Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ರಾಘವೇಂದ್ರ ಮಟಪಾಡಿ:ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಕಿವೀಸ್ ನ ಸ್ಫೋಟಕ ಆರಂಭಿಕ ಆಟಗಾರ ಕಪ್ತಾನ “ಬ್ರೆಂಡನ್ ಮೆಕಲಮ್” ರೂಪ,ಬ್ಯಾಟಿಂಗ್ ಶೈಲಿಯ ಚುರುಕಿನ ಗೂಟರಕ್ಷಕ “ರಾಘು  ಮಟಪಾಡಿ”.ಅಂದಿನ ಜಿಲ್ಲಾ,ರಾಜ್ಯಮಟ್ಟದ ತಂಡವಾದ “ಖುಷಿ ಅಮರ್” ತಂಡದ ಮಾಜಿ ಆಟಗಾರ,ಸ್ಪೋಟಕ ದಾಂಡಿಗ,ಗೂಟರಕ್ಷಕ ಹಾಗೂ ಅರೆಕಾಲಿಕ ಯಶಸ್ವಿ ಆಫ್ ಸ್ಪಿನ್ನರ್.

ತನ್ನ 15 ನೇ ವಯಸ್ಸಿನಿಂದ ಕಾರ್ಯಕ್ರಮ ನಿರೂಪಣೆ,ಗ್ರಾಮೀಣ ಹಾಗೂ ತಾಲೂಕು ಮಟ್ಟದ ಪಂದ್ಯಾಟಗಳಲ್ಲಿ ವೀಕ್ಷಕ ವಿವರಣೆಯಲ್ಲಿ ಗುರುತಿಸಿಕೊಂಡಿದ್ದ ಇವರು ಪಾದರಸದಂತಹ ಚುರುಕಿನ ವ್ಯಕ್ತಿತ್ವ,ಅದ್ಭುತ ಕರಕುಶಲ (ಸ್ವರ್ಣ) ಕರ್ಮಿ.
ಇತ್ತೀಚಿನ‌ ದಿನಗಳಲ್ಲಿ ಜಿಲ್ಲಾ ಮಟ್ಟದ ಬಹುತೇಕ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಇವರು,
ಬೆಂಗಳೂರಿನ ಹುಳಿ ಮಾವು “ನರೇಂದ್ರ ಮೋದಿ ಕಪ್” ಹಾಗೂ “ಕಾರ್ತಿಕ್  ಜಾಗ್ವರ್ ಟ್ರೋಫಿ” ಯಂತಹ
ಪ್ರತಿಷ್ಠಿತ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಯಶಸ್ವಿ ವೀಕ್ಷಕವಿವರಣೆ ನೀಡಿದ ಅನುಭವ ಹೊಂದಿರುವ ಶುಧ್ಧ ಕನ್ನಡದ ಬಹುಮುಖ ಪ್ರತಿಭೆ.
 “ಆಟಿಡೊಂಜಿ ದಿನ,ಗಣೇಶೋತ್ಸವ ದಂತಹ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳು,ವಿಶ್ವಕರ್ಮ ಸಮಾಜದ ಪಂದ್ಯಾಕೂಟಗಳ ನಿರೂಪಣೆ ಹಾಗೂ ಶುಭ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಡುವ ಸ್ಪುರದ್ರೂಪಿ ನಿರೂಪಕ.” ರಾಘವೇಂದ್ರ ಮಟಪಾಡಿ” ಇವರಿಗೆ
www.wordpress-451521-1958220.cloudwaysapps.com  ವತಿಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ರಾಜ್ಯಮಟ್ಟದ ಅಗ್ರಗಣ್ಯ ವೀಕ್ಷಕ ವಿವರಣೆಕಾರರ ಸಾಲಿನಲ್ಲಿ ನಿಮ್ಮ ಹೆಸರು ಗುರುತಿಸುವಂತಾಗಲಿ.
ಸುವರ್ಣಾವಕಾಶ ನಿಮ್ಮನ್ನು ಹುಡುಕಿಕೊಂಡು ಬರಲಿ.ಶುಭವಾಗಲಿ.

administrator