ಸೌರಾಷ್ಟ್ರದ ವಿರುದ್ಧ ಕರ್ನಾಟಕ ಯಾಕೆ ಸೋತಿತು ಗೊತ್ತೇ?
ಸ್ಪೋರ್ಟ್ಸ್ ಮೇಲ್ ವರದಿ
ಈ ಋತುವಿನ ರಣಜಿ ಪಂದ್ಯಗಳಲ್ಲಿ ಕರ್ನಾಟಕ ತಂಡದ ಯುವ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಡ್ರಾ ಹಾಗೂ ಒಂದು ಜಯ ಕಂಡಿರುವ ವಿನಯ್ ಕುಮಾರ್ ಪಡೆ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಸೋಲುತ್ತದೆ, ಅದರಲ್ಲೂ ಮೂರೇ ದಿನಗಳಲ್ಲಿ ಪಂದ್ಯ ಮುಗಿಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
ಪಿಚ್ ಯಾವುದೇ ರೀತಿ ಇದ್ದರೂ ಅದು ಎರಡು ತಂಡಗಳಿಗೂ ಅನ್ವಯಿಸುತ್ತದೆ. ಆದರೆ ಕರ್ನಾಟಕಕ್ಕೇ ಯಾಕೆ ನಷ್ಟವಾಯಿತು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ ಪಂದ್ಯದ ಮೊದಲ ಓವರ್ ಸ್ಪಿನ್ ಬೌಲರ್‌ಗೆ ನೀಡಿದಾಗ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಉದ್ದೇಶ ಸ್ಪಷ್ಟವಾಗಿತ್ತು. ಅಲ್ಲಿಯ ಕ್ಯೂರೇಟರ್ ಅವರ ಯೋಜನೆಗೆ ತಕ್ಕಂತೆ ಪಿಚ್ ನಿರ್ಮಿಸಲಾಗಿದೆ ಎಂಬುದು ಸ್ಪಷ್ಟ. ಈ ಬಗ್ಗೆ ಅಸಮಾ‘ಾನಗೊಂಡಿರುವ ಕರ್ನಾಟಕ ಕ್ರಿಕೆಟ್ ಸಂಸ್ಥೆ ಪಿಚ್ ಪ್ರಥಮ ದರ್ಜೆ ಕ್ರಿಕೆಟ್ ನೆಡಸಲು ಯೋಗ್ಯವಾಗಿಲ್ಲ ಎಂದು ಬಿಸಿಸಿಐಗೆ ದೂರು ನೀಡಿದೆ.
ಪಿಚ್ ಆಡಲು ಯೋಗ್ಯವಾಗಿಲ್ಲ. ಸೌರಾಷ್ಟ್ರ ತಂಡದಲ್ಲಿ ಮ‘್ಯಮ ವೇಗಿಗಳಿಲ್ಲ, ಈ ಕಾರಣಕ್ಕಾಗಿ ಅವರು ಸ್ಪಿನ್ ಬೌಲರ್‌ಗಳನ್ನೇ ಆಡಿಸುತ್ತಿದ್ದರು. ಅದಕ್ಕೆ ಅನುಕೂಲವಾದ ಪಿಚ್ ಕೂಡ ನಿರ್ಮಿಸಿದ್ದಾರೆ. ಮೊದಲ ಓವರ್ ಸ್ಪಿನ್ ಬೌಲರ್‌ಗೆ ಕೊಟ್ಟಾಗಲೇ ಅವರ ಉದ್ದೇಶ ಸ್ಪಷ್ಟವಾಗಿತ್ತು. ಮೊದಲ ದಿನವೇ ನಾವು ಬಿಸಿಸಿಐಗೆ ದೂರು ನೀಡಿದ್ದೇವೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸುಧಾಕರ ರಾವ್ ಹೇಳಿದ್ದಾರೆ.
