Friday, April 19, 2024

ಕ್ವಾರ್ಟರ್ ಫೈನಲ್ ತಲುಪಿದ ಶ್ರೀಕಾಂತ್, ಸಮೀರ್

ಹೈದರಾಬಾದ್:

ವಿಶ್ವದ ಮಾಜಿ ಅಗ್ರ ಆಟಗಾರ ಕಿಡಂಬಿ ಶ್ರೀಕಾಂತ್ ಹಾಗೂ ಸಮೀರ್ ವರ್ಮಾ ಅವರು ಹಾಂಕಾಂಗ್ ಓಪನ್ ಪುರುಷರ ಸಿಂಗಲ್ಸ್ ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಆದರೆ, ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಅವರು ಸೋಲುವ ಮೂಲಕ ನಿರಾಸೆಯಿಂದ ಟೂರ್ನಿಯಿಂದ ಹೊರನಡೆದರು.

ಪಿ.ವಿ.ಸಿಂಧು ಅವರು ಟೂರ್ನಿಯ ಎಲ್ಲ ಪಂದ್ಯಗಳಲ್ಲಿ ಅಮೊಘ ಆಟವಾಡುವ ಮೂಲಕ ನಿರೀಕ್ಷೆ ಮೂಡಿಸಿದ್ದರು. ಆದರೆ, ವಿಶ್ವದ ಎರಡನೇ ಶ್ರೇಯಾಂಕದ ಕೊರಿಯಾದ ಜಿ ಹ್ಯೂನ್ ಸುಂಗ್ ಅವರ ವಿರುದ್ಧ 24-26 20-22 ಅಂತರದಲ್ಲಿ ಸೋಲುವ ಮೂಲಕ ಟೂರ್ನಿಯಲ್ಲಿ ತಮ್ಮ ಅಭಿಯಾನ ಮುಗಿಸಿದರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಅವರು ನಮ್ಮ ದೇಶದವರೆ ಆದ ಎಚ್.ಎಸ್.ಪ್ರಣಯ್ ವಿರುದ್ಧ 18-21, 30-29, 21-18 ಅಂತರದಲ್ಲಿ ಗೆಲುವಿನ ನಗೆ ಬೀರಿದರು. ಆ ಮೂಲಕ ಅಂತಿಮ ಎಂಟರ ಘಟ್ಟಕ್ಕೆ ತಲುಪಿದರು.
ಇನ್ನೂ, ಮತ್ತೊಬ್ಬ ಭಾರತದ ಆಟಗಾರ ಸಮೀರ್ ವರ್ಮಾ ಅವರಿಗೆ ವಾಕ್ ಓವರ್ ಸಿಕ್ಕ ಪರಿಣಾಮ ಅವರು ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಅಂತಿಮ ಎಂಟರ ಘಟ್ಟದಲ್ಲಿ ಸಮೀರ್ ಅವರು ಹಾಂಕಾಂಗ್‍ನ ಲೀ ಚೇಕ್ ಯು ಅವರ ವಿರುದ್ಧ ಸೆಣಸಲಿದ್ದಾರೆ

Related Articles