Friday, October 4, 2024

ಶ್ರೇಯಸ್, ಪಡಿಕ್ಕಲ್ ಅಮೋಘ ಬ್ಯಾಟಿಮಗ್: ಬೃಹತ್ ಮೊತ್ತದತ್ತ ಕರ್ನಾಟಕ

ಸೂರತ್ :

ಶ್ರೇಯಸ್ ಗೋಪಾಲ್(93 ರನ್) ಹಾಗೂ ದೇವದತ್ ಪಡಿಕ್ಕಲ್(74) ಅವರ ಸೊಗಸಾದ ಅರ್ಧ ಶತಕಗಳ ಬಲದಿಂದ ಕರ್ನಾಟಕ ರಣಜಿ ಟ್ರೋಫಿ ಎಲೈಟ್ ಎ ಗುಂಪಿನ 6ನೇ ಸುತ್ತಿನ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಬೃಹತ್ ಮೊತ್ತದತ್ತ ದಾಪುಗಾಲು ಇಟ್ಟಿದೆ. 132 ರನ್ ಮುನ್ನಡೆ ಸಾಧಿಸಿದೆ.

ಇಲ್ಲಿನ ಲಾಲಾಭಾಯಿ ಕ್ರೀಡಾಂಗಣದಲ್ಲಿ 2 ವಿಕೆಟ್‌ ಕಳೆದುಕೊಂಡು 45 ರನ್‌ಗಳಿಂದ ಪ್ರಥಮ ಇನಿಂಗ್ಸ್‌ ಮುಂದುವರಿಸಿದ ಕರ್ನಾಟಕಕ್ಕೆ ದೇವದತ್‌ ಪಡಿಕ್ಕಲ್‌ ಹಾಗೂ ರವಿಕುಮಾರ್‌ ಸಮರ್ಥ್ ಜೋಡಿ ಅಲ್ಪ ಚೇತರಿಕೆ ನೀಡಿತು. ತಾಳ್ಮೆಯ ಬ್ಯಾಟಿಂಗ್‌ ಮಾಡಿದ ಈ ಜೋಡಿ ಮುರಿಯದ 3ನೇ ವಿಕೆಟ್‌ಗೆ 63 ರನ್ ದಾಖಲಿಸುವ ಮೂಲಕ ಕರ್ನಾಟಕದ ಮೊತ್ತ 100ರ ಗಡಿದಾಟಲು ನೆರವಾಯಿತು.
ತಾಳ್ಮೆಯ ಬ್ಯಾಟಿಂಗ್‌ ಮಾಡುತ್ತಿದ್ದ ರವಿಕುಮಾರ್‌ ಸಮರ್ಥ್ 71 ಎಸೆತಗಳಲ್ಲಿ 25 ರನ್‌ ಗಳಿಸಿ ಆಡುವಾಗ ಅಕ್ಷರ್‌ ಪಟೇಲ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ನಂತರ ಕ್ರೀಸ್‌ಗೆ ಬಂದ ಕೆ.ಸಿದ್ದಾರ್ಥ್‌ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಆಡಿದ 55 ಎಸೆತಗಳಲ್ಲಿ ಕೇವಲ 17 ರನ್‌ ಗಳಿಸಿ ಪಿಯೂಷ್‌ ಚಾವ್ಲಾ ಎಸೆತದಲ್ಲಿ ಪ್ಯಾಡ್‌ ಮೇಲೆ ಚೆಂಡನ್ನು ಹಾಕಿಕೊಂಡರು.
ಒಂದು ತುದಿಯಲ್ಲಿ ಯಾರೂ ಹೆಚ್ಚು ಹೊತ್ತು ಸಾಥ್‌ ನೀಡದೆ ಇದ್ದರೂ ಏಕಾಂಗಿ ಹೋರಾಟ ನಡೆಸಿದ ದೇವದತ್‌ ಪಡಿಕಲ್‌ ಗುಜರಾತ್‌ ಬೌಲರ್‌ಗಳನ್ನು ಸಮರ್ಥವಾಗಿ ದಂಡಿಸಿದರು.
 ಪಡಿಕ್ಕಲ್ 130 ಎಸೆತಗಳಲ್ಲಿ 10 ಬೌಂಡರಿಯೊಂದಿಗೆ ಒಟ್ಟು 74 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ನಂತರ ಅವರು, ಅಕ್ಷರ್ ಪಟೇಲ್‍ಗೆ ಕ್ಲೀನ್ ಬೌಲ್ಡ್ ಆದರು.
ನಂತರ ಬ್ಯಾಟಿಂಗ್‍ಗೆ ಇಳಿದ ಶ್ರೇಯಸ್ ಗೋಪಾಲ್ ಗುಜರಾತ್ ಬೌಲರ್ ಗಳನ್ನು ಬಲವಾಗಿ ದಂಡಿಸಿದರು. ಆಡಿದ 115 ಎಸೆತಗಳಲ್ಲಿ 15 ಬೌಂಡರಿಯೊಂದಿಗೆ ಒಟ್ಟು 93 ರನ್ ದಾಖಲಿಸಿದರು. ಆದರೆ, ಶತಕದಂಚಿನಲ್ಲಿ ಅರ್ಜಾನ್ ಎಸೆತದಲ್ಲಿ ಧೃವ ರಾವಲ್‍ಗೆ ಕ್ಯಾಚ್ ನಿಡಿ ನಿರಾಸೆಯಿಂದ ಪೆವಿಲಿನ್‍ಗೆ ಹೆಜ್ಜೆ ಹಾಕಿದರು. ನಂತರ ಕೆ.ಗೌತಮ್ 22 ರನ್ ಗಳಿಸಿ ಔಟ್ ಆದರು.

Related Articles