Thursday, September 12, 2024

ಬಸಿಸಿಐಗೆ ನಾಲ್ಕು ವಾರಗಳು ನಿರಾಳ

ದೆಹಲಿ:

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಯನ್ನು ಮಾಹಿತಿ ಹಕ್ಕು ಕಾಯ್ದೆ(ಆರ್.ಟಿ.ಇ) ಅಡಿ ಜಾರಿ ತರಬೇಕು ಎಂದು ಕೋರಿದ್ದ ಕೇಂದ್ರ ಮಾಹಿತಿ ಆಯೋಗ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈ ಕೋರ್ಟ್ ತೀರ್ಪನ್ನು ನಾಲ್ಕು ವಾರಗಳ ಕಾಲ ತಡೆ ಹಿಡಿದಿದೆ. ಹಾಗಾಗಿ, ಬಿಸಿಸಿಐ ಗೆ ಸ್ವಲ್ಪ ನಿಟ್ಟುಸಿರು ಬಿಟ್ಟಂತಾಗಿದೆ.

ಬಸಿಸಿಐಯನ್ನು ಆರ್.ಟಿ.ಐ ವ್ಯಾಪ್ತಿಗೆ ತರಲು ಹೇಗೆ ಸಾಧ್ಯ?  ಒಂದು ವೇಳೆ ಆರ್.ಟಿ.ಐ ವ್ಯಾಪ್ತಿಗೆ ತಂದರೂ ಬಿಸಿಸಿಐ ಕಾರ್ಯಗಳಿಗೆ ಅಡೆತಡೆಯಾಗಲಿದೆ. ಭಾರತ ತಂಡವನ್ನು ಆಯ್ಕೆ ಮಾಡಲು ಯಾವ ಪ್ರಾಧಿಕಾರಕ್ಕೆ ಅಧಿಕಾರ ನೀಡಿದೆ? ತಂಡದ ಆಟಗಾರರು ತ್ರಿವರ್ಣ ಬಣ್ಣದ ಬಟ್ಟೆ ಹಾಗೂ ಕ್ಯಾಪ್ ಧರಿಸಲು ಯಾರು ಹೇಳಿದ್ದಾರೆ? ಇವುಗಳು ನ್ಯಾಯಯುತವಾಗಿ ನಡೆಯುತ್ತಿರುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಬಿಸಿಸಿಐಗೆ ಯಾವುದೇ ಸರಕಾರಿ ಸಂಸ್ಥೆಯಿಂದಾಗಲಿ ಅಥವಾ ಪ್ರಾಧಿಕರದಿಂದಾಗಲಿ ದೇಣಿಗೆ ಸಿಗುತ್ತಿಲ್ಲ. ಹಾಗಾಗಿ, ಬಿಸಿಸಿಐ ಸಂಸ್ಥೆಯನ್ನು ಆರ್.ಟಿ.ಐ ವ್ಯಾಪ್ತಿಗೆ ತರುವುದು ಒಳಿತಲ್ಲ ಎಂದು ಬಿಸಿಸಿಐ ಪರ ವಕೀಲ ಪಿ. ಆರ್. ರಾಮನ್ ನ್ಯಾಯಾಧೀಶರ ಮುಂದೆ ವಾದಿಸಿದರು.

Related Articles