Saturday, October 12, 2024

1 ಕೋಟಿ ರೂ. ವೆಚ್ಚದಲ್ಲಿ ಟಾರ್ಪೆಡೊಸ್ ಸ್ಪೋರ್ಟ್ಸ್ ಕಾರ್ನಿವಲ್!

ಸ್ಪೋರ್ಟ್ಸ್ ಮೇಲ್ ವರದಿ, ಸುರತ್ಕಲ್

ಪ್ರತಿಯೊಬ್ಬ ಕ್ರೀಡಾಪಟುವಿಗೂ ಉತ್ತೇಜನ ಮತ್ತು ಬಹುಮಾನ ನೀಡುವ ಉದ್ದೇಶದಿಂದ ರಾಜ್ಯದ ಅತ್ಯಂತ ಪ್ರತಿಷ್ಠಿತ ಕ್ರೀಡಾ ಸಂಸ್ಥೆ ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ 2021, ಮೇ 1 ರಿಂದ 10ರ ವರೆಗೆ ಹತ್ತು ದಿನಗಳ ಕಾಲ ಆಯೋಜಿಸಿರುವ ಟಾರ್ಪೆಡೊಸ್ ಚಾಂಪಿಯನ್ಸ್ ಲೀಗ್-ಸ್ಪೋರ್ಟ್ಸ್ ಕಾರ್ನಿವಲ್ -2021 ಒಟ್ಟು 1 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ.

ಕುಂದಾಪುರ, ಮಂಗಳೂರು ಮತ್ತು ಸುರತ್ಕಲ್ ನಲ್ಲಿ ನಡೆಯಲಿರುವ ಈ ಹತ್ತು ದಿನಗಳ ಕ್ರೀಡಾ ಹಬ್ಬ ಕರ್ನಾಟಕದ ಕ್ರೀಡಾ ಇತಿಹಾದಲ್ಲೇ ಅವಿಸ್ಮರಣೀಯ ಎನಿಸಲಿದೆ. ಕ್ರೀಡಾ ಪಟುಗಳಿಗೆ ವೈಯಕ್ತಿಕ ನಗದು ಬಹುಮಾನ, ಜೆರ್ಸಿ, ಊಟ ಮತ್ತು ವಸತಿ ಸೌಲಭ್ಯವನ್ನು ನೀಡಲಾಗುತ್ತದೆ ಎಂದು ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಅವರು ತಿಳಿಸಿದ್ದಾರೆ.

ಎಲ್ಲೆಲ್ಲಿ ಪಂದ್ಯಗಳು?

ಟೆನಿಸ್ ಬಾಲ್ ಕ್ರಿಕೆಟ್: ಕುಂದಾಪುರ ಗಾಂಧಿ ಮೈದಾನ

ಲೆದರ್ ಬಾಲ್ ಕ್ರಿಕೆಟ್: ಮಂಗಳೂರು

ಬಾಕ್ಸ್ ಕ್ರಿಕೆಟ್: ಯುವ ಮೆರಿಡಿಯನ್, ಕೋಟೇಶ್ವರ

5 ಎ ಸೈಡ್ ಫುಟ್ಬಾಲ್: ಯುವ ಮೆರಿಡಿಯನ್, ಕೋಟೇಶ್ವರ

ಟೇಬಲ್ ಟೆನಿಸ್: ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್, ಹಳೆಯಂಗಡಿ, ಸುರತ್ಕಲ್

ಬ್ಯಾಡ್ಮಿಂಟನ್: ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್, ಹಳೆಯಂಗಡಿ, ಸುರತ್ಕಲ್

ಚೆಸ್: ಬೀಚ್ ರೆಸಾರ್ಟ್, ಕೊರಾವಡಿ, ತೆಕ್ಕಟ್ಟೆ.

