Monday, April 15, 2024

ರಾಜ್ಯ ಕ್ರಿಕೆಟ್ ಸಂಸ್ಥೆಯ ವತಿಯಿಂದ ಆಯ್ಕೆ ಟ್ರಯಲ್ಸ್

ಸ್ಪೋರ್ಟ್ಸ್ ಮೇಲ್ ವರದಿ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಂಗಳೂರು ವಲಯದ ವತಿಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 14,16 ಹಾಗೂ 19 ವರ್ಷ ವಯೋಮಿತಿಯ ತಂಡಗಳ ಆಯ್ಕೆಗಾಗಿ ಏಪ್ರಿಲ್ 15, 16 ಮತ್ತು 17ರಂದು ಆಯ್ಕೆ ಟ್ರಯಲ್ಸ್ ನಡೆಯಲಿದೆ.

ಶಿಬಿರದಲ್ಲಿ ಭಾಗವಹಿಸಲು ೨೦೦೫ರ ಸೆಪ್ಟಂಬರ್ 1 ಮತ್ತು ಅದರ ನಂತರ ಜನಿಸಿದವರು 14ರ ವಯೋಮಿತಿಯ ತಂಡದ ಆಯ್ಕೆಗಾಗಿ ಏಪ್ರಿಲ್ 15ರಂದು, 2003 ಸೆಪ್ಟಂಬರ್ 1 ಮತ್ತು ಅದರ ನಂತರ ಜನಿಸಿದವರು 16ರ ವಯೋಮಿತಿಯ ತಂಡದ ಆಯ್ಕೆಗಾಗಿ, ಏಪ್ರಿಲ್ 16ರಂದು, 2000ನೇ ಇಸವಿ ಸೆಪ್ಟಂಬರ್ 1 ಮತ್ತು ಅದರ ನಂತರ ಜನಿಸಿದವರು 19 ವರ್ಷ ವಯೋಮಿತಿಯ ತಂಡದ ಆಯ್ಕೆಗಾಗಿ ಏಪ್ರಿಲ್ 17ರಂದು ಆಯ್ಕೆಟ್ರಯಲ್ಸ್‌ಗೆ ಹಾಜರಾಗತಕ್ಕದ್ದು.
ಉಡುಪಿ ಜಿಲ್ಲೆಯ ಆಟಗಾರರು ಮಣಿಪಾಲದ ಎಂಡ್ ಪಾಯಿಂಟ್ ಕ್ರೀಡಾಂಗಣದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಆಟಗಾರರು ಮಂಗಳೂರಿನ ಸೇಂಟ್ ಅಲೋಶಿಯಸ್ ಶತಮಾನೋತ್ಸವ ಅಂಗಣದಲ್ಲಿ ಬೆಳಿಗ್ಗೆ 8 ಗಂಟೆಗೆ ಹಾಜರಿರತಕ್ಕದ್ದು. ಜನನ ಪ್ರಮಾಣ ಪತ್ರದ ಮೂಲ ಪ್ರತಿ ಹಾಗೂ ಜೆರಾಕ್ಸ್ ಪ್ರತಿಯೊಂದಿಗೆ ಜತೆಯಲ್ಲಿ ಆಟದ ಪರಿಕರಗಳೊಂದಿಗೆ ಹಾಜರಾಗುವಂತೆ ದಕ್ಷಿಣ ಕನ್ನಡ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಮಂಗಳೂರು ವಲಯ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಸಮನ್ವಯಕಾರರಾದ ಮನೋಹರ್ ಅಮೀನ್ ಅವರನ್ನು 9844041836 ಅಥವಾ 0824-4262233 ದೂರವಾಣಿ ಮೂಲಕ ಸಂಪರ್ಕಿಸಬಹುದು.

Related Articles