ಮೂರನೇ ಸ್ಥಾನಕ್ಕೆ ಜಿಗಿದ ಚೇತೇಶ್ವರ ಪೂಜಾರ

0
157
ದುಬೈ:

ಐಸಿಸಿ ಬಿಡುಗಡೆ ಮಾಡಿರುವ ನೂತನ ಟೆಸ್ಟ್  ರಾಂಕಿಂಗ್ ನಲ್ಲಿ  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಾಟಿಂಗ್ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿ  ಕಾಯ್ದುಕೊಂಡರೆ, ಚೇತೇಶ್ವರ ಪೂಜಾರ ಅಗ್ರ 5ರ ಸ್ಥಾನದೊಳಗೆ ಲಗ್ಗೆೆ ಇಟ್ಟಿದ್ದಾಾರೆ. ಇನ್ನೂ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರಿತ್ ಬುಮ್ರಾ 33ನೇ ಸ್ಥಾನಕ್ಕೇರುವ ಮೂಲಕ ವೃತ್ತಿ ಜೀವನದ ಶ್ರೇಷ್ಠ ರಾಂಕಿಂಗ್  ಪಡೆದಿದ್ದಾರೆ.

ನಾಯಕ ವಿರಾಟ್ ಕೊಹ್ಲಿ 920 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ನಲ್ಲಿ ಮುಕ್ತಾಯವಾದ ಮೊದಲ ಟೆಸ್ಟ್  ನಲ್ಲಿ ಎರಡೂ ಇನಿಂಗ್ಸ್  ಗಳಲ್ಲಿ ಕ್ರಮವಾಗಿ 123 ಹಾಗೂ 71 ರನ್‌ಗಳಿಸಿದ್ದ ಚೇತೇಶ್ವರ ಪೂಜಾರ ಜೋ ರೂಟ್ ಹಾಗೂ ಡೇವಿಡ್ ವಾರ್ನರ್ ಅವರನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ರೂಟ್ ಹಾಗೂ ವಾರ್ನರ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾಾನಕ್ಕಿಳಿದಿದ್ದಾರೆ. ಆಸ್ಟ್ರೇಲಿಯಾ ತಂಡದಿಂದ ನಿಷೇದಕ್ಕೊಳಗಾಗಿರುವ ಸ್ಟೀವ್ ಸ್ಮಿತ್ ಅವರು ಮೂರನೇ ಸ್ಥಾನದಲ್ಲಿದ್ದಾರೆ.
ಭಾರತದ ವೇಗಿ ಜಸ್ಪ್ರೀತ್  ಬುಮ್ರಾ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಮೊದಲ ಇನಿಂಗ್ಸ್  ನಲ್ಲಿ 47ಕ್ಕೆೆ 3 ಹಾಗೂ ಎರಡನೇ ಇನಿಂಗ್ಸ್  ನಲ್ಲಿ  68ಕ್ಕೆೆ 3 ವಿಕೆಟ್ ಪಡೆದಿದ್ದರು. ಹಾಗಾಗಿ, ಅವರು ಬೌಲಿಂಗ್ ವಿಭಾಗದಲ್ಲಿ 33ನೇ ಸ್ಥಾನಕ್ಕೇರುವ ಮೂಲಕ ವೃತ್ತಿ ಜೀವನದ ಶ್ರೇಷ್ಠ ರಾಂಕಿಂಗ್  ಪಡೆದಿದ್ದಾರೆ.
ಕಳೆದ ವಾರ ಪಾಕಿಸ್ತಾನದ ವಿರುದ್ಧ ಅಂತಿಮ ಪಂದ್ಯದಲ್ಲಿ  ಕೇನ್ ವಿಲಿಯಮ್ಸನ್ ಪ್ರಥಮ ಇನಿಂಗ್ಸ್   ನಲ್ಲಿ 89 ಹಾಗೂ ದ್ವಿತೀಯ ಇನಿಂಗ್ಸ್  ನಲ್ಲಿ 139 ರನ್ ಗಳಿಸಿದ್ದರು. ಇವರ ಅಮೋಘ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ 123 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಅವರು ಒಟ್ಟು 900 ಅಂಕಗಳೊಂದಿಗೆ ಐಸಿಸಿ ಟೆಸ್ಟ್  ರ್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನಕ್ಕೇರಿದರು. ಭಾರತ ತಂಡದ ಉಪ ನಾಯಕ ಅಜಿಂಕ್ಯಾ ರಹಾನೆ ಎರಡು ಸ್ಥಾನಗಳು ಜಿಗಿಯುವ ಮೂಲಕ 17ನೇ ಸ್ಥಾನಕ್ಕೇರಿದರು.