ನೋಂದಾವಣಿ:

ಯಾವುದೇ ಸ್ಪರ್ಧೆಗೆ ತಂಡಗಳ ರೂಪದಲ್ಲಿ ನೋದಾಯಿಸಿಕೊಳ್ಳುವಂತಿಲ್ಲ. ಪ್ರತಿಯೊಂದು ಕ್ರೀಡೆಗೂ ವೈಯಕ್ತಿಕ ನೋದಾವಣೆ (individual registration)ಕಡ್ಡಾಯ. ಆನ್ ಲೈನ್ ಅಥವಾ ವೈಯಕ್ತಿಕ ರೂಪದಲ್ಲಿ ನೋದಾಯಿಸಿಕೊಳ್ಳಬಹುದು. ವೈಯಕ್ತಿಕವಾಗಿ ನೋಂದಾಯಿಸಿಕೊಳ್ಳುವವರಿಗೆ ಸದ್ಯದಲ್ಲೇ ಸ್ಥಳಗಳನ್ನು ಪ್ರಕಟಿಸಲಾಗುವುದು. http://torpedoesclub.com  ನಲ್ಲಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. google forms ಮೂಲಕವೂ ನೋದಾಯಿಸಿಕೊಳ್ಳಬಹುದು. ಈ ಸೌಲಭ್ಯವನ್ನು ಸದ್ಯದಲ್ಲೇ ಟಾರ್ಪೆಡೊಸ್ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು. ಸ್ಪರ್ಧಿಗಳಿಗೆ ಅನುಕೂಲವಾಗುವಂತೆ ಪ್ರಮುಖ ಸ್ಥಗಳಲ್ಲೂ ನೋದಾಯಿಸಿಕೊಳ್ಳುವ ವ್ಯವಸ್ಥೆ ಮಾಡಲಾಗುವುದು. ಮಾರ್ಚ್ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

ನೋಂದಾವಣೆ ಶುಲ್ಕ:

ಪ್ರತಿಯೊಂದು ಕ್ರೀಡೆಯ ನೋಂದಾವಣೆ ಶುಲ್ಕ ರೂ. 1,000 ಆಗಿರುತ್ತದೆ. ಪ್ರತಿಯೊಬ್ಬ ಸ್ಪರ್ಧಿಗೂ ಉತ್ತಮ ಗುಣಮಟ್ಟದ ಜೆರ್ಸಿ, ವಸತಿ ಹಾಗೂ ಊಟ, ಉಪಹಾರದ ಸೌಲಭ್ಯ ಕಲ್ಪಿಸಲಾಗುವುದು.

ಕ್ರಿಕೆಟ್ ನಲ್ಲಿ ಪ್ರತಿಯೊಂದು ರನ್  ಗೂ ನಗದು ಬಹುಮಾನ!

ಆಟಗಾರರ ವೈಯಕ್ತಿಕ ಸಾಧನೆಗೆ ಒತ್ತು ನೀಡುವುದೇ ಕ್ರೀಡಾಕೂಟದ ಪ್ರಮುಖ ಉದ್ದೇಶವಾಗಿರುವುದರಿಂದ ಇಲ್ಲಿ ವೈಯಕ್ತಿಕ ಸಾಧನೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಉದಾಹರಣೆಗೆ ಕ್ರಿಕೆಟ್ ನಲ್ಲಿ ಚಾಂಪಿಯನ್ ತಂಡಕ್ಕೆ ನಗದು ಬಹುಮಾನವಿರುತ್ತದೆ. ಪಂದ್ಯಶ್ರೇಷ್ಠ, ಅತಿ ಹೆಚ್ಚು ವಿಕೆಟ್ ಗಳಿಕೆ, ಸರಣಿಶ್ರೇಷ್ಠಗಳಂತಹ ಸಾಮಾನ್ಯ ಪ್ರಶಸ್ತಿಗಳ ಜತೆಯಲ್ಲಿ ಪ್ರತಿಯೊಮದು ರನ್ ಹಾಗೂ ವಿಕೆಟ್ ಗಳಿಕೆಗೂ ಇಲ್ಲಿ ನಗದು ಬಹುಮಾನವಿರುತ್ತದೆ. ತಂಡಗಳನ್ನು ನಿರ್ಮಿಸುವುದು ಸಂಘಟಕರದ್ದಾಗಿರುತ್ತದೆ. ಈ ಕಾರಣಕ್ಕಾಗಿಯೇ ವೈಯಕ್ತಿಕ ನೋಂದಾವಣೆ ಕಡ್ಡಾಯಗೊಳಿಸಲಾಗಿದೆ. ಪಂದ್ಯಗಳು ಹೊನಲು ಬೆಳಕಿನಲ್ಲಿ ನಡೆಯಲಿವೆ.

