ಭಾರತ ಎ ತಂಡ ಮೇಲುಗೈ

0
204
ಮೌಂಟ್ ಮೌಂಗನಾಯ್:

ಮೊದಲ ಇನಿಂಗ್ಸ್ ನಲ್ಲಿ ಬೃಹತ್ ಮೊತ್ತ ಪೇರಿಸಿದ ಭಾರತ(ಎ) ತಂಡಕ್ಕೆ ಪ್ರತ್ಯುತ್ತರವಾಗಿ ನ್ಯೂಜಿಲೆಂಡ್(ಎ) ತಂಡ ಮೂರನೇ  ದಿನದಾಟ ಮುಕ್ತಾಯಕ್ಕೆ 8 ವಿಕೆಟ್ ನಷ್ಟಕ್ಕೆ 351 ರನ್ ದಾಖಸಿಲಿದೆ. ಭಾರತ  ಮೇಲುಗೈ ಸಾಧಿಸಿದೆ.

ಭಾರತ ಎ ತಂಡದ ಪರ ಕನ್ನಡಿಗ ಕೆ ಗೌತಮ್, ಸೈನಿ ಹಾಗೂ ಚಹರ್ ತಲಾ ಎರಡು ವಿಕೆಟ್ ಗಳಿಸಿದರು.
ಕಿವೀಸ್ ಪರ ಆರಂಭಿಕರಾಗಿ ಕಣಕ್ಕೆ ಇಳಿದ ಹಮೀಶ್ ರುಥ್‍ಫರ್ಡ್ ಹಾಗೂ ವಿಲ್ಲಿ ಯುಂಗ್ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ ಮೊದಲ ವಿಕೆಟ್ ಗೆ 121 ರನ್ ಗಳಿಸಿತು. ವಿಲ್ಲಿ ಯುಂಗ್ 49 ರನ್ ಗಳಿಸಿ ಅರ್ಧ ಶತಕದಂಚಿನಲ್ಲಿ ಕೆ.ಗೌತಮ್ ಗೆ ವಿಕೆಟ್ ಒಪ್ಪಿಸಿದರು. ಕಿವೀಸ್ ಪರ ಸೋಗಸಾಗಿ ಬ್ಯಾಟಿಂಗ್ ಮಾಡಿದ ಹಮೀಶ್ ರುಥ್‍ಫರ್ಡ್ 157 ಎಸೆತಗಳಿಗೆ ಒಂದು ಸಿಕ್ಸರ್ ಹಾಗೂ 15 ಬೌಂಡರಿಯೊಂದಿಗೆ (114) ಅಮೋಘ ಶತಕ ಸಿಡಿಸಿದರು.
  ಇದಕ್ಕೂ ಮುನ್ನ ಐದು ವಿಕೆಟ್ ಕಳೆದುಕೊಂಡು 340 ರನ್ ಗಳಿಂದ ಎರಡನೇ ದಿನ ಬ್ಯಾಟಿಂಗ್ ಮುಂದುವರಿಸಿದ ಭಾರತ(ಎ) 122.1 ಓವರ್‍ಗಳಿಗೆ ಎಂಟು ವಿಕೆಟ್ ನಷ್ಟಕ್ಕೆ 467 ರನ್ ದಾಖಲಿಸಿ ಡಿಕ್ಲೇರ್ ಮಾಡಿಕೊಂಡಿತು. ಬಾರತ(ಎ) ಎರಡನೇ ದಿನ ಉತ್ತಮ ಬ್ಯಾಟಿಂಗ್ ಮಾಡಿದ ಪಾರ್ಥಿವ್ ಪಟೇಲ್ 94 ರನ್ ಗಳಿಸಿದರೆ, ವಿಜಯ್ ಶಂಕರ್ 72 ಮತ್ತು ಕೆ.ಗೌತಮ್ 47 ರನ್ ಗಳಿಸಿದರು.