ಒಂದು ದಿನದಲ್ಲಿ ಇಪ್ಪತ್ತು ವಿಕೆಟ್ ಉರುಳಿತ್ತು. ಕಮಲೇಶ್ ಮಕ್ವಾನ ಹಾಗೂ ಧರ್ಮೇಂದ್ರ ಸಿನ್ಹಾ ಜಡೇಜಾ ಅನುಕ್ರಮವಾಗಿ ಮತ್ತು ೧೧ವಿಕೆಟ್ ಗಳಿಸಿದರು.ಕರ್ನಾಟಕದ ಪರ ಜೆ. ಸುಚಿತ್ ೧೦ ವಿಕೆಟ್ ಗಳಿಸಿದರು. ದ್ವಿತೀಯ ಇನಿಂಗ್ಸ್‌ನಲ್ಲಿ ಕರ್ನಾಟಕಕ್ಕೆ ಜಯ ಗಳಿಸಲು ೧೭೯ ರನ್ ಗುರಿ ತಲುಪಬೇಕಾಗಿತ್ತು. ಆದರೆ ಕ್ರಿಕೆಟ್‌ಗೆ ಸೂಕ್ತ ಎನಿಸದ ಹಾಗೂ ಅನಿರೀಕ್ಷಿತ ಬೌನ್ಸ್‌ಗೆ ಎಡೆ ಮಾಡಿಕೊಡುತ್ತಿದ್ದ ಪಿಚ್‌ನಲ್ಲಿ ಈ ಮೊತ್ತವನ್ನು ತಲಪುವುದು ನಿಜವಾಗಿಯೂ ಕಷ್ಟದ ಕೆಲಸ. ಅದೇ ರೀತಿ ರಾಜ್ಯ ತಂಡ ಕೇವಲ ೯೧ ರನ್‌ಗೆ ಸರ್ವ ಪತನ ಕಂಡಿತು. ಋತುವಿನ ಮೊದಲ ಸೋನು‘ವಿಸಿತು.
ಯಾರೂ ಸಂಭಾವಿತರಲ್ಲ!
ಮನೆಯಂಗಣದಲ್ಲಿ ಪಂದ್ಯ ನಡೆಯುವುದಿದ್ದರೆ ಅಲ್ಲಿಯ ಪಿಚ್ ಕ್ಯುರೇಟರ್ ಆತಿಥೇಯ ತಂಡಕ್ಕೆ ಅನುಕೂಲವಾಗುವ ರೀತಿಯಲ್ಲಿ ಪಿಚ್ ನಿರ್ಮಿಸುವುದು ಸಹಜ. ಇದು ಕ್ಯುರೇಟರ್‌ಗಳ ಮುಖ್ಯ ಉದ್ದೇಶವಾಗಿರುತ್ತದೆ. ಆದರೆ ಆಡಲು ಅಸಾ‘್ಯವಾದ ಪಿಚ್ ನಿರ್ಮಿಸುವುದು ಕ್ರೀಡಾ ಸ್ಫೂರ್ತಿಗೆ ವಿರೋ‘ವಾದುದು. ‘ಾರತದ ಕ್ರಿಕೆಟ್ ತಂಡಕ್ಕೆ ಸ್ಪಿನ್ ಬೌಲಿಂಗ್ ಪ್ರಮುಖ ಅಸ್ತ್ರ. ಯಾವುದೇ ವಿದೇಶ ತಂಡಗಳು ಬಂದರೂ ಇಲ್ಲಿ ಸೋಲುವುದು ಸ್ಪಿನ್ ಬೌಲಿಂಗ್‌ಗೆ ಸಿಲುಕಿ. ಆದ್ದರಿಂದ ಮನೆಯಂಗಣದ ಪಿಚ್‌ನ ಮೇಲೆ ಅಧಿಕಾರ ಇರುವುದು ಆ ಕ್ರೀಡಾಂಗಣ ಹೊಂದಿರುವ ಕ್ರಿಕೆಟ್ ಸಂಸ್ಥೆಯ ಕ್ಯುರೇಟರ್‌ಗೆ. ಜಗತ್ತಿನ ಇತರ ದೇಶಗಳ ತಂಡಗಳು ‘ಾರತಕ್ಕೆ ಆಗಮಿಸುವಾಗ ಇಲ್ಲಿನ ಕ್ಯುರೇಟರ್‌ಗಳು ನಮ್ಮ ತಂಡಕ್ಕೆ ಅನುಕೂಲವಾಗುವ ರೀತಿಯಲ್ಲಿ ಪಿಚ್ ಸಿದ್ಧಗೊಳಿಸುತ್ತಾರೆ. ಈ ರೀತಿಯ ಪಿಚ್ ಆಟ ಕ್ರಿಕೆಟ್‌ನಲ್ಲಿ ಸಮಾನ್ಯವಾಗಿರುತ್ತದೆ. ನರೇಂದ್ರ ಹಿರ್ವಾನಿ ಚೊಚ್ಚಲ ಪಂದ್ಯದಲ್ಲೇ ೧೬ ವಿಕೆಟ್ ಗಳಿಸಿದಾಗ ವೆಸ್ಟ್ ಇಂಡೀಸ್‌ನ ಅಂದಿನ ನಾಯಕ ವಿವಿಎನ್ ರಿಚರ್ಡ್ಸ್, ‘ನಮ್ಮಲ್ಲಿಗೆ ಬನ್ನಿ ತೋರಿಸುತ್ತೇವೆ,‘ ಹೇಳಿರುವುದರಲ್ಲಿ ನಾವು ಯಾವ ರೀತಿಯಲ್ಲಿ ಪಿಚ್ ನಿರ್ಮಿಸಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿದೆ.