ಸ್ಪೋರ್ಟ್ಸ್ ಮೇಲ್ ವರದಿ
ಪುಣೆಯಲ್ಲಿ ನಡೆದ ರಾಷ್ಟ್ರೀಯ ಬೆಂಚ್‌ಪ್ರೆಸ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರಿನ ಸದ್ಗುರು ಫಿಟ್ನೆಸ್ ಕೇಂದ್ರದ ಮಾಲೀಕ, ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಅವರು ಚಿನ್ನದ ಪದಕದೊಂದಿಗೆ ನೂತನ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಭಾರತದ ಪವರ್‌ಲಿಫ್ಟಿಂಗ್‌ನ ಬೆಂಚ್‌ಪ್ರೆಸ್ ವಿಭಾಗದಲ್ಲಿ 200 ಕೆಜಿ ಭಾರವೆತ್ತಿರುವುದು ಇದೇ ಮೊದಲು. ಈ ಎಲ್ಲ ಸಾಧನೆಗೆ ಗುರುಗಳಾದ ಸತೀಶ್ ಕುಮಾರ್ ಕುದ್ರೋಳಿ ಅವರ ಪ್ರೋತ್ಸಾಹವೇ ಕಾರಣ ಎಂದು ಪ್ರದೀಪ್ ಕುಮಾರ್ ಹೇಳಿದ್ದಾರೆ.