Tuesday, March 19, 2024

ಬಜಿನ್‌ಗೆ ಅತ್ಯುತ್ತಮ ತರಬೇತುದಾರ ಪ್ರಶಸ್ತಿ

ದೆಹಲಿ: 

ವಿಶ್ವ ಅಗ್ರ ಆಟಗಾರ್ತಿ  ನವೋಮಿ ಓಸಾಕ ಅವರ ತರಬೇತುದಾರ ಸಾಸ್ಚ ಬಜಿನ್ ಅವರು ಮಹಿಳಾ ಟೆನಿಸ್ ಅಸೋಸಿಯೇಷನ್ 2018ರ ವರ್ಷದ ಅತ್ಯುತ್ತಮ ತರಬೇತುದಾರ ಪ್ರಶಸ್ತಿಗೆ ಭಾಜನರಾದರು.

ಯುಎಸ್ ಓಪನ್ ಜಯ ಸಾಧಿಸಿದ್ದ ಜಪಾನಿನ 21 ರ ಪ್ರಾಾಯದ ನವೋಮಿ ಓಸಾಕ ಅವರ ಹಿಂದೆ ಕೋಚ್ ಬಜಿನ್ ಅವರ ಪರಿಶ್ರಮವಿದೆ. ಡಬ್ಲ್ಯುಟಿಎ ಅತ್ಯುತ್ತಮ ತರಬೇತುದಾರ ಪ್ರಶಸ್ತಿ ಪಡೆದ ಬಜಿನ್ ಅವರಿಗೆ ಮಹಿಳಾ ಟೆನಿಸ್ ಅಸೋಸಿಯೇಷನ್ ಟ್ವಿಟ್ ಮೂಲಕ ಶುಭಾಶಯ ತಿಳಿಸಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಪ್ರತಿಕ್ರಿಯಿಸಿದ ಬಜಿನ್, ಈ ಪುರಸ್ಕಾರ ಸಿಕ್ಕಿರುವುದಕ್ಕೆೆ ಮಾತು ಬರುತ್ತಿಲ್ಲ. ಈ ಸಾಧನೆಗೆ ನನ್ನ ಜತೆ ನಿರ್ವಹಿಸಿದ್ದ ಎಲ್ಲರಿಗೂ ಸಲ್ಲುತ್ತದೆ. ವಿಶೇಷವಾಗಿ ನವೋಮಿ ಓಸಾಕ ಅವರ ಕಠಿಣ ಪರಿಶ್ರಮ ಅತಿ ಮುಖ್ಯ. ಒಳ್ಳೆೆಯ ವಿದ್ಯಾರ್ಥಿಗಳು ಸಿಕ್ಕಾಗ ತರಬೇತಿ ನೀಡುವುದು ಸುಲಭ ಎಂದ ಅವರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

Related Articles