Friday, March 29, 2024

ಆಸೀಸ್‍ಗೆ ನಿರುಣಿಸಿದ ಭಾರತ ವನಿತೆಯರು

ಗಯಾನ:

ಸ್ಮೃತಿ ಮಂದಾನ(83) ಸ್ಪೋಟಕ ಬ್ಯಾಟಿಂಗ್ ಹಾಗೂ ಬೌಲರ್ ಗಳ ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಭಾರತ ವನಿತೆಯರು ಐಸಿಸಿ ಮಹಿಳೆಯರ ಟಿ-20 ವಿಶ್ವಕಪ್ ಟೂನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 48 ರನ್‍ಗಳಿಂದ ಭರ್ಜರಿ ಜಯ ಸಾಧಿಸಿತು.

ಇಲ್ಲಿನ ಪ್ರೊವಿಡೆನ್ಸ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಿಗೆ 167 ರನ್ ದಾಖಲಿಸಿತು. ಇದರೊಂದಿಗೆ ಆಸೀಸ್ ಗೆ 168 ರನ್ ಸವಾಲಿನ ಗುರಿ ನೀಡಿತು. ಭಾರತ ಪರ ಸ್ಪೋಟಕ ಬ್ಯಾಟಿಂಗ್ ಮಾಡಿದ ಸ್ಮøತಿ ಮಂಧಾನ 55 ಎಸೆತಗಳಿಗೆ 83 ರನ್ ಗಳಿಸಿದರು. ಇನ್ನೂ, ನಾಯಕಿ ಹರ್ಮಾನ್‍ಪ್ರೀತ್ ಕೌರ್ 43 ರನ್ ಗಳಿಸಿದರು.
168 ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ವನಿತೆಯರು 19.4 ಓವರ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು 119 ರನ್ ಗಳಿಗೆ ಶಕ್ತವಾಯಿತು. ಅಂತಿಮವಾಗಿ ಭಾರತೆದುರು 48 ರನ್ ಗಳಿಂದ ಸೋಲು ಒಪ್ಪಿಕೊಂಡಿತು.
ಆಸೀಸ್ ಪರ ಎಲೆಸ್ಸಿ ಪೆರ್ರಿ 39 ಹಾಗೂ ಗಾರ್ಡನರ್ 20 ರನ್ ಗಳಿಸಿದ್ದು ಬಿಟ್ಟರೆ ಇನ್ನುಳಿದ ಆಟಗಾರ್ತಿಯರು ಬ್ಯಾಟಿಂಗ್ ನಲ್ಲಿ ವಿಫಲರಾದರು. ಭಾರತ ಪರ ಅನುಜಾ ಪಾಟೀಲ್ ಮೂರು ಹಾಗೂ ದೀಪ್ತಿ ಶರ್ಮಾ, ರಾಧಾ ಯಾದವ್ ಹಾಗೂ ಪೂನಮ್ ಯಾದವ್ ತಲಾ ಎರಡೆರಡು ವಿಕೆಟ್ ಪಡೆದರು.

Related Articles