ತಿಪಟೂರಿನಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿ

0
190
ಸ್ಪೋರ್ಟ್ಸ್ ಮೇಲ್ ವರದಿ

ಟೆನಿಸ್ ಬಾಲ್ ಕ್ರಿಕೆಟ್‌ಗೆ ತನ್ನದೇ ಆದ ಕೊಡುಗೆ ನೀಡಿರುವ ತುಮಕೂರ ಜಿಲ್ಲೆಯ ತಿಪಟೂರಿನ ಗಾಂಧೀನಗರದ ಫ್ರೆಂಡ್ಸ್  ಕ್ರಿಕೆಟ್ ಕ್ಲಬ್ ಈ ಬಾರಿ ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಿದೆ.  ಫೆಬ್ರವರಿ 16 ಮತ್ತು 17ರಂದು ಪಂದ್ಯಗಳು ನಡೆಯಲಿವೆ.  ಫೆಬ್ರವರಿ 25ರ ಒಳಗಾಗಿ ತಂಡಗಳು ತಮ್ಮ ಹೆಸರನ್ನು ನೋಂದಾಯಿಸತಕ್ಕದ್ದು.

ಬಿಝೆಡ್ ಕಪ್ ಹೆಸರಿನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಮೊದಲು ಹೆಸರು ನೋಂದಾಯಿಸಿದ 16 ತಂಡಗಳಿಗೆ ಮಾತ್ರ ಅವಕಾಶವಿರುತ್ತದೆ. ಪ್ರವೇಶ ಶುಲ್ಕ ರೂ. 20,000. ಮೊದಲ ಬಹುಮಾನ 2,00,000 ರೂ, ದ್ವಿತೀಯ ಬಹುಮಾನ 1,00,000 ರೂ, ತೃತೀಯ ಬಹುಮಾನ 10,000 ರೂ ಹಾಗೂ ಚತುರ್ಥ  ಬಹುಮಾನ 10,000 ರೂ. ಆಗಿರುತ್ತದೆ.  ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳಿಗೆ ನಗದು ಬಹುಮಾನದ ಜತೆಯಲ್ಲಿ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು. ಜತೆಯಲ್ಲಿ  ಪಂದ್ಯಶ್ರೇಷ್ಠ, ಉತ್ತಮ ಬ್ಯಾಟ್ಸ್‌ಮನ್, ಸರಣಿ ಶ್ರೇಷ್ಠ, ಬೆಸ್ಟ್ ಬೌಲರ್ , ಬೆಸ್ಟ್ ಆಲ್ರೌಂಡರ್  ಪ್ರಶಸ್ತಿ ನೀಡಲಾಗುವುದು.
ಹೆಚ್ಚಿನ ವಿವರಗಳಿಗೆ
ಇಮ್ತಿಯಾಜ್ ಪಾಷಾ- 9731508525, ಸಕೀರ್-9880909393, ಫಾರೂಕ್-9611851736