ನಗದು ಬಹುಮಾನ:  ಪ್ರತಿಯೊಂದು ವಿಭಾಗದಲ್ಲೂ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರೋಫಿ ಇರುತ್ತದೆ.

ಟೆನಿಸ್ ಬಾಲ್ ಕ್ರಿಕೆಟ್: ಮೊದಲ ಬಹುಮಾನ 5 ಲಕ್ಷ ರೂ. ಹಾಗೂ ರನ್ನರ್ ಅಪ್ ತಂಡಕ್ಕೆ 3 ಲಕ್ಷ ರೂ. ನಗದು ಬಹುಮಾನ.

ಲೆದರ್ ಬಾಲ್ ಕ್ರಿಕೆಟ್: ಮೊದಲ ಬಹುಮಾನ 5 ಲಕ್ಷ ರೂ. ಹಾಗೂ ರನ್ನರ್ ಅಪ್ ತಂಡಕ್ಕೆ 3 ಲಕ್ಷ  ರೂ. ನಗದು ಬಹುಮಾನ.

ಟೇಬಲ್ ಟೆನಿಸ್: ಮೊದಲ ಬಹುಮಾನ 2 ಲಕ್ಷ ರೂ, ಹಾಗೂ ರನ್ನರ್ ಅಪ್ ಗೆ 1 ಲಕ್ಷ ರೂ. ನಗದು ಬಹುಮಾನ.

ಬ್ಯಾಡ್ಮಿಂಟನ್: ಮೊದಲ ಬಹುಮಾನ 2 ಲಕ್ಷ ರೂ. ಹಾಗೂ ರನ್ನರ್ ಅಪ್ ಗೆ 1 ಲಕ್ಷ ರೂ. ನಗದು ಬಹುಮಾನ.

ಫಿಡೆ ರೇಟಿಂಗ್ ಚೆಸ್: ಅಖಿಲ ಭಾರತ ಫಿಡೆ ರೇಟಿಂಗ್ ನ ಸ್ಪರ್ಧೆ ಇದಾಗಿದ್ದು, ಒಟ್ಟು ಬಹುಮಾನದ ಮೊತ್ತ 2 ಲಕ್ಷ ರೂ.

5 ಎ ಸೈಡ್ ಫುಟ್ಬಾಲ್: ವಿಜೇತ ತಂಡಕ್ಕೆ 1 ಲಕ್ಷ ರೂ. ಹಾಗೂ ರನ್ನರ್ ಅಪ್ ಗೆ 50,000 ರೂ. ನಗದು ಬಹುಮಾನ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

ಟೆನಿಸ್ ಮತ್ತು ಲೆದರ್ ಬಾಲ್ ಕ್ರಿಕೆಟ್:  ಕಿಶೋರ್ ಕುಮಾರ್  9886019595,  ಗೌತಮ್ ಶೆಟ್ಟಿ: 9845121498

torpedoescrickettenniball@gamil.comtorpedoescricket@gmail.com

ಬ್ಯಾಡ್ಮಿಂಟನ್:  ಗಣೇಶ್ ಕಾಮತ್ ಕುಂದಾಪುರ, 8884409014, ಗೌತಮ್ ಶೆಟ್ಟಿ: 9845121498

torpedoesshuttlebad@gmail.com

ಟೇಬಲ್ ಟೆನಿಸ್: ಅಶ್ವಿನ್ ಕುಮಾರ್ 9110846932, 9481675900, ಗೌತಮ್ ಶೆಟ್ಟಿ: 9845121498

torpedoestabletennis@gamil.com

ಚೆಸ್:  ಬಾಬು ಪೂಜಾರಿ 9448547958, 6364336158, ಗೌತಮ್ ಶೆಟ್ಟಿ: 9845121498

 torpedoeschess@gamil.com

5 ಎ ಸೈಡ್ ಫುಟ್ಬಾಲ್:  ಕಾರ್ತಿಕ್  ಕೆಪಿ 9591596816,  ಗೌತಮ್ ಶೆಟ್ಟಿ: 9845121498

torpedoesfoodball@gamil.com

Related Articles