಂಡಿತು. ಪುರುಷರ ವಿಭಾಗದಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಧಾರವಾಡ ತಂಡ ಬಳ್ಳಾರಿ ವಿರುದ್ಧ ಜಯ ಗಳಿಸಿತು.