Sunday, September 8, 2024

ಹಾರ್ದಿಕ್‌ಗೆ ಕ್ರಿಕೆಟ್‌ ಮೊದಲ ಆದ್ಯತೆ : ಕೃನಾಲ್‌

ದೆಹಲಿ: ಐಸಿಸಿ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿರುವ ನನ್ನ ಸಹೋದರ ಹಾಗೂ ತಂಡದ ಸಹ ಆಟಗಾರ ಹಾರ್ದಿಕ್‌ ಪಾಂಡ್ಯ ಅವರಿಗೆ “ಕ್ರಿಕೆಟ್‌ ಮೊದಲ ಆದ್ಯತೆ” ಯಾಗಿದೆ ಎಂದು ಮುಂಬೈ ಇಂಡಿಯನ್ಸ್‌ ಆಲ್‌ರೌಂಡರ್‌ ಕೃನಾಲ್‌ ಪಾಂಡ್ಯ ಹೇಳಿದ್ದಾರೆ.

ಬೆನ್ನು ನೂವು ಹಾಗೂ ಕಾಫಿ ವಿಥ್‌ ಕರಣ್‌ ಟಿವಿ ಶೋವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಕರಣ ನಂತರ ಅವರು ಸುಮಾರು ಆರು ತಿಂಗಳ ಕಾಲ ರಾಷ್ಟ್ರೀಯ ಕ್ರಿಕೆಟ್‌ ತಂಡದಿಂದ ದೂರ ಉಳಿದಿದ್ದರು. ಈ ಸಮಯವನ್ನು ಹಾರ್ದಿಕ್‌ ಸದುಪಯೋಗಪಡಿಸಿಕೊಂಡಿದ್ದರು. ಹಾಗಾಗಿ, ಅವರು ಐಪಿಎಲ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಜತೆಗೆ, ಐಸಿಸಿ ವಿಶ್ವಕಪ್‌ ಭಾರತ ತಂಡದಲ್ಲೂ ಸ್ಥಾನ ಪಡೆದುಕೊಂಡಿದ್ದಾರೆ.

“ ರಾಷ್ಟ್ರೀಯ ತಂಡದಿಂದ ಆರು ತಿಂಗಳು ಹೊರಗುಳಿದ್ದ ಸಮಯದಲ್ಲಿ ಹಾರ್ದಿಕ್‌ ಪಾಂಡ್ಯ ಹೆಚ್ಚು ಫಿಟ್ನೆಸ್‌ ಮಾಡುತ್ತಿದ್ದರು. ಸದಾ ಕ್ರಿಕೆಟ್‌ ಬಗ್ಗೆ ಯೋಚನೆ ಮಾಡುತ್ತಿದ್ದರು. ಅವರು ಕ್ರಿಕೆಟ್‌ಗೆ ಹೆಚ್ಚು ಆಧ್ಯತೆ ನೀಡುವ ವ್ಯಕ್ತಿ. ಇದರಲ್ಲಿ ಯಾವುದೇ ಸಂಶಯವಿಲ್ಲ. ಈ ಅವಧಿಯಲ್ಲಿ ಅವರು ಹೆಚ್ಚು ಕಠಿಣ ಪರಿಶ್ರಮ ಪಟ್ಟಿದ್ದಾರೆ.” ಎಂದು ಡೆಲ್ಲಿ ವಿರುದ್ಧ ಮುಂಬೈ ಪಂದ್ಯದ ಗೆಲುವಿನ ಬಳಿಕ ಕೃನಾಲ್‌ ಪಾಂಡ್ಯ ಪ್ರತಿಕ್ರಿಯಿಸಿದರು.

“ಹಾರ್ದಿಕ್‌ ಪಾಂಡ್ಯ ಗುರಿ ಬೆಳವಣಿಗೆ ಹಾದಿಯಲ್ಲಿ ಸಾಗುತ್ತಿದೆ. ಬೆಳವಣಿಗೆ ಆದಷ್ಟು ಆಟದಲ್ಲಿ ಸ್ಥಿರತೆ ಸಾಧಿಸಬಹುದು. ಪ್ರತಿಯೊಂದು ವರ್ಷವೂ ಗಮನಿಸಿದಾಗ ಅವರ ಆಟದಲ್ಲಿ ಏನಾದರೂ ವಿಶೇಷವಾದದ್ದು ಸೇರ್ಪಡೆಯಾಗಿರುತ್ತದೆ. ಹಾರ್ದಿಕ್‌ ಪಾಂಡ್ಯ ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ” ಎಂದರು.

Related Articles