ಡಿಸೆಂಬರ್ ನಲ್ಲಿ ಅಂಗಳಕ್ಕೆ ಹಾಜರ್: ಸಹಾ ವಿಶ್ವಾಸ

0
203
ಕೊಲ್ಕತಾ:

ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ವೃದ್ಧಿಮಾನ್ ಸಹಾ ಮುಂದಿನ ತಿಂಗಳು ಪ್ರಥಮ ದರ್ಜೆ ಪಂದ್ಯ ಆಡಲಿದ್ದಾರೆ. ಈ ಕುರಿತಂತೆ ಅವರೇ ಮಾಹಿತಿ ನಿಡಿದ್ದಾರೆ.

ಸದ್ಯ ಭುಜದ ನೋವು ಗುಣಮುಖವಾಗುತ್ತಿದ್ದು, ಭವಿಷ್ಯ ಡಿಸೆಂಬರ್ ಮಧ್ಯೆ ಅಥವಾ ಅಂತ್ಯದಲ್ಲಿ ಮೈದಾನಕ್ಕೆ ಇಳಿಯಲಿದ್ದೇನೆ ಎಂದು ಹೇಳಿದರು.
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ವೇಳೆ ಭುಜದ ನೋವಿನಿಂದ ಅವರು ತಂಡದಿಂದ ದೂರ ಸರಿದರು. ನಂತರ, ಐಪಿಎಲ್ ಟೂರ್ನಿಯಿಂದಲೂ ದೂರ ಉಳಿದಿದ್ದರು. ಇದೀಗ, ಭುಜಕ್ಕೆ ಶಸ್ತ್ರ ಚಿಕಿತ್ಸೆ ನೀಡಲಾಗಿದೆ. ಸಂಪೂರ್ಣ ಗುಣಮುಖವಾಗುತ್ತಿದ್ದೇನೆ. ನೆಟ್ಸ್ ನಲ್ಲಿ ಅಭ್ಯಾಸ ಶುರು ಮಾಡಿದ್ದು, ಕೆಲವೇ ದಿನಗಳಲ್ಲಿ ಲಯಕ್ಕೆ ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.