ಪೈರೇಟ್ಸ್‌ಗೆ ತಲೆ ಬಾಗಿದ ಯೋಧಾಸ್

0
203
ಸ್ಪೋರ್ಟ್ಸ್ ಮೇಲ್ ವರದಿ
ಪಾಟ್ನಾ ಪೈರೇಟ್ಸ್ ಹಾಗೂ ಯುಪಿ ಯೋಧಾಸ್ ನಡುವೆ ಅಂತ್ಯತ ರೋಚಕವಾಗಿ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ  ಹಾಲಿ ಚಾಂಪಿಯನ್ ನಲ್ಲಿ  ಪಾಟ್ನಾ ಪೈರೇಟ್ಸ್ 43-41 ಅಂತರದಲ್ಲಿ ಜಯ ಗಳಿಸಿತು.16 ಅಂಕಗಳನ್ನು ಗಳಿಸುವ ಮೂಲಕ ಪ್ರದೀಪ್ ನರ್ವಾಲ್ ಪಾಟ್ನಾ ಪೈರೇಟ್ಸ್ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಯುಪಿ ಯೋಧಾಸ್ ಪರ ಶ್ರೀಕಾಂತ್ ಜಾಧವ್ 12 ಅಂಕ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರುಮಾಡಲಾಗಲಿಲ್ಲ. ಇತ್ತಂಡಗಳು ಡಿಫೆನ್ಸ್  ವಿಭಾಗದಲ್ಲಿ ಗಳಿಸಿದ ಅಂಕಗಳು ಲಿತಾಂಶದ ಮೇಲೆ ಪರಿಣಾಮಬೀರಿತು. ಪಾಟ್ನಾ ಪೈರೇಟ್ಸ್ ಟ್ಯಾಕಲ್‌ನಲ್ಲಿ  11 ಅಂಕ ಗಳಿಸಿದರೆ,  ಯುಪಿ ಯೋಧಾಸ್ ಕೇವಲ ಏಳು ಅಂಕ ಗಳಿಸಿತು.
ಆರಂಭದಿಂದಲೂ ಇತ್ತಂಡಗಳು ಸಮಬಲದ ಹೋರಾಟ ನಡೆಸಿದವು.  ಮೂರನೇ ನಿಮಿಷದಲ್ಲಿ ಪ್ರದೀಪ್ ನರ್ವಾಲ್ ಪಂದ್ಯದ ಮೊದಲ ಅಂಕಗಳಿಸುವುದರೊಂದಿಗೆ ಪಾಟ್ನಾ ಪೈರೇಟ್ಸ್ 3-5ರಲ್ಲಿ ಸಾಗಿತು. ಯುಪಿ ಯೋಧಾಸ್ ಪರ ರಿಶಾಂಕ್ ದೇವಾಡಿಗ ಕೂಡ ರೈಡಿಂಗ್‌ನಲ್ಲಿ ಮಿಂಚಿದರು. ಪ್ರಥಮಾರ್ಧದಲ್ಲಿ ಪಂದ್ಯ 21-20ರಲ್ಲಿ ನಿಂತಿತು.
ಯುಪಿ ಯೋಧಾಸ್ ತಂಡವನ್ನು ದ್ವಿತಿಯಾರ್ಧದ  ಆರಂಭದಲ್ಲೇ ಆಲೌಟ್ ಮಾಡಿದ ಪಾಟ್ನಾ ಪೈರೇಟ್ಸ್  ಮುನ್ನಡೆ ಕಂಡಿತು. ಜವಾಹರ್, ರಿಶಾಂಕ್ ದೇವಾಡಿಗ ಹಾಗೂ ಶ್ರೀಕಾಂತ್ ಜಾಧವ್ ರೈಡಿಂಗ್‌ನಲ್ಲಿ ಮಿಂಚುವುದರೊಂದಿಗೆ ಪಾಟ್ನಾದ ಡಿೆನ್ಸ್ ವಿಭಾಗ ಸ್ವಲ್ಪಮಟ್ಟಿಗೆ ಅಲುಗತೊಡಗಿತು.  29ನೇ ನಿಮಿಷದಲ್ಲೂ ಯುಪಿ ಯೋಧಾಸ್ ಆಲೌಟ್ ಆಗುವ ಮೂಲಕ 32-33 ವ್ಯತ್ಯಾಸ ಕಂಡು ಬಂತು.  ೩೬ನೇ ನಿಮಿಷದಲ್ಲಿ ಪ್ರದೀಪ್ ನರ್ವಾಲ್ ರೈಡಿಂಗ್‌ನಲ್ಲಿ ಎರಡು ಅಂಕ ಗಳಿಸುವುದರೊಂದಿಗೆ ಪಾಟ್ನಾ  ಪೈರೇಟ್ಸ್ 39-37 ಅಂತರದಲ್ಲಿ ಮುನ್ನಡೆಯಿತು.
34ನೇ ನಿಮಿಷದಲ್ಲಿ  ಶ್ರೀಕಾಂತ್ ಯಾದವ್ 38ನೇ ನಿಮಿಷದಲ್ಲಿ ಒಟ್ಟು 10ನೇ ರೈಡಿಂಗ್ ಪಾಯಿಂಟ್ ಸಾಧ ನೆ ಮಾಡಿದರು. ಅಂತಿಮ ಹಂತದಲ್ಲಿ ಪಾಟ್ನಾ ಪೈರೇಟ್ಸ್ ಅಮೂಲ್ಯ ಅಂಕ ಗಳಿಸಿ 43-41 ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತು.